ETV Bharat / state

ಕೊಡಗಿನಲ್ಲಿ ಭೀಕರ ಮಳೆಗೆ ಮನೆ, ಸೇತುವೆಗಳು ಕುಸಿತ: ಜನರಿಗೆ ಜೀವಭಯ - ಭಾಗಮಂಡಲ ರಸ್ತೆ ಸಂಪರ್ಕ ಬಂದ್

ತಲಕಾವೇರಿ, ಭಾಗಮಂಡಲದಲ್ಲಿ‌ ಮಳೆ ಅಬ್ಬರ ಮುಂದುವರೆದಿದೆ.‌

ಕೊಡಗಿನಲ್ಲಿ ಭೀಕರ ಮಳೆ
ಕೊಡಗಿನಲ್ಲಿ ಭೀಕರ ಮಳೆ
author img

By

Published : Aug 29, 2022, 10:27 PM IST

ಕೊಡಗು: ಸದ್ಯ ಮಳೆ ಕಡಿಮೆ ಆಯ್ತಲ್ಲ ಎಂದು ನಿಟ್ಟುಸಿರುಬಿಟ್ಟ ಜಿಲ್ಲೆಯ ಜನರಿಗೆ ಮತ್ತೆ ಮಳೆ ನೆಮ್ಮದಿ ಕೆಡಿಸುತ್ತಿದೆ. 2018 ರ ಜಲಪ್ರಳಯದ ಭೀಕರತೆಯನ್ನು ನೆನಪಿಸುವಂತೆ ಮಳೆಯ ಭೀಕರತೆ ಎದುರಾಗಿದೆ. ಗಡಿಭಾಗ ಸಂಪಾಜೆಯ ವ್ಯಾಪ್ತಿಯಲ್ಲಿ ಜೋರು ಮಳೆ ಸುರಿಯುತ್ತಿದ್ದು ಕಿಂಡಿ ಅಣೆಕಟ್ಟು ಕುಸಿತವಾಗಿ ಕೊಯನಾಡು ಸೇತುವೆ ಕೊಚ್ಚಿ ಹೋಗಿದೆ. ವಾಸ ಮಾಡುವ ಮನೆಗಳಿಗೆ ನೀರು ನುಗ್ಗಿದೆ. ಕೆಲವು ಮನೆಗಳು ಮತ್ತು ಅಂಗಡಿ ನೆಲಸಮವಾಗಿದೆ.

ಕಳೆದ ಮಧ್ಯರಾತ್ರಿಯಲ್ಲಿ ಮನೆಗಳು ಕುಸಿತವಾಗಿವೆ. ಪಯಸ್ವನಿ ನದಿ ನೀರು ಹೆಚ್ಚಾಗಿ ಮನೆಗಳಿಗೆ ನೀರು ನುಗ್ಗಿದೆ. ಜನರು ಪ್ರಾಣ ಉಳಿಸಿಕೊಳ್ಳಲು ಮನೆಬಿಟ್ಟು ಹೊರ ಓಡಿದ್ದಾರೆ. ಸುರಿಯುತ್ತಿರುವ ಮಳೆಯಲ್ಲಿ ಬೇರೆ ಬೇರೆ ಕಡೆ ಆಶ್ರಯ ಪಡೆದಿದ್ದಾರೆ. ಬೆಟ್ಟದ ಮೇಲೆ ವಾಸ ಮಾಡುವ ಜನರು ಮಣ್ಣು ಕುಸಿತವಾಗಿ ಸಂಚಾರ ಮಾಡಲು ಕಷ್ಟವಾಗಿದ್ದು, ಜೀವ ಭಯದಲ್ಲಿ ಬದುಕುವಂತಾಗಿದೆ.

ಕೊಡಗಿನಲ್ಲಿ ಭೀಕರ ಮಳೆ

ರಸ್ತೆ ಸಂಪರ್ಕ ಸೇತುವೆ ಕುಸಿತ: ಈ ವರ್ಷದ ಮಳೆಗಾಲದಲ್ಲಿ ನಾಲ್ಕನೇ ಬಾರಿ ಕೊಯನಾಡಿನಲ್ಲಿ ಅಪಾಯದ ಸ್ಥಿತಿ ಎದುರಾಗಿದೆ. ಸಂಪಾಜೆ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿ ಹಲವಾರು ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಡಿತವಾಗಿದೆ. ಸೇತುವೆಗಳು ಕುಸಿದಿವೆ. ಜನರು ರಸ್ತೆ ಇಲ್ಲದೆ ಪರದಾಡುವಂತಾಗಿದೆ. ಬೆಟ್ಟದ ಮೇಲಿಂದ ಮರದ ಕೊಂಬೆಗಳು, ದಿಮ್ಮಿಗಳು ರಭಸವಾಗಿ ಹರಿಯುವ ನೀರಿನಲ್ಲಿ ತೇಲಿಬರುತ್ತಿದ್ದು ಸೇತುವೆ ಕೊಚ್ಚಿ ಹೋಗುತ್ತಿದೆ. ಜೊತೆಗೆ 30ಕ್ಕೂ ಅಧಿಕ ಮನೆಗಳಿಗೆ ನುಗ್ಗಿದೆ.

ಕಾಳಜಿ ಕೇಂದ್ರಕ್ಕೆ ಸ್ಥಳಾಂತರ: ಹಂದಿ, ಕೋಳಿ ಸೇರಿದಂತೆ ಸಾಕು ಪ್ರಾಣಿಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ. ಮನೆ ಕಳೆದುಕೊಂಡ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.‌

ಸಂಪರ್ಕ ಸಂಪೂರ್ಣ ಬಂದ್: ತಲಕಾವೇರಿ ಮತ್ತು ಭಾಗಮಂಡಲದಲ್ಲಿ‌ ಮಳೆ ಆರ್ಭಟ ಮುಂದುವರೆದಿದೆ.‌ ಭಾಗಮಂಡಲದಿಂದ ನಾಪೋಕ್ಲು ತೆರಳುವ ರಸ್ತೆ ಜಲಾವೃತವಾಗಿದ್ದು, ಭಾಗಮಂಡಲ ರಸ್ತೆ ಸಂಪರ್ಕ ಬಂದ್ ಆಗಿದೆ. ನಾಪೋಕ್ಲು ರಸ್ತೆ ಮೇಲೆ 2 ಅಡಿ ನೀರು ನಿಂತಿದ್ರೆ ಭಾಗಮಂಡಲ ಮಡಿಕೇರಿ ರಸ್ತೆ ಮೇಲೆ 1 ಅಡಿ ನೀರು ನಿಂತಿದೆ. ಮಳೆ ಮತ್ತಷ್ಟು ಹೆಚ್ಚಾದಲ್ಲಿ ಭಾಗಮಂಡಲ ಮಡಿಕೇರಿ ಸಂಪರ್ಕ ಸಂಪೂರ್ಣ ಬಂದ್ ಸಾಧ್ಯತೆ ಇದೆ.

ಇದನ್ನೂ ಓದಿ: ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಶೇ 2 ಮೀಸಲಾತಿಗೆ ತೀರ್ಮಾನ: ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.