ETV Bharat / state

ಮೊಸರಲ್ಲಿ ಕಲ್ಲನ್ನು ಹುಡುಕಬಾರದು: ಸಿದ್ದರಾಮಯ್ಯಗೆ ಸಚಿವ ಸೋಮಣ್ಣ ತಿರುಗೇಟು - ಸಚಿವ ವಿ.ಸೋಮಣ್ಣ ಲೆಟೆಸ್ಟ್​ ನ್ಯೂಸ್​

ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯಹಾರ ನಡೆದಿದೆ ಎನ್ನುವ ವಿರೋಧ ಪಕ್ಷದವರ ಆರೋಪಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿರುಗೇಟು ನೀಡಿದ್ದಾರೆ.

Minister Somanna outrage against Siddaramaiah
ಮೊಸರಲ್ಲಿ ಕಲ್ಲನ್ನು ಹುಡುಕಬಾರದು:ಸಿದ್ದರಾಮಯ್ಯಗೆ ಸೋಮಣ್ಣ ತಿರುಗೇಟು
author img

By

Published : Jul 27, 2020, 3:24 PM IST

ಮಡಿಕೇರಿ: ಸಂದಿಗ್ಧ ಪರಿಸ್ಥಿತಿಯಲ್ಲಿ ಮೊಸರಲ್ಲಿ ಕಲ್ಲನ್ನು ಹುಡುಕುವ ಕೆಲಸವನ್ನು ಮಾಡಬಾರದು ಎಂದು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯಹಾರ ನಡೆದಿದೆ ಎನ್ನುವ ವಿರೋಧ ಪಕ್ಷದವರ ಆರೋಪಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿರುಗೇಟು ನೀಡಿದ್ದಾರೆ.

ಮೊಸರಲ್ಲಿ ಕಲ್ಲನ್ನು ಹುಡುಕಬಾರದು: ಸಿದ್ದರಾಮಯ್ಯಗೆ ಸೋಮಣ್ಣ ತಿರುಗೇಟು

ಸಿಎಂ ಯಡಿಯೂರಪ್ಪ ಅವರ ಸರ್ಕಾರ ತೆರೆದ ಪುಸ್ತಕ ಇದ್ದಂತೆ. ಇಲ್ಲಿ ಗಾಸಿಪ್​ಗಳಿಗೆ ಅವಕಾಶವಿಲ್ಲ. ಭ್ರಷ್ಟಾಚಾರ ನಡೆದಿದ್ದರೆ ಯಾರು ಬೇಕಾದರೂ ಪರಿಶೀಲಿಸಬಹುದು. ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪಕ್ಕೆ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಆರ್​.ಅಶೋಕ್​ ಸೇರಿದಂತೆ ಇತರರು ಉತ್ತರ ನೀಡಿದ್ದಾರೆ. ಕೊರೊನಾದಂತಹ ಆತಂಕದ ಸ್ಥಿತಿಯಲ್ಲಿ ಜನತೆ ಸಂಕಷ್ಟದಲ್ಲಿದ್ದಾರೆ. ಇನ್ನೇನು ಅಧಿವೇಶನ ಶುರುವಾಗಲಿದ್ದು, ಅದರಲ್ಲಿ ಚರ್ಚಿಸಿ ಎಂದರು.

ಸಿದ್ದರಾಮಯ್ಯ ಅವರು ಇಷ್ಟಕ್ಕೆ ಇತಿಶ್ರೀ ಹಾಡಬೇಕು. ಇಷ್ಟಾದ ಮೇಲೂ ಅವರು ಮಾತನಾಡಿದ್ರೆ ಅವರು ದಡ್ಡರೋ ಅಥವಾ ಬುದ್ಧಿವಂತರೋ ತಿಳಿಯುವುದಿಲ್ಲ ಎಂದು ವ್ಯಂಗ್ಯವಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.