ಕೊಡಗು: ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ ತೋರುತ್ತಿದ್ದ ಯುವಕರಿಗೆ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಉಪ ಠಾಣೆಯ ಪೊಲೀಸರು ಸರಿಯಾಗಿಯೇ ಲಾಠಿ ರುಚಿ ತೋರಿಸಿರುವ ವಿಡಿಯೋ ವೈರಲ್ ಆಗಿದೆ.
ಕೇರಳದ ಮಲಪುರಂನ ಮಹಮ್ಮದ್ ಫುತಾಲಿಕ್ (32), ಶರೀಫ್ (30) ಎಂಬ ಯುವಕರಿಗೆ ಪೊಲೀಸರು ಯರ್ರಾಬಿರ್ರೀ ಲಾಠಿ ಏಟು ಕೊಟ್ಟಿದ್ದಾರೆ. ಕೇರಳದಿಂದ ಕಾರಿನಲ್ಲಿ ಬಂದ ಇಬ್ಬರು ಯುವಕರು ಪಾಲಿಬೆಟ್ಟದ ಪದವಿ ಪೂರ್ವ ಕಾಲೇಜಿನ ಮುಂಭಾಗ ನಿಂತು ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಕಾಲೇಜು ಪ್ರಾಂಶುಪಾಲರ ದೂರಿನ ಮೇರೆಗೆ ಪಾಲಿಬೆಟ್ಟ ಉಪಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಅಷ್ಟೇ ಅಲ್ಲ, ರೋಡ್‌ರೋಮಿಯೊಗಳನ್ನ ಹಿಡಿದು ಠಾಣೆಗೆ ಎಳೆದೊಯ್ದರು. ಲಾಠಿ ಏಟು ಬೀಳ್ತಿದ್ದಂತೆಯೇ ಸಾರಿ ಸಾರ್, ಸಾರಿ ಸಾರ್ ಅಂತಾ ಹೇಳುತ್ತಿದ್ದರು.
ಕೊಡಗು ಪೊಲೀಸರ ಲಾಠಿ ಏಟಿನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜತೆಗೆ ವಿದ್ಯಾರ್ಥಿನಿಯೊಂದಿಗೆ ಅಸಭ್ಯ ವರ್ತನೆ ತೋರಿದ ಯುವಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.