ETV Bharat / state

ಚಿಕ್ಕಂದಿನಿಂದಲೂ ಒಟ್ಟಾಗೇ ಬೆಳೆದರು: ಸಾವಿನಲ್ಲೂ ಒಂದಾದ ಕುಚುಕು ಗೆಳೆಯರು - ಕಲಬುರಗಿಯಲ್ಲಿ ರಸ್ತೆ ಅಪಘಾತ

ಕಲಬುರಗಿಯ ಮಲ್ಲಾಬಾದ ಬಳಿ ಇಬ್ಬರು ಸ್ನೇಹಿತರು ಕೆಲಸ ಮುಗಿಸಿಕೊಂಡು ಬೈಕ್​ನಲ್ಲಿ ಊರಿಗೆ ಹಿಂದಿರುಗುತ್ತಿದ್ದರು. ಈ ವೇಳೆ ರಸ್ತೆ ಅಪಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ. ಇವರಿಬ್ಬರು ಯಾವಾಗಲೂ ಜೊತೆಯಾಗಿಯೇ ಇರುತ್ತಿದ್ದರು. ಇದೀಗ ಸಾವಿನಲ್ಲೂ ಒಂದಾಗಿದ್ದಾರೆ.

ಇಬ್ಬರು ಸ್ನೇಹಿತರು ಸಾವು
Two close friends died in road accident at Kalaburagi
author img

By

Published : Feb 15, 2021, 7:53 AM IST

ಕಲಬುರಗಿ: ಅವರಿಬ್ಬರು ಒಂದೇ ಗ್ರಾಮದವರು, ಚಿಕ್ಕಂದಿನಿಂದ ಒಟ್ಟಾಗಿ ಬೆಳೆದ ಕುಚುಕುಗಳು. ಎಲ್ಲಿಗೆ ಹೋದರೂ ಇಬ್ಬರೂ ಜೊತೆಯಾಗಿಯೇ ಹೋಗುತ್ತಿದ್ದರು. ಇದೀಗ ಸಾವಿನ ಮನೆಗೂ ಒಟ್ಟೊಟ್ಟಿಗೆ ಹೋಗಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.

ಬಂದರವಾಡ ಗ್ರಾಮದ ಮಂಜುನಾಥ ತ್ರೀಶೂಲ್ (30) ಮತ್ತು ಮಂಜುನಾಥ ಪೂಜಾರಿ (30) ಸಾವಿನಲ್ಲೂ ಒಂದಾದ ಸ್ನೇಹಿತರು. ಇವರು ಅಫಜಲಪುರದಲ್ಲಿ ಕೆಲಸ ಮುಗಿಸಿಕೊಂಡು ರಾತ್ರಿ ಬೈಕ್​ನಲ್ಲಿ ಊರಿಗೆ ಹಿಂದಿರುಗುತ್ತಿದ್ದ ವೇಳೆ ಮಲ್ಲಾಬಾದ್​ ಬಳಿ ರಸ್ತೆ ಅಪಘಾತ ಸಂಭವಿಸಿದೆ. ಈ ವೇಳೆ ಸ್ಥಳದಲ್ಲೇ ಮಂಜುನಾಥ್​​ ಸಾವನ್ನಪ್ಪಿದ. ಇನ್ನೋರ್ವ ಮಂಜುನಾಥ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.

ಓದಿ: ನೆಲ್ಯಾಡಿ : ಅಡ್ಡಹೊಳೆ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು

ಸಾವಿನಲ್ಲೂ ಒಂದಾಗಿ ಬದುಕಿನ ಪಯಣ ಮುಗಿಸಿದ ಈ ಸ್ನೇಹಿತರ ಸಾವಿಗೆ ಗ್ರಾಮಸ್ಥರು ಕಂಬಿನಿ ಮಿಡಿದಿದ್ದಾರೆ. ಅವರವರ ಸಂಪ್ರದಾಯದಂತೆ ಇಬ್ಬರು ಸ್ನೇಹಿತರ ಅಂತ್ಯಸಂಸ್ಕಾರವನ್ನು ಭಾನುವಾರ ನೆರವೇರಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.