ETV Bharat / state

ನಾಳೆ ಚಿಂಚೋಳಿ ಕ್ಷೇತ್ರಕ್ಕೆ ಸಿದ್ದು ಆಗಮನ...ಶಿಷ್ಯನನ್ನು ಸೋಲಿಸಲು ಗುರುವಿನ ರಣತಂತ್ರ

ಚಿಂಚೋಳಿ ಕ್ಷೇತ್ರಕ್ಕೆ ಉಪಚುನಾವಣೆ ಸಮೀಪಿಸುತ್ತಿದ್ದಂತೆ ಚಿಂಚೋಳಿ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷದಿಂದ ಬರದ ಪ್ರಚಾರ ನಡೆಯುತ್ತಿದೆ. ಎರಡು ಪಕ್ಷದ ಘಟಾನುಘಟಿ ನಾಯಕರ ದಂಡೆ ಚಿಂಚೋಳಿಯತ್ತ ಮುಖ ಮಾಡಿದ್ದು, ನಾಳೆ ಉಮೇಶ್​ ಜಾಧವ್​ ವಿರುದ್ಧ ಸಿದ್ದರಾಮಯ್ಯ ತೊಡೆ ತಟ್ಟಲು ಚಿಂಚೋಳಿ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

author img

By

Published : May 9, 2019, 6:02 PM IST

ಸಿದ್ದರಾಮಯ್ಯ,ಉಮೇಶ್​ ಜಾಧವ್​

ಕಲಬುರಗಿ: ಒಂದು ಕಾಲದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪರಮ ಆಪ್ತರು ಎಂದು ಗುರುತಿಸಿಕೊಂಡಿದ್ದ ಮಾಜಿ ಶಾಸಕ ಉಮೇಶ್​ ಜಾಧವ್​ ವಿರುದ್ಧ ಸಿದ್ದರಾಮಯ್ಯ ತೊಡೆ ತಟ್ಟಲು ಚಿಂಚೋಳಿ ಕ್ಷೇತ್ರಕ್ಕೆ ಬರುತ್ತಿದ್ದು, ಶಿಷ್ಯನನ್ನು ಸೋಲಿಸಲು ಗುರು ಚಿಂಚೋಳಿ ಉಪ ಚುನಾವಣಾ ಕ್ಷೇತ್ರಕ್ಕೆ ಪ್ರಚಾರಕ್ಕಾಗಿ ಎಂಟ್ರಿ ಕೊಡುತ್ತಿದ್ದಾರೆ.

ಚಿಂಚೋಳಿ ಕ್ಷೇತ್ರಕ್ಕೆ ಉಪಚುನಾವಣೆ ಸಮೀಪಿಸುತ್ತಿದ್ದಂತೆ ಚಿಂಚೋಳಿ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​ ಪಕ್ಷದಿಂದ ಬರದ ಪ್ರಚಾರ ನಡೆಯುತ್ತಿದೆ. ಎರಡು ಪಕ್ಷದ ಘಟಾನುಘಟಿ ನಾಯಕರ ದಂಡೆ ಚಿಂಚೋಳಿಯತ್ತ ಮುಖ ಮಾಡಿದೆ. ಈಗಾಗಲೇ ಡಿಸಿಎಂ ಪರಮೇಶ್ವರ್​, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಎರಡು ದಿನಗಳ ಕಾಲ ಕ್ಷೇತ್ರದಲ್ಲಿ ಬಿಡಾರ ಹೂಡಿ ಕ್ಷೇತ್ರ ವ್ಯಾಪ್ತಿ ಪ್ರಚಾರ ನಡೆಸಿದ್ದಾರೆ. ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರಕ್ಕೆ ಆಗಮಿಸಿ ಶಿಷ್ಯನ ವಿರುದ್ಧ ರಾಜಕೀಯ ರಣತಂತ್ರ ರೂಪಿಸಲಿದ್ದಾರೆ‌.

