ETV Bharat / state

ಕೊಡಗಿನಲ್ಲಿ ಬೇಡು ಹಬ್ಬ ಸಂಭ್ರಮ: ಸಿಂಗರಿಸಿದ ಕೃತಕ ಕುದುರೆ ಹೊತ್ತು ಸಾಗಿದ ವ್ರತಧಾರಿಗಳು

ಕೊಡಗಿನ ಇತಿಹಾಸ ಪ್ರಸಿದ್ಧ ಕುಂದಾ ಬೆಟ್ಟದಲ್ಲಿರುವ ಬೊಟ್ಟ್ಲಪ್ಪ ದೇವಸ್ಥಾನದಲ್ಲಿ ಕೊಡವರ ವಿಶೇಷ ಹಬ್ಬ ಬೇಡು ಹಬ್ಬವನ್ನು ಆಚರಿಸಲಾಯಿತು.

kodavas-bedu-habba-at-kodagu
ಕೊಡವರ ವಿಶೇಷ ಬೇಡು ಹಬ್ಬ : ಸಿಂಗರಿಸಿದ ಕೃತಕ ಕುದುರೆ ಹೊತ್ತು ಸಾಗಿದ ವ್ರತಧಾರಿಗಳು
author img

By

Published : Oct 20, 2022, 4:01 PM IST

Updated : Oct 20, 2022, 5:15 PM IST

ಕೊಡಗು: ಕೊಡಗಿನಲ್ಲಿ ಪಾಂಡವ ನಿರ್ಮಿತ ದೇವಾಲಯದಲ್ಲಿ ಇಲ್ಲಿನ ವಿಶೇಷ ಆಚರಣೆ ಬೇಡು ಹಬ್ಬ ಮೇಳೈಸಿತ್ತು. ತುಲಾ ಸಂಕ್ರಮಣದ ಸಂದರ್ಭದಲ್ಲಿ ಗ್ರಾಮಸ್ಥರೆಲ್ಲ ಸೇರಿ ಈ ಹಬ್ಬವನ್ನು ಆಚರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ.

ಇಲ್ಲಿನ ಇತಿಹಾಸ ಪ್ರಸಿದ್ಧ ಕುಂದಾ ಬೆಟ್ಟದಲ್ಲಿರುವ ಬೊಟ್ಟ್ಲಪ್ಪ ದೇವಸ್ಥಾನದಲ್ಲಿ ಕೊಡಗಿನ ಮೊದಲ ಹಬ್ಬವಾದ ಬೇಡುಹಬ್ಬವು ಸಂಪ್ರದಾಯ ಬದ್ಧವಾಗಿ ನಡೆಯಿತು. ಅಜ್ಞಾತ ವಾಸದಲ್ಲಿದ್ದ ಪಾಂಡವರು ಕುಂದಾ ಬೆಟ್ಟಕ್ಕೆ ಬಂದು ರಾತ್ರಿಯಿಂದ ಬೆಳಗಾಗುವುದರೊಳಗೆ ಕಲ್ಲಿನಲ್ಲಿ ದೇವಸ್ಥಾನವನ್ನು ನಿರ್ಮಿಸಿದ್ದರು ಎಂಬುದು ಪ್ರತೀತಿ. ನಂತರದಲ್ಲಿ ಇಲ್ಲಿನ ಮೂಲ ನಿವಾಸಿಗಳು ಈ ಬೇಡುಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಕೊಡಗಿನ ಮೊದಲ ಬೇಡುಹಬ್ಬಕ್ಕೆ ಕುಂದಾ ಬೆಟ್ಟದಲ್ಲಿ ಚಾಲನೆ ದೊರೆತರೆ, ಕೊನೆಯ ಬೇಡುಹಬ್ಬ ಬೇರಳಿ ನಾಡಿನ ಪಾರಣ ಬೇಡು ಹಬ್ಬವಾಗಿದೆ. ಇದರಿಂದಲೇ ಬೇಡುಹಬ್ಬದ ಹಾಡಿನಲ್ಲಿ "ಕುಂದಾತ್ ಬೊಟ್ಟ್ ಲ್ ನೇಂದಾ ಕುದುರೆ.. ಪಾರಣ ಮಾನಿಲ್ ಅಳ್ಂಜ ಕುದುರೆ" ಎಂದು ಹಾಡಲಾಗುತ್ತದೆ.

