ಕಲಬುರಗಿ: ಕಬ್ಬಿನ ಹೊಲಕ್ಕೆ ನೀರುಣಿಸಲು ಹೋಗುತ್ತಿದ್ದ ವೇಳೆ ವಿದ್ಯುತ್ ತಂತಿ ತುಳಿದು ಇಬ್ಬರು ರೈತರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಆಳಂದ ತಾಲೂಕಿನ ಧಂಗಾಪೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಅಂಬಾದಾಸ ಗೊಂದಳೆ (58) ಹಾಗೂ ಕೃಷ್ಣಾ ಗೊಂದಳೆ (18) ಮೃತ ದುರ್ದೈವಿಗಳು. ಹೊಲದಲ್ಲಿ ಹಾದುಹೋದ ವಿದ್ಯುತ್ ತಂತಿ ಕಡಿದು ಬಿದ್ದಿರುವುದನ್ನು ಗಮನಿಸದ ಇಬ್ಬರು, ಇದನ್ನು ತುಳಿದ ಪರಿಣಾಮ ಸಾವನ್ನಪಿದ್ದಾರೆ ಎಂದು ತಿಳಿದುಬಂದಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಸ್ಥಳಕ್ಕೆ ಪಿಎಸ್ಐ ಸುವರ್ಣಾ ಮಲಶೆಟ್ಟಿ, ಗ್ರಾಮ ಲೇಖಾಪಾಲಕ ಪ್ರಭುಲಿಂಗ ತಟ್ಟೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.