ETV Bharat / state

ದುಬೈನಿಂದ ಕೊಡಗಿಗೆ ಬಂದ ವ್ಯಕ್ತಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ: ಜಿಲ್ಲಾಧಿಕಾರಿ ಸ್ಪಷ್ಟನೆ

ದುಬೈನಿಂದ ಬಂದ ಕೊಡಗು ಮೂಲದ ವ್ಯಕ್ತಿಗೆ ಶೀತ, ಜ್ವರ ಕಾಣಿಸಿಕೊಂಡ ಹಿನ್ನೆಲೆ ಕೊರೊನಾ ಟೆಸ್ಟ್​​ ಮಾಡಲು ಅವರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

kodagu dc pressmeet about corona virus
ಕೊಡಗು ಜಿಲ್ಲಾಧಿಕಾರಿ ಸುದ್ದಿಗೋಷ್ಟಿ
author img

By

Published : Mar 13, 2020, 5:05 PM IST

Updated : Mar 13, 2020, 5:15 PM IST

ಕೊಡಗು: ದುಬೈನಿಂದ ಗುರುವಾರವಷ್ಟೇ ಬಂದಿದ್ದ 32 ವಯಸ್ಸಿನ ವ್ಯಕ್ತಿವೋರ್ವನಿಗೆ ಕೆಮ್ಮು ಶೀತ ಮತ್ತು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಡಿಕೇರಿ ಜಿಲ್ಲಾಸ್ಪತ್ರೆಯ ಐಸೋಲೇಟೆಡ್ ವಾರ್ಡ್‍ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕೆ. ಜಾಯ್ ತಿಳಿಸಿದ್ದಾರೆ.‌

ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ದುಬೈನಿಂದ ಮಂಗಳೂರು ಏರ್ ಪೋರ್ಟ್‍ಗೆ ಬಂದ ಸಂದರ್ಭದಲ್ಲಿ ವ್ಯಕ್ತಿಗೆ ಯಾವುದೇ ರೋಗ ಲಕ್ಷಣಗಳು ಇರಲಿಲ್ಲ. ಆದ್ರೆ ಅಲ್ಲಿಂದ ಕೊಡಗಿಗೆ ಬರುವ ವೇಳೆ ಶೀತ ಮತ್ತು ಕೆಮ್ಮು ಕಾಣಿಸಿಕೊಂಡಿರುವುದರಿಂದ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ಅವರನ್ನು ಪರಿಶೀಲನೆ ನಡೆಸಿದಾಗ ಅವರಿಗೆ ತೀವ್ರ ಜ್ವರ ಇರುವುದು ಗೊತ್ತಾಗಿದೆ. ಹೀಗಾಗಿ ಆ ವ್ಯಕ್ತಿಯನ್ನು ಐಸೋಲೇಟೆಡ್ ವಾರ್ಡ್‍ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿವರಿಸಿದರು. ದಾಖಲಾಗಿರುವ ವ್ಯಕ್ತಿಯ ಗಂಟಲ ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಇಂದು ಅಥವಾ ನಾಳೆ ವರದಿ ಬರಲಿದ್ದು, ನೈಜ ಸ್ಥಿತಿ ಗೊತ್ತಾಗಲಿದೆ ಎಂದರು.

ಜಿಲ್ಲೆಯ ಯಾವ ಭಾಗದಲ್ಲೂ ಕೂಡ ಸ್ಕ್ರೀನಿಂಗ್ ಮಾಡುತ್ತಿಲ್ಲ. ಹೊರ ದೇಶಗಳಿಂದ ಬರುತ್ತಿರುವವರನ್ನು ಮಂಗಳೂರು ಮತ್ತು ಕೊಡಗಿಗೆ ಹತ್ತಿರದಲ್ಲೇ ಇರುವ ಕೇರಳದ ಕಣ್ಣೂರು ಏರ್‌ಪೋರ್ಟ್‌ನಲ್ಲೂ ಸ್ಕ್ರೀನಿಂಗ್ ಇರುವುದರಿಂದ ನಾವು ಎಲ್ಲೂ ಸ್ಕ್ರೀನಿಂಗ್ ಮಾಡುತ್ತಿಲ್ಲ. ಏರ್​ಪೋರ್ಟ್ ಅಧಿಕಾರಿಗಳು ಹೊರ ದೇಶಗಳಿಂದ ಬರುತ್ತಿರುವವರ ಮಾಹಿತಿ ನೀಡುತ್ತಿದ್ದು, ಅಂತವರ ಮೇಲೆ ಮಾತ್ರ ನಿಗಾ ಇರಿಸಲಾಗುತ್ತಿದೆ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

Last Updated : Mar 13, 2020, 5:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.