ಕಲಬುರಗಿ: ಶಹಾಬಜಾರ ದರ್ಗಾ ಹಜರತ್ ಮೌಲಾಲಿ ಅಧಿಸೂಚಿತ ವಕ್ಫ್ ಸಂಸ್ಥೆಗೆ ಸೇರಿದ ಆಸ್ತಿಯನ್ನು ಅನಧೀಕೃತ ಮಾರಾಟ ಹಾಗೂ ಖರೀದಿ ಮಾಡಿದ 8 ಜನರಿಗೆ ಸಮನ್ಸ್ ಜಾರಿ ಮಾಡಲಾಗಿದೆ.
ಡಿಸೆಂಬರ್ 12ರಂದು ಬೆಂಗಳೂರಿನ ಕರ್ನಾಟಕ ವಕ್ಫ್ ಬೋರ್ಡ್ ವಿಚಾರಣಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಕಲಬುರಗಿ ಜಿಲ್ಲಾ ವಕ್ಫ್ ಅಧಿಕಾರಿಗಳು ತಿಳಿಸಿದ್ದಾರೆ. ವಕ್ಫ್ ಕಾಯ್ದೆ 1955ರ ಅಧಿನಿಯಮ 52ರ ಅಡಿಯಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಲಿದೆ.
ಕಲಬುರಗಿ ಸರ್ವೆ ನಂಬರ್ 1/1ಬಿನಲ್ಲಿರುವ ಸ್ಥಳವನ್ನು ಅನಧಿಕೃತವಾಗಿ ಪ್ಲಾಟ್ ಮಾಡಿ ಮಾರಾಟ ಮಾಡಲಾಗಿದೆ. ಕೈಲಾಸ ನಗರದ ಬಸವರಾಜ ಪಾಟೀಲ್ ಇವರು, ಪ್ಲಾಟ್ ನಂ.52ನ್ನು ಸಂಗಪ್ಪ ಮದರಿ ಅವರಿಗೆ, ರೇವಣಸಿದ್ದಪ್ಪ ಬೇಲೂರ ಇವರು ಪ್ಲಾಟ್ ನಂ.73ನ್ನು ಜಯಾ ಪಟೇಲ್ ಅವರಿಗೆ, ಅಫಜಲಪುರ ತಾಲೂಕಿನ ಗೌಡಗಾಂವದ ಮಲ್ಲಿಕಾರ್ಜುನ ಪಾಟೀಲ್ ಇವರು ಪ್ಲಾಟ್ ನಂ.51ನ್ನು ಶ್ರೀನಿವಾಸ ಆರ್. ಸೋದಮ್ ಅವರಿಗೆ, ಎಂ.ಎಸ್. ಶೆಟ್ಟಿ ಕನ್‍ಸ್ಟ್ರಕ್ಷನ್ ಇವರು ಪ್ಲಾಟ್ ನಂ.54ನ್ನು ಸಂಗೀತಾ ವನವಾಡಾ ಅವರಿಗೆ ಹಾಗೂ ಪ್ಲಾಟ್ ನಂ.74ನ್ನು ಕುಪೇಂದ್ರ ಚಿಂಚೋಳಿ ಅವರಿಗೆ, ಎಂ.ಎಸ್. ಶೆಟ್ಟಿ ಕನ್‍ಸ್ಟ್ರಕ್ಷನ್ ಇವರು, ಪ್ಲಾಟ್ ನಂ.61ನ್ನು ಬಾಗವಾನ ನರಹರಿರಾವ್ ಅಷ್ಠೇಕರ್ ಅವರಿಗೆ, ಪ್ಲಾಟ್ ನಂ.46ನ್ನು ದಿನೇಶ್ ಜಯಂತಿಲಾಲ್ ಟ್ಯಾಂಕ್ ಅವರಿಗೆ ಮಾರಾಟ ಮಾಡಿದ್ದಾರೆ.
ಪ್ಲಾಟ್ ನಂ. 49/ಎನ್ನು ಚಂದ್ರಕಲಾ ಇವರು ತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್ ಲಿಮಿಟೆಡ್ ಅವರಿಗೆ ಪ್ಲಾಟ್ ಮಾರಾಟ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.