ನಾಳೆ ಚಿಂಚೋಳಿ ತಾಲೂಕಿಗೆ ಆಗಮಿಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಕೊಂಚಾವರಂ, ಕಾಳಗಿ ಸೇರಿದಂತೆ ಇನ್ನೂ ಕೆಲವು ಹಳ್ಳಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್​ ರಾಠೋಡ್​ ಪರವಾಗಿ ಭರ್ಜರಿ ಪ್ರಚಾರ ಕೈಗೊಳ್ಳಲಿದ್ದಾರೆ. ಒಂದು ದಿನ ಇಲ್ಲಿಯೇ ವಾಸ್ತವ್ಯ ಮಾಡಿ ರಾಜಕೀಯ ತಂತ್ರಗಳನ್ನು ರೂಪಿಸಲಿದ್ದಾರೆ.

ಶತಾಯಗತಾಯ ಮಾಡಿ ಉಮೇಶ್​ ಜಾಧವ್​ ಪುತ್ರ, ಬಿಜೆಪಿ ಅಭ್ಯರ್ಥಿ ಅವಿನಾಶ್​​ ಜಾಧವ್​ ಸೋಲಿಸಲು ಕಾಂಗ್ರೆಸ್ ರಣತಂತ್ರ ಹೆಣೆಯುತ್ತಿದ್ದು, ಸಿದ್ದರಾಮಯ್ಯ ಪ್ರಮುಖ ಪಾತ್ರ ವಹಿಸಲಿದ್ದಾರೆ. ತಮ್ಮ ಕ್ಯಾಬಿನೆಟ್​ನಲ್ಲಿ ಸಂಸದೀಯ ಕಾರ್ಯದರ್ಶಿ ಹುದ್ದೆ ಕೊಟ್ಟರು ಜಾಧವ್ ತಮ್ಮ ಕೈ ಬಿಟ್ಟು ಬಿಜೆಪಿ ಸೇರಿರುವುದು ಸಿದ್ದರಾಮಯ್ಯ ಅವರಿಗೆ ಸಹಿಸದಂತಾಗಿದ್ದು, ಈ ಹಿನ್ನಲೆ ಈಗಾಗಲೇ ಲೋಕಸಭಾ ಚುನಾವಣೆ ವೇಳೆ ಜಾಧವ್​ರನ್ನು ಸೋಲಿಸಲು ತಮ್ಮ ಸಮಾಜಕ್ಕೆ ಕರೆ ಕೊಟ್ಟಿದ್ದರು. ಈಗ ಚಿಂಚೋಳಿ ಉಪ ಚುನಾವಣೆಯಲ್ಲಿ ಜಾಧವ್​ ಪುತ್ರ ಅವಿನಾಶ್​​ರನ್ನು ಸೋಲಿಸುವಂತೆ ಕರೆ ನೀಡಲು ಚಿಂಚೋಳಿ ಬರುತ್ತಿದ್ದಾರೆ‌.

ಇನ್ನು ಕಾಂಗ್ರೆಸ್ ನಾಯಕರ ತಂತ್ರಕ್ಕೆ ಬಿಜೆಪಿ ನಾಯಕರು ಪ್ರತಿತಂತ್ರ ರೂಪಿಸುತ್ತಿದ್ದಾರೆ. ವಿ ಸೋಮಣ್ಣ ನೇತೃತ್ವದಲ್ಲಿ ಕ್ಷೇತ್ರದಲ್ಲಿ ಬೀಡು ಬಿಟ್ಟು ತಮ್ಮ ಅಭ್ಯರ್ಥಿ ಪರವಾಗಿ ಬಿರುಸಿನ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಈಗಾಗಲೇ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿ ಹೋದ ಮಾಜಿ ಸಿಎಂ ಯಡಿಯೂರಪ್ಪ 12 ನೇ ತಾರೀಕಿನ ನಂತರ ಮತ್ತೊಮ್ಮೆ ಕ್ಷೇತ್ರಕ್ಕೆ ಬರಲಿದ್ದಾರೆ. ಅಲ್ಲದೆ ಶೋಭಾ ಕರಂದ್ಲಾಜೆ ಸೇರಿ ಹಲವರು ನಾಯಕರು ಚಿಂಚೋಳಿ ಕ್ಷೇತ್ರಕ್ಕೆ ಬರಲಿದ್ದಾರೆ ಎನ್ನಲಾಗುತ್ತಿದೆ.