ಕೊಡಗಿನಲ್ಲಿ ಬೇಡು ಹಬ್ಬ ಸಂಭ್ರಮ: ಸಿಂಗರಿಸಿದ ಕೃತಕ ಕುದುರೆ ಹೊತ್ತು ಸಾಗಿದ ವ್ರತಧಾರಿಗಳು

ವಿವಿಧ ವೇಷ ತೊಟ್ಟು ಮನೆ ಮನೆಗೆ ತೆರಳುವ ಪದ್ಧತಿ: ಪುರಾತನ ಸಂಪ್ರದಾಯದಂತೆ ವಾರದ ಹಿಂದೆ ಹಬ್ಬಕ್ಕೆ ಕಟ್ಟು ಬಿದ್ದು ತೀರ್ಥೋದ್ಬವದ ದಿವಸ ರಾತ್ರಿ ಮನೆಕಳಿ (ವಿವಿಧ ವೇಷ ತೊಟ್ಟವರು ಮನೆ ಮನೆಗೆ ತೆರಳುವುದು) ನಡೆಯುವುದು ಇಲ್ಲಿನ ವಾಡಿಕೆ. ಅದೇ ರೀತಿ ತುಲಾ ಸಂಕ್ರಮಣಕ್ಕೆ ಒಂದು ವಾರ ಮುಂಚಿತವಾಗಿ ದೇವಾಲಯದ ತಕ್ಕ ಮುಖ್ಯಸ್ಥರ ಸಮ್ಮುಖದಲ್ಲಿ ಊರಿನವರು ಅಂಬಲದಲ್ಲಿ ಸೇರುತ್ತಾರೆ. ಬಳಿಕ ಡೋಲಿಗೆ ಅರ್ಚಕರು ಪೂಜೆ ಸಲ್ಲಿಸಿದ ನಂತರ ಹಬ್ಬದ ದಿನದವರೆಗೆ ದೇವರ ಅಂಬಲದಲ್ಲಿ ದೇವರ ಹಾಡನ್ನು ಹಾಡುತ್ತಾರೆ.

ಸಿಂಗರಿಸಿದ ಕೃತಕ ಕುದುರೆ ಹೊತ್ತು ಸಾಗುವ ವ್ರತಧಾರಿಗಳು: ಸಣ್ಣುವಂಡ ಹಾಗೂ ಮನೆಯಪಂಡ ಐನ್ ಮನೆಯಿಂದ ಒಡ್ಡೋಲಗದೊಂದಿಗೆ ಕೃತಕವಾಗಿ‌ ಸಿಂಗರಿಸಿದ ಕುದುರೆ ಹೊತ್ತ ವ್ರತಧಾರಿಗಳು ಅಂಬಲದಲ್ಲಿ(ದೇವರ ಕಟ್ಟುಪಾಡುಗಳು ನಡೆಯುವ ಸ್ಥಳ) ಸೇರಿ ಪ್ರಾರ್ಥನೆ ಸಲ್ಲಿಸುತ್ತಾರೆ. ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಕುಂದಾ ಸಮೀಪದಲ್ಲಿರುವ ಕುಂದಾ ಬೆಟ್ಟದ ತಪ್ಪಲಿನಲ್ಲಿರುವ ಅಂಬಲದಲ್ಲಿ ಮೊದಲ ಬೇಡುಹಬ್ಬದ ದಿನ ವಿವಿಧ ವೇಷ ಹೊರಡುವ ಮೂಲಕ ಡೋಲಿ ಕೊಟ್ಟಿಗೆ ದೇವಾಲಯದ ಸುತ್ತ ಹೆಜ್ಜೆ ಹಾಕಿ ಕುಣಿಯುತ್ತಾರೆ.

ಕುದುರೆ ಕುಣಿತದ ಮೂಲಕ ಹರಕೆ ತೀರಿಸುವ ಆಚರಣೆ: ತೀರ್ಥೋದ್ಬವದ ಮರುದಿನ ತಲಕಾವೇರಿಯಿಂದ ತೀರ್ಥ ತಂದು ಬೆಟ್ಟದ ಮೇಲಿನ ಈಶ್ವರ ದೇವರಿಗೆ ಅರ್ಪಿಸಿ ಹಬ್ಬ ನೇರವೇರಿಸಲಾಗುತ್ತದೆ. ಅಂದು ಮಧ್ಯಾಹ್ನ ದೇವಾಲಯದ ಭಂಡಾರ ತಕ್ಕರಾದ ಸಣ್ಣುವಂಡ ಹಾಗು ಮನೆಯಪಂಡ ಐನ್ ಮನೆಯಿಂದ ಓಡ್ಡೋಲಗದೊಂದಿಗೆ ಕೃತಕವಾಗಿ ಶೃಂಗರಿಸಲಾದ ಕುದುರೆಯನ್ನು ಹೊತ್ತ ವ್ರತಧಾರಿಗಳು ಅಂಬಲದಲ್ಲಿ ಸೇರುತ್ತಾರೆ. ಎತ್ತರದ ಕುಂದಾ ಬೆಟ್ಟವನ್ನು ಯಾವುದೇ ಆಯಾಸವಿಲ್ಲದೆ ಏರಿ ದೇವಾಯದ ಸುತ್ತಲು ಕುದುರೆ ಕುಣಿಯುವ ಮೂಲಕ ಹರಕೆ ತೀರಿಸುವುದರೊಂದಿಗೆ ವಿವಿಧ ವೇಷಧಾರಿಗಳ ಕುಣಿತ ಗಮನ ಸೆಳೆಯುತ್ತಾರೆ. ನಂತರ ಊರಿನವರು ಭಕ್ತಾದಿಗಳು ದೇವರಿಗೆ ಹರಕೆ ಒಪ್ಪಿಸುತ್ತಾರೆ. ನಂತರದಲ್ಲಿ ಅಂಬಲಕ್ಕೆ ಬಂದು ಬಿದಿರಿನ ಕೃತಕ ಕುದುರೆಯನ್ನು ತೆಗೆಯುವ ಮೂಲಕ ಹಬ್ಬಕ್ಕೆ ತೆರೆ ಎಳೆಯುವ ಪದ್ಧತಿ ವಿಶಿಷ್ಠವಾಗಿದೆ.

ಇದನ್ನೂ ಓದಿ :ಭೂತಾರಾಧನೆ ಮಾಡುವ ಹಿರಿಯ ದೈವ ನರ್ತಕರಿಗೆ ಮಾಸಾಶನ ಘೋಷಿಸಿದ ಸರ್ಕಾರ

Last Updated : Oct 20, 2022, 5:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.