ETV Bharat / state

ಕೊಡಗಿನಲ್ಲಿ ಮಣ್ಣು ಕುಸಿತ: ಅಪಾಯದಲ್ಲಿದೆ ಜಿಲ್ಲಾಧಿಕಾರಿ ಕಚೇರಿ ಕಟ್ಟಡ

ಮಡಿಕೇರಿಯಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿತವಾಗಿದ್ದು, ಇದೇ ರೀತಿ ಮಣ್ಣು ಕುಸಿತವಾಗುತ್ತಿದ್ದರೆ ಜಿಲ್ಲಾಧಿಕಾರಿ ಕಚೇರಿಯ ಕಟ್ಟಡಕ್ಕೆ ಅಪಾಯವಿದೆ. ಅಷ್ಟೇ ಅಲ್ಲದೆ, ಈ ಭಾಗದ ಜನರು ಭಯಭೀತರಾಗಿದ್ದಾರೆ.

kodagu
ಕೊಡಗಿನಲ್ಲಿ ಮಣ್ಣು ಕುಸಿತ
author img

By

Published : Jul 16, 2021, 6:41 AM IST

Updated : Jul 16, 2021, 10:20 PM IST

ಕೊಡಗು: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಡಿಕೇರಿಯಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿತವಾಗಿದೆ. ಜಿಲ್ಲಾಡಳಿತ ಕಚೇರಿಯ ಕೆಳಭಾಗದಲ್ಲಿ ಮಣ್ಣು ಕುಸಿತವಾಗಿದ್ದು, ಮಂಗಳೂರು ರಸ್ತೆಯಲ್ಲಿ ಮಣ್ಣು ಹರಿಯುತ್ತಿದೆ. ಇದರಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇನ್ನು ಇದೇ ರೀತಿ ಮಣ್ಣು ಕುಸಿತವಾಗುತ್ತಿದ್ದರೆ ಜಿಲ್ಲಾ ಕಚೇರಿಯ ಕಟ್ಟಡಕ್ಕೂ ಅಪಾಯವಿದೆ.

ಡಿಸಿ ಕಚೇರಿ ಕೆಳಭಾಗದಲ್ಲಿ ಹಲವಾರು ಮನೆಗಳಿವೆ. ಮಣ್ಣು ಸ್ವಲ್ಪ ಜಾರಿದರೂ ಸಹ ಅವುಗಳಿಂದ ಮನೆಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ಇಲ್ಲಿನ ಜನರು ಇದೀಗ ಭಯಭೀತರಾಗಿದ್ದಾರೆ. ಕುಸಿಯುತ್ತಿರುವ ಜಾಗಕ್ಕೆ ಮೇಲಿಂದ ಮಳೆ ನೀರು ಬೀಳದಂತೆ ಟಾರ್ಪಲ್ ಹೊದಿಸಲಾಗಿದೆ. ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ‌ ಅಲ್ಲಲ್ಲಿ ಬೆಟ್ಟ ಕುಸಿಯುತ್ತಿದ್ದು ಜನರು ಆತಂಕದಲ್ಲಿದ್ದಾರೆ.

ಕಳೆದ ಮೂರು ವರ್ಷಗಳಿಂದ ಮಳೆಯಾದಾಗ ಜಿಲ್ಲಾ ಕಚೇರಿ ಮೇಲಿಂದ ನೀರು ಹರಿದು ಬರುತ್ತದೆ. ಕಚೇರಿ ಕೆಳಭಾಗದಲ್ಲಿ ನಮ್ಮ ಮನೆಗಳಿವೆ. ಮೇಲಿಂದ ಬರುವ ನೀರು ನಮ್ಮ ಮನೆಗಳಿಗೆ ಬರುತ್ತದೆ. ಈಗ ಬೆಟ್ಟ ಕುಸಿತವಾಗಿದೆ. ಮಣ್ಣು ರಸ್ತೆಗೆ ಬಂದು ಬಿದ್ದಿದೆ. ನಮ್ಮ ಮನೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಜೆಸಿಬಿಯಿಂದ ಮಣ್ಣು ತೆಗೆಸಿಹೋಗಬೇಕು. ವರ್ಷಗಳಿಂದ ತಡೆಗೋಡೆ ಕಟ್ಟುತ್ತಿದ್ದಾರೆ ಸರಿಯಾಗಿ ಕಟ್ಟಿಲ್ಲ. ತಡೆಗೋಡೆ ಪಕ್ಕದ ಬೆಟ್ಟ ಕುಸಿತವಾಗಿದೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.

ಕೊಡಗಿನಲ್ಲಿ ಮಣ್ಣು ಕುಸಿತ

ಇನ್ನು ಜಿಲ್ಲೆಯಲ್ಲಿ ಗಾಳಿ ಮಳೆ ಹೆಚ್ಚಾದ ಕಾರಣ ಅಲ್ಲಲ್ಲಿ ಅನಾಹುತಗಳು ಸಂಭವಿಸುತ್ತಿವೆ. ವಿದ್ಯುತ್ ಕಂಬಗಳು ಮತ್ತು ಮರಗಳು ಧರೆಗೆ ಉರುಳುತ್ತಿವೆ. ಜೊತೆಗೆ ಸರಿಪಡಿಸುವ ಕಾರ್ಯವೂ ನಡೆದಿದೆ. ತಲಕಾವೇರಿ ಮತ್ತು ಭಾಗಮಂಡಲ ತ್ರಿವೇಣಿ ಸಂಗಮ ತುಂಬಿ ಹರಿಯುತ್ತಿದೆ. ಹಳ್ಳ-ಕೊಳ್ಳಗಳು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.

ಕೊಡಗು ಮಳೆ ವಿವರ(ಮಿ.ಮೀ.ಗಳಲ್ಲಿ): ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ ಮಳೆ 73.81 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 5.24 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1184.24 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 723.98 ಮಿ.ಮೀ ಮಳೆಯಾಗಿತ್ತು.

ಹಾರಂಗಿ ಜಲಾಶಯದ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು. ಇಂದಿನ ನೀರಿನ ಮಟ್ಟ 2853.69 ಅಡಿಗಳು. ಕಳೆದ ವರ್ಷ ಇದೇ ದಿನ 2851.52 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 27.40 ಮಿ.ಮೀ.. ಇಂದಿನ ನೀರಿನ ಒಳಹರಿವು 14091 ಕ್ಯೂಸೆಕ್.

Last Updated : Jul 16, 2021, 10:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.