ಮಡಿಕೇರಿ (ಕೊಡಗು) : ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸೋಂಕಿತರ ಸಂಪರ್ಕದಲ್ಲಿದ್ದ ಪ್ರಮುಖ ಪ್ರದೇಶಗಳನ್ನು ಜಿಲ್ಲಾಡಳಿತ ಸೀಲ್‌ಡೌನ್ ಮಾಡಿದೆ.
ಜಿಲ್ಲೆಯಲ್ಲಿ ನಿನ್ನೆ ವೈದ್ಯರೊಬ್ಬರು ಸೇರಿ ನರ್ಸ್‌ಗಳಲ್ಲೂ ಕೊರೊನಾ ದೃಢಪಟ್ಟಿದೆ. ಹೀಗಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೋಂಕಿತರು ಓಡಾಡಿದ್ದ ಸ್ಥಳಗಳನ್ನು ಸೇರಿಸಿ ಅವರ ಸಂಪರ್ಕದಲ್ಲಿರುವ ಮಡಿಕೇರಿ ತಾಲೂಕಿನ ತಾಳತ್ ಮನೆ , ಕಗ್ಗೋಡ್ಲು, ಬಿಟ್ಟಂಗಾಲ, ಡೈರಿ ಫಾರಂ ಹಾಗೂ ಪುಟಾಣಿ ನಗರಗಳನ್ನು ಸೀಲ್‌ಡೌನ್ ಮಾಡಿದೆ.
ಸೀನ್ ಡೌನ್ ಆಗಿರುವ ಪ್ರದೇಶಗಳಲ್ಲಿ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಇತರೆ ಜಿಲ್ಲೆಗಳ ಕೊರೊನಾ ಸೋಂಕಿತರ ಸಂಖ್ಯೆಗೆ ಹೋಲಿಸಿದರೆ ಕೊಡಗಿನಲ್ಲಿ ಸೋಂಕಿತರ ಕಡಿಮೆಯಿದ್ದು ನಿರಾಳರಾಗಿದ್ದ ಜನತೆ ಈಗ ಆತಂಕಕ್ಕೀಡಾಗಿದ್ದಾರೆ.
ಇದರ ಜೊತೆಗೆ, ಇಂದಿನಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳೂ ಕೂಡ ಪ್ರಾರಂಭ ಆಗಿರೋದ್ರಿಂದ ಪೋಷಕರಲ್ಲೂ ದುಗುಡ ಹೆಚ್ಚಾಗಿದೆ.