ಕೊಡಗು: ಸಿಬಿಐ ತನ್ನ ಕೆಲಸವನ್ನು ತಾನು ಮಾಡುತ್ತಿದೆ. ಅದರಲ್ಲಿ ಏನೂ ಹೇಳಲು ಬರುವುದಿಲ್ಲ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಸಿಬಿಐ ವಶಕ್ಕೆ ಪಡೆದಿರುವ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಕೊಡಗಿಗೆ ಭೇಟಿ ನೀಡಿರುವ ಅವರು, ಮಂಗಳೂರಿನಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸದಿರುವ ಬಗ್ಗೆ ಪ್ರತಿಕ್ರಿಯಿಸಿ ಕಾರ್ಯಕಾರಿಣಿ ಸಭೆಗೆ ಅಪೇಕ್ಷಿತರಿಗೆ ಮಾತ್ರ ಆಹ್ವಾನವಿತ್ತು. ಆದ್ದರಿಂದ ನಾನು ಭಾಗವಹಿಸಿಲ್ಲ ಎಂದರು.
ನಾಳೆ ಕೊಡಗು ಪೊಲೀಸ್ ಇಲಾಖೆಯಲ್ಲಿ ರಿವೀವ್ ಮಾಡಲಾಗುವುದು. ಕೊಡಗಿಗೆ ಬಹಳ ದಿನಗಳ ಹಿಂದೆಯೇ ಭೇಟಿ ನೀಡಬೇಕಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ ಎಂದರು. ಕೊಡಗು ತಾಜ್ ರೆಸಾರ್ಟ್ನಲ್ಲಿ ಕುಟುಂಬ ಸಮೇತರಾಗಿ ಗೃಹ ಸಚಿವರು ಮೂರು ದಿನಗಳ ಕಾಲ ವಾಸ್ತವ್ಯ ಹೂಡಲಿದ್ದಾರೆ.