ಕರಡಿಗೋಡು (ಕೊಡಗು): ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಸತತ ಮಳೆಯಿಂದಾಗಿ ಕಾವೇರಿ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಹೀಗಾಗಿ, ನದಿ ಪಾತ್ರದ ಜನರಲ್ಲಿ ಆತಂಕ ಮನೆಮಾಡಿದೆ.
ಹಲವೆಡೆ ಜೋರು ಗಾಳಿಗೆ ಮರಗಳು ರಸ್ತೆಗಳಿಗೆ ಉರುಳಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದ್ದು, ತಲಕಾವೇರಿ-ಭಾಗಮಂಡಲ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ.
ಸೂಕ್ಷ್ಮ ಪ್ರದೆಶಗಳಾದ ಕರಡಿಗೋಡು, ಸಿದ್ಧಾಪುರ, ನೆಲ್ಯಹುದಿಕೇರಿ, ಕುಂಬಾರಗುಂಡಿ, ಗುಹ್ಯ ಭಾಗದಲ್ಲಿ ಕಾವೇರಿ ಪ್ರವಾಹದ ರೀತಿಯಲ್ಲಿ ಹರಿಯುತ್ತಿರುವುದರಿಂದ ಈ ಪ್ರದೇಶಗಳು ಜಲಾವೃತವಾಗುವ ಭೀತಿ ಎದುರಾಗಿದೆ.
ಹಾಗೆಯೇ ಮಡಿಕೇರಿ ತಾಲೂಕಿನ ಭೇತ್ರಿ ಗ್ರಾಮದ ಸಮೀಪದ ಮೇಲ್ಸೇತುವೆ ಎತ್ತರಕ್ಕೆ ಕಾವೇರಿ ಹರಿಯುತ್ತಿದೆ. ಈಗಾಗಲೇ ಅಪಾಯದ ಪ್ರದೇಶಗಳಿಗೆ ಎನ್‌ಡಿಆರ್‌ಎಫ್ ತಂಡ ಭೇಟಿ ನೀಡಿ ಪರಿಶೀಲನೆ ಪರಿಶೀಲನೆ ನಡೆಸಿದೆ. ಇಡೀ ರಾತ್ರಿ ಸುರಿದ ಮಳೆ ಬೆಳಗ್ಗೆ ಮತ್ತಷ್ಟು ಬಿರುಸು ಪಡೆದುಕೊಂಡಿದೆ. ವರುಣನ ಅಬ್ಬರ ಹೀಗೆ ಮುಂದುವರೆದರೆ ಪ್ರವಾಹ ಸೃಷ್ಟಿಯಾಗಲಿದೆ.