ಕೊಡಗು: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕೊಡಗು ಜಿಲ್ಲೆಗೆ ರಸ್ತೆ ಕಾಮಗಾರಿಗಳಿಗೆ 78 ಕೋಟಿ ರೂ. ಬಿಡುಗಡೆಯಾಗಿದೆ. ಈ ಹಿನ್ನೆಲೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ರಸ್ತೆ ಕಾಮಗಾರಿಗಳಿಗೆ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಚಾಲನೆ ನೀಡಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಲಮುರಿ-ಹೊದವಾಡ ಶಾಲೆ ಮಾರ್ಗದ ಹೊದ್ದೂರು ರಸ್ತೆ ಅಭಿವೃದ್ಧಿ, ಸುಂಟಿಕೊಪ್ಪ ಅಯ್ಯಪ್ಪ ದೇವಸ್ಥಾನದಿಂದ ಕಾನ್‍ಬೈಲು-ಬೈಚನಹಳ್ಳಿ- ನಾಕೂರು ಶಿರಂಗಾಲ ಮಾರ್ಗ ರಸ್ತೆ, ಅಂದಗೋವೆ-ಮೆಟ್ನಳ್ಳ-ಕಂಬಿಬಾಣೆ ರಸ್ತೆ, ಕರ್ಕಳ್ಳಿಯಿಂದ ಎಸ್‍ಎಚ್ ರಸ್ತೆ-ಕುಶಾಲನಗರ ಮಾರ್ಗದ ರಸ್ತೆ, ಸುಂಟಿಯಿಂದ-ಬಸವನಕೊಪ್ಪ-ಶಾಂತವೇರಿ-ಗೋಂದಳ್ಳಿ ಮಾರ್ಗದ ರಸ್ತೆ, ಒಂದನೇ ಕೂಡ್ಲೂರಿನಿಂದ ಹಂಡ್ಲಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಬಲಮುರಿಯಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಪ್ರತೀ ತಾಲೂಕಿನಲ್ಲಿ 5 ಕಡೆಗಳಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ಕೇಂದ್ರದಿಂದ ಶೇ.60 ರಷ್ಟು ಹಾಗೆಯೇ ರಾಜ್ಯದಿಂದ ಶೇ.40 ರಷ್ಟು ಸಂಯುಕ್ತವಾಗಿ ರಸ್ತೆ ಕಾಮಗಾರಿಗೆ ಹಣ ವಿನಿಯೋಗಿಸಲಾಗುತ್ತದೆ ಎಂದರು.