Intro:ಕಲಬುರಗಿ: ಒಂದು ಕಾಲದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪರಮ ಆಪ್ತರು ಎಂದು ಗುರುತಿಸಿಕೊಂಡಿದ್ದ ಮಾಜಿ ಶಾಸಕ ಉಮೇಶ ಜಾಧವ ವಿರುದ್ಧವೇ ಈಗ ಸಿದ್ದರಾಮಯ್ಯ ತೊಡೆ ತಟ್ಟಲು ಚಿಂಚೋಳಿ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಶಿಷ್ಯನನ್ನು ಸೋಲಿಸಲು ಗುರು ನಾಳೆ ಚಿಂಚೋಳಿ ಉಪ ಚುನಾವಣಾ ಕ್ಷೇತ್ರಕ್ಕೆ ಎಂಟ್ರಿ ಕೊಡ್ತಿದ್ದಾರೆ.

ಹೌದು., ಇನ್ನೇನೂ ಉಪಚುನಾವಣೆ ಸಮೀಪಿಸುತ್ತಿದ್ದಂತೆ ಚಿಂಚೋಳಿ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷದಿಂದ ಬರದ ಪ್ರಚಾರ ನಡೆಯುತ್ತಿದೆ. ಎರಡು ಪಕ್ಷದ ಘಟಾನು ಘಟಿ ನಾಯಕರ ದಂಡೆ ಚಿಂಚೋಳಿಯತ್ತ ಮುಖ ಮಾಡಿದೆ. ಈಗಾಗಲೇ ಡಿಸಿಎಂ ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಎರಡು ದಿನಗಳ ಕಾಲ ಕ್ಷೇತ್ರದಲ್ಲಿ ಬಿಡಾರ ಹೂಡಿ ಕ್ಷೇತ್ರವ್ಯಾಪ್ತಿ ಪ್ರಚಾರ ನಡೆಸಿದ್ದಾರೆ. ಇದೀಗ ಬೆನ್ನಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರಕ್ಕೆ ಆಗಮಿಸಿ ಶಿಷ್ಯನ ವಿರುದ್ಧ ರಾಜಕೀಯ ರಣತಂತ್ರ ರೂಪಿಸಲಿದ್ದಾರೆ‌.

ನಾಳೆ ಚಿಂಚೋಳಿ ತಾಲೂಕಿಗೆ ಆಗಮಿಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಕೊಂಚಾವರಂ, ಕಾಳಗಿ ಸೇರಿದಂತೆ ಬೆಳಗ್ಗೆ 11 ಗಂಟೆಯಿಂದ ರಾತ್ರಿ 7 ಗಂಟೆವರೆಗೆ ಕಾಂಗ್ರೆಸ್ ಅಭ್ಯರ್ಥಿ ಸುಭಾಷ ರಾಠೋಡ ಪರವಾಗಿ ಭರ್ಜರಿ ಪ್ರಚಾರ ಕೈಗೊಳ್ಳಲಿದ್ದಾರೆ. ಅಲ್ಲದೆ ಒಂದು ದಿನ ಇಲ್ಲಿಯೇ ವಾಸ್ತವ್ಯ ಮಾಡಿ ರಾಜಕೀಯ ತಂತ್ರಗಳನ್ನು ರೂಪಿಸಲಿದ್ದಾರೆ.

