ETV Bharat / state

ಕೊಡಗಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ: ತ್ರಿವೇಣಿ ಸಂಗಮದಲ್ಲಿ ಪೊಲಿಂಕಾನ ಪೂಜೆ - today rain news

ಪ್ರತಿ ವರ್ಷ ಕೊಡಗಿನಲ್ಲಿ ಉತ್ತಮ ಮಳೆ ಆಗುತ್ತಿತ್ತು. ಆದ್ರೆ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಇನ್ನಾದರು ಉತ್ತಮ ಮಳೆಯಾಗಿ ಜೀವರಾಶಿಗಳಿಗೆ ಒಳಿತಾಗಲಿ ಎಂದು ಮಡಿಕೇರಿ ತಾಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಭಗಂಡೇಶ್ವರದ ಅರ್ಚಕರು ಹಾಗೂ ಸ್ಥಳೀಯರು ಶ್ರದ್ಧಾ-ಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು.

ತ್ರಿವೇಣಿ ಸಂಗಮದಲ್ಲಿ ಪೊಲಿಂಕಾನ ಪೂಜೆ
author img

By

Published : Aug 1, 2019, 10:03 PM IST

ಕೊಡಗು: ಪ್ರತಿ ವರ್ಷ ಕೊಡಗಿನಲ್ಲಿ ಉತ್ತಮ ಮಳೆ ಆಗುತ್ತಿತ್ತು. ಆದ್ರೆ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಇನ್ನಾದರು ಉತ್ತಮ ಮಳೆಯಾಗಿ ಜೀವರಾಶಿಗಳಿಗೆ ಒಳಿತಾಗಲಿ ಎಂದು ಮಡಿಕೇರಿ ತಾಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಭಗಂಡೇಶ್ವರದ ಅರ್ಚಕರು ಹಾಗೂ ಸ್ಥಳೀಯರು ಶ್ರದ್ಧಾ-ಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು.

ತ್ರಿವೇಣಿ ಸಂಗಮದಲ್ಲಿ ಪೊಲಿಂಕಾನ ಪೂಜೆ

ಕೊಡಗು ಜಿಲ್ಲೆಯ ಬಾಳೆದಂಡಿನಲ್ಲಿ ಮಂಟಪದ ರೂಪದಲ್ಲಿ ನಿರ್ಮಿಸಿದ್ದ ರಥಕ್ಕೆ ಮುತ್ತೈದೆಯರು ಮಡಿ ತುಂಬುವಂತೆ ಸೀರೆ, ಬಳೆ, ಬಾಚಣಿಗೆ, ತೊಟ್ಟಿಲು, ಕನ್ನಡಿ, ಅರಿಶಿಣ-ಕುಂಕುಮವನ್ನು ದೇವರಿಗೆ ಸಮರ್ಪಿಸಿ ಜೀವ ಸಂಕುಲಗಳಿಗೆ ಒಳಿತು ಮಾಡುವಂತೆ ಹಾಗೂ ಜನ-ಜಾನುವಾರುಗಳು, ಪ್ರವಾಸಿಗರಿಗೆ ಆತಂಕ ಸೃಷ್ಟಿಸದಿರಲಿ ಎಂದು ಶಾಸ್ತ್ರೋಕ್ತವಾಗಿ ಬೇಡಿಕೊಂಡರು.

ಭಗಂಡೇಶ್ವರ ದೇವಾಲಯದ ಅರ್ಚಕ ಹರೀಶ್ ಮಾತನಾಡಿ, ಎಲ್ಲರಿಗೂ ಒಳಿತಾಗಲಿ ಎಂದು ಇಂದು ತ್ರಿವೇಣಿ ಸಂಗಮದಲ್ಲಿ ವಿಶೇಷವಾದ ಪೊಲಿಂಕಾನ ಪೂಜೆ ನೆರವೇರಿಸಿದ್ದೇವೆ. ಅದನ್ನು ತಾಯಿ ಕಾವೇರಿ ಅಮ್ಮ ಒಳ್ಳೆಯ ರೀತಿಯಲ್ಲಿ ಸ್ವೀಕಾರ ಮಾಡಿದ್ದಾಳೆ. ಬರುವ ಯಾತ್ರಾರ್ಥಿಗಳಿಗೆ ತೊಂದರೆ ಆಗಬಾರದು, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆ-ಬೆಳೆ ಆಗಲಿ ಎಂದು ಬೇಡಿಕೊಂಡಿದ್ದೇವೆ ಎಂದು ಹೇಳಿದರು.

