ಸೇಡಂ : ತಾಲೂಕಿನ ಮಳಖೇಡ ಗ್ರಾಮದ ಸಮೀಪದ ಚಿತ್ತಾಪುರ ರಸ್ತೆಯ ಸೇತುವೆ ಬಳಿ ಅಪರಿಚಿತ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ.
ಕಾಗಿಣಾ ನದಿಯ ಹಿನ್ನೀರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ತೇಲಿ ಬಂದಿದ್ದು, ಮೃತ ಮಹಿಳೆಯ ವಯಸ್ಸು 40 ರಿಂದ 45 ಆಗಿರಬಹುದೆಂದು ಅಂದಾಜಿಸಲಾಗಿದೆ.
ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ಗೊತ್ತಾದಲ್ಲಿ ಮಳಖೇಡ ಪೊಲೀಸ್ ಠಾಣೆಯ ಪಿಎಸ್ಐ ಶಿವಶಂಕರ ಸಾಹು ಅವರ ಮೊಬೈಲ್ ಸಂಖ್ಯೆ -9480803595 ಗೆ ಸಂಪರ್ಕಿಸುವಂತೆ ಕೋರಿದ್ದಾರೆ.