ಕೊಡಗು: ಬ್ರಹ್ಮಗಿರಿ ಗುಡ್ಡ ಕುಸಿದು ಹತ್ತು ದಿನಗಳ ಬಳಿಕ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಆದರೆ ಕಣ್ಮರೆಯಾಗಿರುವ ಇಬ್ಬರು ಸಹಾಯಕ ಅರ್ಚಕರ ದೇಹದ ಹೋಲಿಕೆ ಒಂದೇ ರೀತಿ ಇರುವುದರಿಂದ ಮೃತದೇಹ ಯಾರದ್ದೆಂದು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಅನೀಸ್ ಕೆ. ಜಾಯ್ ತಿಳಿಸಿದ್ದಾರೆ.
ಇದನ್ನು ಓದಿ: ಬ್ರಹ್ಮಗಿರಿ ಗುಡ್ಡ ಕುಸಿತ ದುರಂತ: ಮತ್ತೊಂದು ಮೃತದೇಹ ಪತ್ತೆ
ಇಂದು ಸಿಕ್ಕಿರುವ ಮೃತದೇಹ ಸಂಪೂರ್ಣ ಕೊಳೆತು ಹೋಗಿದ್ದು, ಪತ್ತೆಯಾಗಿರುವ ಶವ ಪುರುಷನದ್ದೆಂದು ಭಾಸವಾಗುತ್ತಿದೆ. ಇಬ್ಬರ ಮೃತದೇಹಗಳ ಹೋಲಿಕೆ ಒಂದೇ ರೀತಿ ಇರುವುದರಿಂದ ದೊರೆತಿರುವ ಶವ ಯಾರದ್ದೆಂದು ಗುರುತಿಸಲು ಆಗುತ್ತಿಲ್ಲ. ಇವರ ಸಂಬಂಧಿಕರು ಬಂದ ಬಳಿಕವಷ್ಟೇ ಶವವನ್ನು ಪತ್ತೆ ಹಚ್ಚಬೇಕಾಗಿದೆ. ಇಲ್ಲದಿದ್ದರೆ ಡಿಎನ್ಎ ಪರೀಕ್ಷೆಗೆ ಕಳುಹಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ತಲಕಾವೇರಿಯಲ್ಲಿ ಸಹಾಯಕ ಅರ್ಚಕರಾಗಿದ್ದ ರವಿಕಿರಣ್ ಮತ್ತು ಶ್ರೀನಿವಾಸ್ ಕೂಡ ನಾಪತ್ತೆಯಾಗಿದ್ದರು.