ಈ ಕ್ಷೇತ್ರದಲ್ಲಿ ಪೊಲಿಂಕಾನ ಒಂದು ವಿಷೇಷ ಪೂಜೆ. ಪ್ರತಿ ವರ್ಷ ರೌದ್ರವತಾರ ಸೃಷ್ಠಿಸದಂತೆ ತಾಯಿ ಕಾವೇರಿಗೆ ಬೇಡಿಕೊಳ್ಳುತ್ತೇವೆ. ಆದರೆ ಈ ವರ್ಷ 9 ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಜನ-ಜಾನುವಾರುಗಳು ಉಳಿಯಬೇಕಾದರೆ ಸಾಕಷ್ಟು ಮಳೆ ಬೀಳಲಿ ಎಂದು ಬೇಡಿಕೊಂಡಿದ್ದೇವೆ. ತೆಪ್ಪ ವಿಸರ್ಜನೆ ಗಮನಿಸಿದರೆ ನಮ್ಮೆಲ್ಲರನ್ನು ತಾಯಿ ಕಾಪಾಡುತ್ತಾಳೆ ಎಂಬ ನಂಬಿಕೆ ಇದೆ ಎಂದು ದೇವಸ್ಥಾನದ ಮುಖ್ಯಸ್ಥ ಮೊಟಯ್ಯ ಹೇಳಿದರು.

Intro:ಅತಿವೃಷ್ಟಿ-ಅನಾವೃಷ್ಟಿಯ ಅಡಕತ್ತರಿಯಲ್ಲಿ ಅನ್ನದಾತ; ತ್ರಿವೇಣಿ ಸಂಗಮದಲ್ಲಿ ಪೊಲಿಂಕಾನ ಪೂಜೆ

ಕೊಡಗು: ಅದು ಇಲ್ಲಿನ ಸಂಪ್ರದಾಯ.ಮಳೆಗಾಲದಲ್ಲಿ ಮೈದುಂಬಿ ಹರಿಯುವ ಕಾವೇರಿಯ ರೌದ್ರಾವತಾರ ತಾಳಬಾರದು.ಜನ-ಜಾನುವಾರುಗಳು ಹಾಗೂ ಪ್ರವಾಸಿಗರಿಗೆ ಆತಂಕ ಸೃಷ್ಟಿಸದಿರಲಿ ಎಂದು ಶಾಸ್ತ್ರೋಕ್ತ ವಾಗಿ ಬೇಡಿಕೊಳ್ಳುವ ಸಾಂಪ್ರದಾಯಿಕ ಪ್ರತೀತಿ.ಪ್ರತಿ ವರ್ಷ ಕೊಡಗಿನಲ್ಲಿ ಜೂನ್, ಜುಲೈ ಮತ್ತು ಆಗಷ್ಟ್ ತಿಂಗಳಲ್ಲಿ ಉತ್ತಮ ಮಳೆ ಆಗುತ್ತಿತ್ತು.ಆದರೆ ಈ ವರ್ಷ ಅದೇಕೊ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದ್ದು,ಇನ್ನಾದರೂ ಉತ್ತಮ ವರ್ಷಾಧಾರೆಯಾಗಿ ಜೀವರಾಶಿಗಳಿಗೆ ಒಳಿತು ಮಾಡಲಿ ಎಂದು ಪ್ರಾರ್ಥಿಸಿದ್ದಾರೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮದ ಭಗಂಡೇಶ್ವರದ ಅರ್ಚಕರು ಹಾಗೂ ಸ್ಥಳೀಯರು ತ್ರಿವೇಣಿ ಸಂಗಮದಲ್ಲಿ ಶ್ರದ್ಧಾ-ಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು.ಬಾಳೆದಂಡಿನಲ್ಲಿ ಮಂಟಪದ ರೂಪದಲ್ಲಿ ನಿರ್ಮಿಸಿದ್ದ ರಥಕ್ಕೆ ಮುತ್ತೈದೆಗೆ ಮಡಿದು ತುಂಬುವಂತೆ ಸೀರೆ, ಬಳೆ, ಬಾಚಣಿಗೆ, ತೊಟ್ಟಿಲು, ಕನ್ನಡಿ, ಕರಿಶಿಣ-ಕುಂಕುಮ ಸಮರ್ಪಿಸಲಾಯಿತು. ಭಗಂಡೇಶ್ವರನಿಗೆ ಆರತಿ, ನಂದಾದೀಪ ಬೆಳಗಿದ ನಂತರ ಜೀವನದಿ ಕಾವೇರಿ ದಿಬ್ಬಣವನ್ನು ಪ್ರದಕ್ಷಿಣೆ ಹಾಕಿ ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸಿ ಜೀವ ಸಂಕುಲಳಿಗೆ ಒಳಿತು ಮಾಡುವಂತೆ ಬೇಡಿಕೊಂಡರು.

