ETV Bharat / state

ಕೊಡಗು: ಹುಲಿ ಸೆರೆಗೆ ಸಾಕಾನೆಗಳ ಮೊರೆ ಹೋದ ಅರಣ್ಯ ಇಲಾಖೆ...! - kodagu latest news

ಕೊಡಗು ಜಿಲ್ಲೆಯಲ್ಲಿ ಸರಣಿ ಹುಲಿ ದಾಳಿಗಳ ಪ್ರಕರಣ ಹೆಚ್ಚಾಗುತ್ತಿದ್ದು, ಇದೀಗ ಅರಣ್ಯ ಇಲಾಕೆ ಹುಲಿಗಳನ್ನು ಹಿಡಿಯಲು ಸಾಕಾನೆಗಳ ಮೊರೆ ಹೋಗಿದೆ.

elephants
ಆನೆ
author img

By

Published : May 3, 2020, 10:35 AM IST

ವಿರಾಜಪೇಟೆ/ಕೊಡಗು: ಸಾಕಷ್ಟು ದಿನಗಳಿಂದ ಜನತೆಯ ನಿದ್ದೆ ಗೆಡಿಸಿದ್ದ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಅಂಬಾರಿ ಹೊರುವ ಅಭಿಮನ್ಯು ಸೇರಿದಂತೆ ಸಾಕಾನೆಗಳ ಮೊರೆ ಹೋಗಿದ್ದಾರೆ.

ಹುಲಿ ಸೆರೆಗೆ ಸಾಕಾನೆಗಳ ಮೊರೆ ಹೋದ ಅರಣ್ಯ ಇಲಾಖೆ

ಒಂದೆಡೆ ಕೊರೊನಾ ಜನರನ್ನು ಹೈರಾಣ ಮಾಡಿದ್ದರೆ ಮತ್ತೊಂದಡೆ ಸರಣಿ ಹುಲಿ ದಾಳಿಗಳ ಪ್ರಕರಣಗಳು ಕೊಡಗಿನ ಸುತ್ತಮುತ್ತಲ ಜನತೆಯ ನೆಮ್ಮದಿ ಹಾಳು ಮಾಡಿವೆ. ಇದೀಗ ಅರಣ್ಯ ಇಲಾಖೆ ಹುಲಿ ಹಿಡಿಯಲು ಇತಿಹಾಸ ಪ್ರಸಿದ್ಧ ಮ್ಯೆಸೂರಿನ ದಸರಾದಲ್ಲಿ ಅಂಬಾರಿ ಹೊರುವ ಅಭಿಮನ್ಯು ಜೊತೆಗೆ ಸಾಕಾನೆಗಳಿಂದ ಕಾರ್ಯಾಚರಣೆ ನಡೆಸುತ್ತಿದೆ. ಇನ್ನೂ ಹುಲಿ ಸ್ಥಳ ಬದಲಾವಣೆ ಮಾಡುತ್ತಿರುವುದರಿಂದ ಹಾಗೆಯೇ ಕಾಡಿನಲ್ಲಿ ಜೇನು ಹುಳುಗಳ ಕಾಟದಿಂದ ಕಾರ್ಯಾಚರಣೆಗೆ ಸ್ವಲ್ಪ ಅಡಚಣೆ ಎದುರಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇಲಾಧಿಕಾರಿಗಳ ಆದೇಶದಂತೆ ಅನೇಕ ದಿನಗಳಿಂದ ಜನರಿಗೆ ತೊಂದರೆ ಮಾಡುತ್ತಿರುವ ಹುಲಿಯನ್ನು ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ‌ಇದಕ್ಕಾಗಿ ಅಭಿಮನ್ಯು ಸೇರಿದಂತೆ ಐದು ಸಾಕಾನೆಗಳ ಮೂಲಕ ಕಾರ್ಯಾಚರಣೆ ಮಾಡುತ್ತಿದ್ದು, ಇದಕ್ಕಾಗಿ ಕೆಲವೊಂದು ಕಡೆಗಳಲ್ಲಿ ಬೋನ್‌ಗಳನ್ನೂ ಇಟ್ಟಿದ್ದೇವೆ. ಸದ್ಯದಲ್ಲೇ ಹುಲಿ ಸೆರೆ ಹಿಡಿಯುತ್ತೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳೂ ಭರವಸೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.