ETV Bharat / state

ನೆರೆ ಪರಿಹಾರ ಅನುದಾನ ಬೇರೆ ರಾಜ್ಯಗಳಿಗಿಂತ ಕರ್ನಾಟಕಕ್ಕೇ ಹೆಚ್ಚು ಸಿಕ್ಕಿದೆ: ಪ್ರತಾಪ್​ ಸಿಂಹ

ನೆರೆ ಪರಿಹಾರ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕಕ್ಕೆ ಹೆಚ್ಚಿನ ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ರು.

author img

By

Published : Jan 8, 2020, 8:50 PM IST

MP Pratap simha
ಸಂಸದ ಪ್ರತಾಪ್ ಸಿಂಹ

ಮಡಿಕೇರಿ(ಕೊಡಗು): ನೆರೆ ಪರಿಹಾರವಾಗಿ ಬೇರೆ ರಾಜ್ಯಗಳಿಗಿಂತ ಕರ್ನಾಟಕಕ್ಕೆ ಹೆಚ್ಚಿನ ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ, ಕಾಂಗ್ರೆಸ್ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದಿದ್ದ ಕಾಂಗ್ರೆಸ್ ಸರ್ಕಾರ 10 ವರ್ಷಗಳಲ್ಲಿ ಎಷ್ಟು ಅನುದಾನ ನೀಡಿತ್ತೊ ಅದಕ್ಕಿಂತ ಮೂರು ಪಾಲು ಹೆಚ್ಚಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನೀಡಿದೆ ಎಂದು ಹೆಚ್ಚಿನ ಅನುದಾನ ಕೊಟ್ಟಿಲ್ಲ ಎನ್ನುವ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ್ರು.

ಕೇಂದ್ರದಿಂದ ಕರ್ನಾಟಕಕ್ಕೆ ಹೆಚ್ಚಿನ ನೆರೆ ಪರಿಹಾರ ಸಿಕ್ಕಿದೆ: ಸಂಸದ ಪ್ರತಾಪ್ ಸಿಂಹ

ದೇಶದಲ್ಲಿ ಸಾಕಷ್ಟು ವಿಶ್ವವಿದ್ಯಾಲಯಗಳು ಇವೆ. ಜೆಎನ್‌ಯು, ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯಗಳು ಮಾತ್ರ ಇಲ್ಲ. ಅಲ್ಲಿಯ ವಿದ್ಯಾರ್ಥಿಗಳು ಬಂದು ಬೊಬ್ಬೆ ಹೊಡೆದರೆ, ಎಲ್ಲಾ ವಿದ್ಯಾರ್ಥಿಗಳು ಬೀದಿಗೆ ಬರಲ್ಲ. ಆ ರೀತಿ ಬಿಂಬಿಸುವ ಕೆಲಸವನ್ನು ಕೆಲವರು ಮಾಡಿಸುತ್ತಿದ್ದಾರೆ ಎಂದು ಸಂಸದರು ಆರೋಪಿಸಿದರು.

ಪೌರತ್ವ (ತಿದ್ದುಪಡಿ) ಕಾಯ್ದೆ ಪರವಾದ ರ್ಯಾಲಿಗಳಿಗೆ ಸಾವಿರಾರು ಜನ ಬರುತ್ತಿದ್ದಾರೆ. ದೇಶಕ್ಕೆ ಕೆಟ್ಟ ಹೆಸರು ತರಲು ಕೆಲವರು ನಕಾರಾತ್ಮಕವಾಗಿ ಪ್ರಚಾರ ಮಾಡುತ್ತಿದ್ದಾರೆ. ಮಡಿಕೇರಿಯಲ್ಲಿ ಬಸ್‌ಗೆ ಕಲ್ಲು ತೂರಿದರೆ, ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವವರಿಗೆ ನೋಟಿಸ್ ನೀಡಬೇಕು. ಅವರಿಂದಲೇ ನಷ್ಟವನ್ನು ವಸೂಲಿ ಮಾಡಲಿ ಎಂದು ಪೊಲೀಸರಿಗೆ ಸಂಸದ ಪ್ರತಾಪ್​ ಸಿಂಹ ಮನವಿ ಮಾಡಿದ್ರು.

Intro:ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕಕ್ಕೆ
ಹೆಚ್ಚಿನ ಅನುದಾನ : ಸಂಸದ ಪ್ರತಾಪ್ ಸಿಂಹ..!

ಕೊಡಗು: ಬೇರೆ ರಾಜ್ಯಕ್ಕಿಂತ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಹೆಚ್ಚು‌ಅನುದಾನ ನೀಡಿದ್ದು, ಆದರೆ ಕಾಂಗ್ರೆಸ್ ನಾಯಕರು ದಾರಿ ತಪ್ಪಿಸುವ ಹೇಳಿಕೆ ನೀಡುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ,
ಕಾಂಗ್ರೆಸ್ ಹತ್ತು ವರ್ಷಗಳಲ್ಲಿ ಎಷ್ಟು ಅನುದಾನ ನೀಡಿದೆ.
ಅವರಿಗಿಂತ ಮೂರು ಪಾಲು ಬಿಜೆಪಿಯ ಕೇಂದ್ರ ಸರಕಾರ ನೀಡಿದೆ ಎಂದು ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ಕೊಟ್ಟಿಲ್ಲ ಎನ್ನುವ ವಿರೋಧ ಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದರು.
ಸಿಎಎ ಪರವಾದ ರ್ಯಾಲಿಗೆ ದೇಶದಲ್ಲಿ ಸಾವಿರಾರು ಜನ ಬರುತ್ತಿದ್ದಾರೆ.ದೇಶಕ್ಕೆ ಕೆಟ್ಟ ಹೆಸರು ತರಲು ಕೆಲವರು ನೆಗೆಟಿವ್ ಪ್ರಚಾರ ಮಾಡುತ್ತಾರೆ. ಮಡಿಕೇರಿಯಲ್ಲಿ ಬಸ್‌ಗೆ
ಕಲ್ಲು ತೂರಿದ್ದಾರೆ. ಆಸ್ತಿಗೆ ಹಾನಿ ಮಾಡುವವರಿಗೆ ನೋಟೀಸ್ ನೀಡಿ. ಬಸ್‌ಗೆ ಕಲ್ಲು ಹೊಡೆಯುವವರಿಗೆ ನೊಟೀಸ್ ಕೊಡಿ.
ಅವರಿಂದಲೇ ನಷ್ಟವನ್ನು ವಸೂಲಿ ಮಾಡಲಿ ಎಂದರು.
ದೇಶದಲ್ಲಿ ಸಾಕಷ್ಟು ವಿಶ್ವವಿದ್ಯಾಲಯಗಳು ಇವೆ.
ಕೇವಲ ಜೆಎನ್‌ಯು , ಜಾಮಿಯ ವಿಶ್ವವಿದ್ಯಾಲಯ ಇರೋದಲ್ಲ. ಅಲ್ಲಿಯ ವಿದ್ಯಾರ್ಥಿಗಳು ಬಂದು ಬೊಬ್ಬೆ ಹೊಡೆದರೆ ,ಎಲ್ಲಾ ವಿದ್ಯಾರ್ಥಿಗಳು ಬೀದಿಗೆ ಬರಲ್ಲ.
ಆ ರೀತಿ ಬಿಂಬಿಸುವ ಕೆಲಸವನ್ನು ಕೆಲವರು ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು‌.

Body:0

Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.