ಶತಾಯಗತಾಯ ಉಮೇಶ ಜಾಧವ ಪುತ್ರ ಬಿಜೆಪಿ ಅಭ್ಯರ್ಥಿ ಅವಿನಾಶ ಜಾಧವ ಸೋಲಿಸಲು ಕಾಂಗ್ರೆಸ್ ರಣತಂತ್ರ ಹೆಣೆಯುತ್ತಿದ್ದು, ಸಿದ್ದರಾಮಯ್ಯ ಪ್ರಮುಖ ಪಾತ್ರ ವಹಿಸಲಿದ್ದಾರೆ. ತಮ್ಮ ಕ್ಯಾಬಿನೆಟ್ ನಲ್ಲಿ ಸಂಸದೀಯ ಕಾರ್ಯದರ್ಶಿ ಹುದ್ದೆ ಕೊಟ್ಟರು ಜಾಧವ ತಮ್ಮ ಕೈ ಬಿಟ್ಟು ಬಿಜೆಪಿ ಸೇರಿರುವದು ಸಿದ್ದರಾಮಯ್ಯ ಅವರಿಗೆ ಸಹಿಸದಂತಾಗಿದ್ದು, ಈ ಹಿನ್ನಲೆ ಈಗಾಗಲೇ ಲೋಕಸಭಾ ಚುನಾವಣೆ ವೇಳೆ ಜಾಧವರನ್ನು ಸೋಲಿಸಲು ತಮ್ಮ ಸಮಾಜಕ್ಕೆ ಕರೆ ಕೊಟ್ಟಿದ್ದರು. ಈಗ ಚಿಂಚೋಳಿ ಉಪ ಚುನಾವಣೆಯಲ್ಲಿ ಜಾಧವ ಪುತ್ರ ಅವಿನಾಶರನ್ನು ಸೋಲಿಸುವಂತೆ ಕರೆ ನೀಡಲು ಚಿಂಚೋಳಿ ಬರುತ್ತಿದ್ದಾರೆ‌.

ಇನ್ನು ಕಾಂಗ್ರೆಸ್ ನಾಯಕರ ತಂತ್ರಕ್ಕೆ ಪ್ರತಿತಂತ್ರ ಬಿಜೆಪಿ ನಾಯಕರು ರೂಪಿಸುತ್ತಿದ್ದಾರೆ. ವಿ ಸೋಮಣ್ಣ ನೇತೃತ್ವದಲ್ಲಿ ಕ್ಷೇತ್ರದಲ್ಲಿ ಬಿಡುಬಿಟ್ಟು ತಮ್ಮ ಅಭ್ಯರ್ಥಿ ಪರವಾಗಿ ಬಿರುಸಿನ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಈಗಾಗಲೇ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿ ಹೋದ ಮಾಜಿ ಸಿಎಂ ಯಡಿಯೂರಪ್ಪ 12 ನೇ ತಾರೀಕಿನ ನಂತರ ಮತ್ತೊಮ್ಮೆ ಕ್ಷೇತ್ರಕ್ಕೆ ಬರಲಿದ್ದಾರೆ. ಅಲ್ಲದೆ ಶೋಭಾ ಕರಂದ್ಲಾಜೆ ಸೇರಿ ಹಲವರು ನಾಯಕರು ಚಿಂಚೋಳಿ ಕ್ಷೇತ್ರಕ್ಕೆ ಬರಲಿದ್ದಾರೆ.

ಒಟ್ಟಾರೆ ಎರಡು ರಾಷ್ಟ್ರೀಯ ಪಕ್ಷಗಳು ಚಿಂಚೋಳಿ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದು ಶತಾಯಗತಾಯ ಕ್ಷೇತ್ರ ತಮ್ಮ ಮಡಲಿಗೆ ಹಾಕಿಕೊಳ್ಳುವ ಎಲ್ಲ ಪ್ರಯತ್ನ ನಡೆಸುತ್ತಿದ್ದಾರೆ. ಆದ್ರೆ ಇಲ್ಲಿವರೆಗೆ ಶಿಷ್ಯ ಜಾಧವ ಪರವಾಗಿ ಕ್ಷೇತ್ರಕ್ಕೆ ಬರುತ್ತಿದ್ದ ಸಿದ್ದರಾಮಯ್ಯ ಇದೀಗ ಮೊದಲಬಾರಿಗೆ ಶಿಷ್ಯನ ವಿರುದ್ಧ ತೊಡೆತಟ್ಟಲು ಚಿಂಚೋಳಿ ಕ್ಷೇತ್ರಕ್ಕೆ ಬರುತ್ತಿರುವದು ವಿಶೇಷವಾಗಿದೆ.

