ETV Bharat / state

ಸಾವಿನ ಸೂತಕದ ಮಧ್ಯೆ ಮುನ್ನೆಲೆಗೆ ಬಂದ ಮೃತ ನಾರಾಯಣ ಆಚಾರ್‌ರ ಸಂಪತ್ತು - kodagu special news

ಬ್ರಹ್ಮಗಿರಿ ಬೆಟ್ಟಸಾಲು ಕುಸಿದು ವಾರ ಕಳೆಯುತ್ತಾ ಬಂದಿದೆ. ಇದೇ ಸಂದರ್ಭದಲ್ಲಿ ಮೃತ ನಾರಾಯಣ ಆಚಾರ್ ದೇವಾಲಯದ ಸಂಪತ್ತನ್ನು ಸಂಗ್ರಹಿಸಿದ್ದರು ಎನ್ನುವ ಆಧಾರ ರಹಿತವಾದ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.

Narayana Achar
ಮೃತ ನಾರಾಯಣ ಆಚಾರ್‌
author img

By

Published : Aug 11, 2020, 7:20 PM IST

ಕೊಡಗು‌ (ತಲಕಾವೇರಿ): ತಲಕಾವೇರಿಯಲ್ಲಿ ಬ್ರಹ್ಮಗಿರಿ ಬೆಟ್ಟದ ಸಾಲುಗಳಲ್ಲಿ ಗುಡ್ಡು ಕುಸಿದು ಒಂದು ವಾರ ಕಳೆಯುತ್ತಿದೆ. ಕಣ್ಮರೆ ಆದವರ ಪತ್ತೆ ಕಾರ್ಯಾಚರಣೆ ಭರದಿಂದ ಸಾಗಿದೆ. ಈ ನಡುವೆ ಮತ್ತೊಂದೆಡೆ, ಮೃತ ನಾರಾಯಣ ಆಚಾರ್ ದೇವಾಲಯದ ಸಂಪತ್ತನ್ನು ಸಂಗ್ರಹಿಸಿದ್ದರು ಎನ್ನುವ ಆಧಾರರಹಿತವಾದ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.

ಮೃತ ನಾರಾಯಣ ಆಚಾರ್ ವಿರುದ್ಧ ಆಧಾರ ರಹಿತವಾದ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.

ಬ್ರಹ್ಮಗಿರಿ ಬೆಟ್ಟಸಾಲು ಕುಸಿದು ವಾರ ಕಳೆಯುತ್ತಾ ಬಂದಿದೆ. ವಿಪರೀತ ಮಳೆ ಹಾಗೂ ಮಂಜು ಕವಿದ ಪ್ರತಿಕೂಲ ವಾತಾವರಣದ ನಡುವೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸರು, ಅರಣ್ಯ ಸಿಬ್ಬಂದಿ ಪ್ರಾಣ ಒತ್ತೆಯಿಟ್ಟು ಕಣ್ಮರೆಯಾದವರ ರಕ್ಷಣೆಗೆ ಮುಂದಾಗಿದ್ದಾರೆ. ಸಂಜೆ ದೇವಾಲಯದ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್‌ರ ಮೃತದೇಹವನ್ನು ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ.‌ ಇಡೀ ಕುಟುಂಬವೇ ದುಃಖದಲ್ಲಿ ಮುಳುಗಿದ್ದರೆ, ಪ್ರಧಾನ ಅರ್ಚಕರಾದ ಮೃತ ಆಚಾರ್ ದೇವಾಲಯದ ತಟ್ಟೆಗೆ ಭಕ್ತರು ಹಾಕುತ್ತಿದ್ದ ಚಿಲ್ಲರೆ ಹಣವನ್ನು ಕೊಂಡೊಯ್ಯುತ್ತಿದ್ದರು. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಫ್ಲಾಟ್​ ಹೊಂದಿದ್ದಾರೆ. ತಾಮ್ರ-ಬೆಳ್ಳಿ ವಸ್ತುಗಳನ್ನು ಹೊಂದಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ.

