ETV Bharat / state

ಯೋಧರ ಪರಂಪರೆಯ ನಾಡು ಕೊಡಗಿನಲ್ಲಿ ಕೋವಿ ಉತ್ಸವ ; ಏನಿದರ ವಿಶೇಷತೆ...? - ಯೋಧ ಪರಂಪರೆಯ ನಾಡಿನಲ್ಲಿ‌ ಕೋವಿ ಉತ್ಸವ

ಡಿಸೆಂಬರ್ 18 ವಿಶ್ವ ಅಲ್ಪ ಸಂಖ್ಯಾತರ ದಿನಾಚರಣೆ. ಹಾಗಾಗಿ, ಕಳೆದ ವರ್ಷದಿಂದ ಈ ದಿನದಂದು ಸಿಎನ್‌ಸಿ ಕೋವಿ ಉತ್ಸವವನ್ನಾಗಿ ಆಚರಿಸಲಾಗುತ್ತಿದೆ. ತಮ್ಮ ಸಂಸ್ಕೃತಿಯ ಭಾಗವೇ ಆದ ಕೋವಿಯನ್ನು ಸಾರ್ವಜನಿಕವಾಗಿ ಬಳಸಿ ಕೋವಿ ತಮ್ಮ ಹಕ್ಕು ಎಂಬುದನ್ನು ಸಾರುತ್ತಿದೆ..

Kovai festival at Kodagu, the legacy of warriors; What's so special ...?
ಯೋಧರ ಪರಂಪರೆಯ ನಾಡು ಕೊಡಗಿನಲ್ಲಿ ಕೋವಿ ಉತ್ಸವ; ಏನಿದರ ವಿಶೇಷತೆ...?
author img

By

Published : Dec 19, 2021, 3:45 PM IST

ಮಡಿಕೇರಿ : ಕೊಡವಾ ನ್ಯಾಷನಲ್ ಕೌನ್ಸಿಲ್-ಸಿಎನ್‌ಸಿ ಕೋವಿ ಹಬ್ಬವನ್ನ ಆರಂಭಿಸಿದೆ. ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದಲ್ಲಿ ಕೋವಿ ಉತ್ಸವಕ್ಕೆ ನಿನ್ನೆ ಚಾಲನೆ ನೀಡಲಾಗಿದೆ. ನೂರಾರು ಜನರು ಪಾಳ್ಗೊಂಡು ಪುರುಷ-ಮಹಿಳೆ ಎಂಬ ಭೇದವಿಲ್ಲದೆ ಎಲ್ಲರೂ ಗುಂಡು ಸಿಡಿಸಿ ಸಂಭ್ರಮಿಸಿದ್ದಾರೆ.

ಎಲ್ಲಾ ಬಂದೂಕುಗಳನ್ನು ಒಂದೆಡೆಯಿಟ್ಟು ಮೊದಲು ಪೂಜೆ ಸಲ್ಲಿಸಲಾಯಿತು. ನಂತರ ತೆಂಗಿನಕಾಯಿಗೆ ಗುಂಡು ಹೊಡೆಯೋ ಆಟವಾಡುತ್ತಾ ಬಂದೂಕು ತಮ್ಮ ಹಕ್ಕು ಎಂಬುದನ್ನ ಸಾರುತ್ತಾ ಕೊಡವರ ಸಂಸ್ಕೃತಿ ಪ್ರತೀಕ ಬಾಳೆ ಕಂಬಗಳನ್ನು ಕಡೆದು ಉತ್ಸವದಲ್ಲಿ ಮಿಂದೆದ್ದರು.

ಡಿಸೆಂಬರ್ 18 ವಿಶ್ವ ಅಲ್ಪ ಸಂಖ್ಯಾತರ ದಿನಾಚರಣೆ. ಹಾಗಾಗಿ, ಕಳೆದ ವರ್ಷದಿಂದ ಈ ದಿನದಂದು ಸಿಎನ್‌ಸಿ ಕೋವಿ ಉತ್ಸವವನ್ನಾಗಿ ಆಚರಿಸಲಾಗುತ್ತಿದೆ. ತಮ್ಮ ಸಂಸ್ಕೃತಿಯ ಭಾಗವೇ ಆದ ಕೋವಿಯನ್ನು ಸಾರ್ವಜನಿಕವಾಗಿ ಬಳಸಿ ಕೋವಿ ತಮ್ಮ ಹಕ್ಕು ಎಂಬುದನ್ನು ಸಾರುತ್ತಿದೆ.

ಇದನ್ನು ನಾವು ಬಳಸೋದು ಪ್ರಾಣ ರಕ್ಷಣೆಗಾಗಿ ಅಲ್ಲ, ಬದಲಾಗಿ ಕೋವಿಗೆ ಕೊಡವರಲ್ಲಿ ಪೂಜ್ಯಭಾವನೆಯಿದೆ. ಪ್ರತಿ ಮನೆಯ ಪ್ರತಿ ಕಾರ್ಯದಲ್ಲಿಯೂ ಕೋವಿಯ ಮಹತ್ವವಿದೆ ಎಂದು ಸಿಎನ್‌ಸಿ ಮುಖಂಡ ನಾಚಪ್ಪಾ ಹೇಳುತ್ತಾರೆ.

ಇದನ್ನೂ ಓದಿ: ಮುಂದಿನ ತಲೆಮಾರಿಗೂ ಸಾರಲು ಕೊಡಗಿನಲ್ಲಿ ಕೋವಿ ಉತ್ಸವ ಆರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.