ಎಲ್ಲರಿಗೂ ಒಳಿತಾಗಲಿ ಎಂದು ಇಂದು ತ್ರಿವೇಣಿ ಸಂಗಮದಲ್ಲಿ ವಿಶೇಷವಾದ ಪೊಲಿಕಾನ್ ಪೂಜೆ ನೆರವೇರಿಸಿದ್ದೇವೆ.ಅದನ್ನು ತಾಯಿ ಕಾವೇರಿಯಮ್ಮ ಒಳ್ಳೆಯ ರೀತಿಯಲ್ಲಿ ಸ್ವೀಕಾರ ಮಾಡಿದ್ದಾಳೆ. ಬರುವ ಯಾತ್ರಾತ್ರಿಗಳಿಗೆ ತೊಂದರೆ ಆಗಬಾರದು.ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆ- ಬೆಳೆ ಆಗಲಿ ಬೇಡಿಕೊಂಡಿದ್ದೇವೆ ಎಂದು ಭಗಂಡೇಶ್ವರ ದೇವಾಲಯದ ಪ್ರದಾನ ಅರ್ಚಕ ಹರೀಶ್  ಹೇಳಿದರು.

ಬೈಟ್- 1 ಹರೀಶ್ , ಭಗಂಡೇಶ್ವರ ದೇವಾಲಯದ ಪ್ರದಾನ ಅರ್ಚಕ ಹರೀಶ್ .

ಈ ಕ್ಷೇತ್ರದಲ್ಲಿ ಪೊಲಿಂಕಾನ ಒಂದು ವಿಷೇಷ ಪೂಜೆ. ಪ್ರತಿ ವರ್ಷ ರೌದ್ರವತಾರ ಸೃಷ್ಠಿಸದಂತೆ ತಾಯಿ ಕಾವೇರಿಗೆ ಬೇಡಿಕೊಳ್ಳುತ್ತೇವೆ. ಆದರೆ ಈ ವರ್ಷ  ಜಿಲ್ಲೆಯಲ್ಲಿ
ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಜನ-ಜಾನುವಾರುಗಳು ಉಳಿಯಬೇಕಾದರೆ ಸಾಕಷ್ಟು ಮಳೆ ಬೀಳಲಿ ಎಂದು ಬೇಡಿಕೊಂಡಿದ್ದೇವೆ.ತೆಪ್ಪ ವಿಸರ್ಜನೆ ಗಮನಿಸಿದರೆ ನಮ್ಮೆಲ್ಲರನ್ನು ತಾಯಿ ಕಾಪಾಡುತ್ತಾಳೆ ಎಂಬ ನಂಬಿಕೆ
ಇದೆ ಎನ್ನುತ್ತಾರೆ ದೇವಸ್ಥಾನದ ತಕ್ಕ ಮುಖ್ಯಸ್ಥ ಮೊಟಯ್ಯ.

ಬೈಟ್- 2 ಮೊಟಯ್ಯ,ದೇವಸ್ಥಾನದ ತಕ್ಕ ಮುಖ್ಯಸ್ಥ.(ಪೇಟ ಇದೆ)

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.

Body:0

Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.