ನಾರಾಯಣ ಆಚಾರ್ ಮೂಲತಃ ತಲಕಾವೇರಿಯವರೇ ಆಗಿದ್ದು, ವಂಶ ಪರಂಪರೆಯಾಗಿ ಪೂಜೆ ಮಾಡಿಕೊಂಡು ಬಂದಿದ್ದು ನೂರಾರು ಎಕರೆ ಏಲಕ್ಕಿ, ಕಾಳು ಮೆಣಸು ಮತ್ತು ಕಾಫಿ ತೋಟ ಹೊಂದಿದ್ದಾರೆ. ಅರ್ಚಕರಾದ ಮೇಲೆ ತಟ್ಟೆ ಕಾಸು ತೆಗೆದುಕೊಂಡಿದ್ದಾರೆಯೇ ಹೊರತು, ಆಸ್ತಿ-ಹಣ, ಚಿನ್ನ ಮಾಡುವಂತಹ ದುರಾಸೆಯನ್ನು ಅವರು ಹೊಂದಿರಲಿಲ್ಲ. ‌ಇಂತಹ ಸಂಕಷ್ಟದ ಸಮಯದಲ್ಲಿ ಯಾರೂ ವಿಕೃತವಾಗಿ ಮಾತನಾಡಬಾರದು. ಯಾರೇ ಅವರ ಮನೆಗೆ ಹೋದರೂ ಆತ್ಮೀಯವಾಗಿ ಸತ್ಕರಿಸುವಂತಹ ಸಂಸ್ಕಾರವನ್ನು ಮೈಗೂಡಿಸಿಕೊಂಡಿದ್ದರು ಎಂದು ಜನಪ್ರತಿನಿಧಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅರ್ಚಕರು ಅಂದ ಮೇಲೆ ತಟ್ಟೆ ಕಾಸನ್ನು ತೆಗೆದುಕೊಳ್ಳುತ್ತಾರೆ.‌‌ ನಾವು ಚಿಕ್ಕವರಿದ್ದಾಗಲೇ ಅವರು ಅಪಾರ ಪ್ರಮಾಣದ ಏಲಕ್ಕಿ ಕೊಯ್ಯುತ್ತಿದ್ದರು. ಅಲ್ಲದೆ ಮೊದಲಿಂದಲೂ ಸ್ಥಿತಿವಂತರಾಗಿದ್ದರು. ಇಷ್ಟೆಲ್ಲ ಸಂಕಷ್ಟದ ಮಧ್ಯೆ ಆರಾಮವಾಗಿ ಇರುವಂತೆ ಹೇಳಿದ್ದರೂ‌, ಆ ರೀತಿ ಆಗುವುದಿಲ್ಲ. ಬೆಂಗಳೂರಿಗೆ ಹೋಗಬಹುದು ಆದರೆ ವಂಶಪಾರಂಪರ್ಯವಾಗಿ ಇಲ್ಲಿ ಪೂಜೆ ಮಾಡುತ್ತಿರುವುದರಿಂದ ಒಂದು ವೇಳೆ ಬಿಟ್ಟು ಹೋದರೆ ಹೆತ್ತ ತಾಯಿಗೆ ಮೋಸ ಮಾಡಿದಂತೆ ಆಗುತ್ತದೆ ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದಿದ್ದರಂತೆ.

ಒಟ್ಟಿನಲ್ಲಿ ಸಾವಿನ ಸೂತಕದ ನಡುವೆ ನಾರಾಯಣ ಆಚಾರ್ ಅವರ ಸಂಪತ್ತು ಮುನ್ನಲೆಗೆ ಬಂದಿದೆ. ಆದರೆ ಬೆಟ್ಟ ಕುಸಿದು ಇಡೀ ಕುಟುಂಬವೇ ಕಣ್ಮರೆಯಾಗಿರುವ ಸಂದರ್ಭದಲ್ಲಿ ಕಣ್ಣೀರಿನ ಕಡಲಲ್ಲಿ ಕೈ ತೊಳೆಯುತ್ತಿರುವ ಪರಿಸ್ಥಿತಿಯಲ್ಲಿ ಇದೆಲ್ಲ ಅಗತ್ಯವಿದೆಯೇ? ಎಂದು ಪ್ರಜ್ಞಾವಂತರು ಮಾತನಾಡಿಕೊಳ್ಳುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.