ಸೇಡಂ(ಕಲಬುರಗಿ): ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದ ಪ್ರಾಥಮಿಕ ಸಂಪರ್ಕಿತರ ಮಾಹಿತಿ ಪಡೆಯಲು ತೆರಳಿದ ಕೊರೊನಾ ವಾರಿಯರ್ಸ್ಗೆ, ಜನರು ಕಿರಿಕಿರಿಯನ್ನುಂಟು ಮಾಡಿರುವ ಘಟನೆ ತಾಲೂಕಿನ ಮದನಾ ಗ್ರಾಮದ ಗೋರಿಗಡ್ಡ ತಾಂಡಾದಲ್ಲಿ ನಡೆದಿದೆ.
ಕಳೆದೆರಡು ದಿನಗಳ ಹಿಂದೆ ತಾಂಡಾದ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅವರನ್ನು ಕಲಬುರಗಿಯ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿತ್ತು.
ಆದರೆ ಅವರ ಸಂಪರ್ಕಕ್ಕೆ ಬಂದ ಕೆಲವರ ಮಾಹಿತಿಯನ್ನು ಪಡೆಯಲು ತೆರಳಿದ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿಗೆ ಸಂಪರ್ಕಿತರು ಸರಿಯಾದ ಮಾಹಿತಿ ನೀಡದೆ ಸತಾಯಿಸಿದ್ದಾರೆ. ಮನೆಗೆ ತೆರಳಿದ್ರೆ, ಇಲ್ಲ ಸಲ್ಲದ ಸಬೂಬು ಹೇಳಿ ದಬಾಯಿಸಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿದ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ, ಮುಧೋಳ ಪಿಐ ಆನಂದರಾವ ತಾಂಡಾಕ್ಕೆ ತೆರಳಿ ಪ್ರಾಥಮಿಕ ಸಂಪರ್ಕಿತರ ಮನವೊಲಿಸಿ, ಮಾಹಿತಿ ಪಡೆದಿದ್ದು ಮನೆಯಲ್ಲೇ ಇರುವಂತೆ ಸೂಚಿಸಿದ್ದಾರೆ.