ಕೊಡಗು: ಜಿಲ್ಲೆಯಲ್ಲಿ 10 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಜ್ವರದಿಂದ ಬಳಲುತ್ತಿದ್ದ 9 ಜನರಿಗೆ ಸೋಂಕು ತಗುಲಿದೆ.
ಬೆಂಗಳೂರಿನಿಂದ ಹಿಂದಿರುಗಿದ್ದ ವ್ಯಕ್ತಿ ಸೇರಿದಂತೆ ಸೋಮವಾರಪೇಟೆ ತಾಲೂಕಿನ ನೀರುಗುಂದ ಗ್ರಾಮದಲ್ಲಿ ಜ್ವರದಿಂದ ಬಳಲುತ್ತಿದ್ದ 36 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.
ಕಾರೆಕೊಪ್ಪದ 41 ವರ್ಷದ ಮಹಿಳೆ, ಕಕ್ಕೆಹೊಳೆ ಗ್ರಾಮದ 25 ವರ್ಷದ ಮಹಿಳೆ, ಗೋಪಾಲಪುರ ಗ್ರಾಮದ 25 ವರ್ಷದ ಯುವಕ ಹಾಗೂ ಚೇರಳ ಶ್ರೀಮಂಗಲದ 62 ವರ್ಷದ ವೃದ್ಧ, ಸುಂಟಿಕೊಪ್ಪದ 59 ವರ್ಷದ ವ್ಯಕ್ತಿ ಹಾಗೂ ಮಡಿಕೇರಿ ಪಟ್ಟಣದ 28 ವರ್ಷದ ಯುವಕ, ಗದ್ದುಗೆ ಬಳಿ ಜ್ವರದ ಲಕ್ಷಣಗಳಿಂದ ಬಳಲುತ್ತಿದ್ದ ವ್ಯಕ್ತಿ, ಕುಶಾಲನಗರದ ಬೈಚನಹಳ್ಳಿಯ 25 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ.
ಕುಶಾಲನಗರದ ಕೋಣಮಾರಿಯಮ್ಮ ದೇವಸ್ಥಾನ ಬಳಿ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದ್ದು, ಬೆಂಗಳೂರಿನಿಂದ ಹಿಂದಿರುಗಿದ್ದ 24 ವರ್ಷದ ಯುವಕ ಮತ್ತು ಸೋಮವಾರಪೇಟೆ ತಾಲೂಕಿನ ಗೋಪಾಲಪುರದ ನಿವಾಸಿಗಳಿಗೆ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 179ಕ್ಕೇರಿದೆ.