ಕಲಬುರಗಿ: ರಸ್ತೆ ಮಧ್ಯೆ ಬಂದ ಮಹಿಳೆಯ ರಕ್ಷಣೆ ಮಾಡಲು ಹೋಗಿ ಬೈಕ್ ಮೇಲಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಭೀಮಳ್ಳಿ ಕ್ರಾಸ್ ಬಳಿ ನಡೆದಿದೆ.
ಆಳಂದ ತಾಲೂಕಿನ ಆಲೂರು(ಬಿ) ನಿವಾಸಿ ದೀಪಕ್ ಪಾಟೀಲ್ (43) ಮೃತ ದುರ್ದೈವಿ. ದೀಪಕ್ ಪಾಟೀಲ್ ಕಲಬುರಗಿಯಿಂದ ಮರಳಿ ತಮ್ಮೂರಿಗೆ ಬೈಕ್ ಮೇಲೆ ಹೋಗುವಾಗ ಭೀಮಳ್ಳಿ ಬಳಿ ದಾರಿಯಲ್ಲಿ ಅಡ್ಡ ಬಂದ ಮಹಿಳೆಗೆ ಅಪಘಾತವಾಗುವುದನ್ನ ತಪ್ಪಿಸಲು ಹೋಗಿ ಬೈಕ್ ಸ್ಕಿಡ್ ಆಗಿ ನೆಲಕ್ಕೆ ಉರುಳಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಮೃತನ ಸಂಬಂಧಿಕರ ಅಂಕ್ರಂದನ ಮುಗಿಲು ಮುಟ್ಟಿದ್ದು, ಇನ್ನು ಈ ಘಟನೆಯಲ್ಲಿ ಮಹಿಳೆಗೂ ಗಾಯವಾಗಿದ್ದು, ಸ್ಥಳಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಚಾರಿ ಪೋಲಿಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.