Body:ಕಲಬುರಗಿ: ಒಂದು ಕಾಲದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪರಮ ಆಪ್ತರು ಎಂದು ಗುರುತಿಸಿಕೊಂಡಿದ್ದ ಮಾಜಿ ಶಾಸಕ ಉಮೇಶ ಜಾಧವ ವಿರುದ್ಧವೇ ಈಗ ಸಿದ್ದರಾಮಯ್ಯ ತೊಡೆ ತಟ್ಟಲು ಚಿಂಚೋಳಿ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಶಿಷ್ಯನನ್ನು ಸೋಲಿಸಲು ಗುರು ನಾಳೆ ಚಿಂಚೋಳಿ ಉಪ ಚುನಾವಣಾ ಕ್ಷೇತ್ರಕ್ಕೆ ಎಂಟ್ರಿ ಕೊಡ್ತಿದ್ದಾರೆ.

ಹೌದು., ಇನ್ನೇನೂ ಉಪಚುನಾವಣೆ ಸಮೀಪಿಸುತ್ತಿದ್ದಂತೆ ಚಿಂಚೋಳಿ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷದಿಂದ ಬರದ ಪ್ರಚಾರ ನಡೆಯುತ್ತಿದೆ. ಎರಡು ಪಕ್ಷದ ಘಟಾನು ಘಟಿ ನಾಯಕರ ದಂಡೆ ಚಿಂಚೋಳಿಯತ್ತ ಮುಖ ಮಾಡಿದೆ. ಈಗಾಗಲೇ ಡಿಸಿಎಂ ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಎರಡು ದಿನಗಳ ಕಾಲ ಕ್ಷೇತ್ರದಲ್ಲಿ ಬಿಡಾರ ಹೂಡಿ ಕ್ಷೇತ್ರವ್ಯಾಪ್ತಿ ಪ್ರಚಾರ ನಡೆಸಿದ್ದಾರೆ. ಇದೀಗ ಬೆನ್ನಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರಕ್ಕೆ ಆಗಮಿಸಿ ಶಿಷ್ಯನ ವಿರುದ್ಧ ರಾಜಕೀಯ ರಣತಂತ್ರ ರೂಪಿಸಲಿದ್ದಾರೆ‌.

ನಾಳೆ ಚಿಂಚೋಳಿ ತಾಲೂಕಿಗೆ ಆಗಮಿಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಕೊಂಚಾವರಂ, ಕಾಳಗಿ ಸೇರಿದಂತೆ ಬೆಳಗ್ಗೆ 11 ಗಂಟೆಯಿಂದ ರಾತ್ರಿ 7 ಗಂಟೆವರೆಗೆ ಕಾಂಗ್ರೆಸ್ ಅಭ್ಯರ್ಥಿ ಸುಭಾಷ ರಾಠೋಡ ಪರವಾಗಿ ಭರ್ಜರಿ ಪ್ರಚಾರ ಕೈಗೊಳ್ಳಲಿದ್ದಾರೆ. ಅಲ್ಲದೆ ಒಂದು ದಿನ ಇಲ್ಲಿಯೇ ವಾಸ್ತವ್ಯ ಮಾಡಿ ರಾಜಕೀಯ ತಂತ್ರಗಳನ್ನು ರೂಪಿಸಲಿದ್ದಾರೆ.

ಶತಾಯಗತಾಯ ಉಮೇಶ ಜಾಧವ ಪುತ್ರ ಬಿಜೆಪಿ ಅಭ್ಯರ್ಥಿ ಅವಿನಾಶ ಜಾಧವ ಸೋಲಿಸಲು ಕಾಂಗ್ರೆಸ್ ರಣತಂತ್ರ ಹೆಣೆಯುತ್ತಿದ್ದು, ಸಿದ್ದರಾಮಯ್ಯ ಪ್ರಮುಖ ಪಾತ್ರ ವಹಿಸಲಿದ್ದಾರೆ. ತಮ್ಮ ಕ್ಯಾಬಿನೆಟ್ ನಲ್ಲಿ ಸಂಸದೀಯ ಕಾರ್ಯದರ್ಶಿ ಹುದ್ದೆ ಕೊಟ್ಟರು ಜಾಧವ ತಮ್ಮ ಕೈ ಬಿಟ್ಟು ಬಿಜೆಪಿ ಸೇರಿರುವದು ಸಿದ್ದರಾಮಯ್ಯ ಅವರಿಗೆ ಸಹಿಸದಂತಾಗಿದ್ದು, ಈ ಹಿನ್ನಲೆ ಈಗಾಗಲೇ ಲೋಕಸಭಾ ಚುನಾವಣೆ ವೇಳೆ ಜಾಧವರನ್ನು ಸೋಲಿಸಲು ತಮ್ಮ ಸಮಾಜಕ್ಕೆ ಕರೆ ಕೊಟ್ಟಿದ್ದರು. ಈಗ ಚಿಂಚೋಳಿ ಉಪ ಚುನಾವಣೆಯಲ್ಲಿ ಜಾಧವ ಪುತ್ರ ಅವಿನಾಶರನ್ನು ಸೋಲಿಸುವಂತೆ ಕರೆ ನೀಡಲು ಚಿಂಚೋಳಿ ಬರುತ್ತಿದ್ದಾರೆ‌.

ಇನ್ನು ಕಾಂಗ್ರೆಸ್ ನಾಯಕರ ತಂತ್ರಕ್ಕೆ ಪ್ರತಿತಂತ್ರ ಬಿಜೆಪಿ ನಾಯಕರು ರೂಪಿಸುತ್ತಿದ್ದಾರೆ. ವಿ ಸೋಮಣ್ಣ ನೇತೃತ್ವದಲ್ಲಿ ಕ್ಷೇತ್ರದಲ್ಲಿ ಬಿಡುಬಿಟ್ಟು ತಮ್ಮ ಅಭ್ಯರ್ಥಿ ಪರವಾಗಿ ಬಿರುಸಿನ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಈಗಾಗಲೇ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿ ಹೋದ ಮಾಜಿ ಸಿಎಂ ಯಡಿಯೂರಪ್ಪ 12 ನೇ ತಾರೀಕಿನ ನಂತರ ಮತ್ತೊಮ್ಮೆ ಕ್ಷೇತ್ರಕ್ಕೆ ಬರಲಿದ್ದಾರೆ. ಅಲ್ಲದೆ ಶೋಭಾ ಕರಂದ್ಲಾಜೆ ಸೇರಿ ಹಲವರು ನಾಯಕರು ಚಿಂಚೋಳಿ ಕ್ಷೇತ್ರಕ್ಕೆ ಬರಲಿದ್ದಾರೆ.

ಒಟ್ಟಾರೆ ಎರಡು ರಾಷ್ಟ್ರೀಯ ಪಕ್ಷಗಳು ಚಿಂಚೋಳಿ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದು ಶತಾಯಗತಾಯ ಕ್ಷೇತ್ರ ತಮ್ಮ ಮಡಲಿಗೆ ಹಾಕಿಕೊಳ್ಳುವ ಎಲ್ಲ ಪ್ರಯತ್ನ ನಡೆಸುತ್ತಿದ್ದಾರೆ. ಆದ್ರೆ ಇಲ್ಲಿವರೆಗೆ ಶಿಷ್ಯ ಜಾಧವ ಪರವಾಗಿ ಕ್ಷೇತ್ರಕ್ಕೆ ಬರುತ್ತಿದ್ದ ಸಿದ್ದರಾಮಯ್ಯ ಇದೀಗ ಮೊದಲಬಾರಿಗೆ ಶಿಷ್ಯನ ವಿರುದ್ಧ ತೊಡೆತಟ್ಟಲು ಚಿಂಚೋಳಿ ಕ್ಷೇತ್ರಕ್ಕೆ ಬರುತ್ತಿರುವದು ವಿಶೇಷವಾಗಿದೆ.

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.