ಕಲಬುರಗಿ: ಬಸವ ತತ್ವ ಪರಿಪಾಲಕ, ಮಹಾ ತಪಸ್ವಿಯಾದ ಗದ್ದುಗೆ ಮಠದ ರೇವಣಸಿದ್ಧ ಮಹಾಸ್ವಾಮಿಗಳು ಇಂದು ಲಿಂಗೈಕ್ಯರಾಗಿದ್ದಾರೆ.
75ವರ್ಷದವರಾದ ಶ್ರೀಗಳು, ವಯೋಸಹಜ ಕಾಯಿಲೆಯಿಂದ ಬಳತ್ತಿದ್ದು ಇಂದು ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಶ್ರೀಗಳ ಮಾರ್ಗ ದರ್ಶನದಲ್ಲಿ ಕಲಬುರಗಿಯ ಮಕ್ತಂಪೂರ್ ಹಾಗೂ ಹುಬ್ಬಳ್ಳಿ ಮಠದಲ್ಲಿ ದಾಸೋಹ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳು ನಿರಂತರ ನಡೆಯುತ್ತಿದ್ದವು. ಶ್ರೀಗಳು ಭಕ್ತರ ಪಾಲಿಗೆ ಸದ್ಗುರುವಾಗಿ, ಕಾಮಧೇನು, ಕಲ್ಪವೃಕ್ಷವಾಗಿ ಹಾಗು ಬಡವರ ದುಃಖ, ಕಷ್ಟಗಳ ನಿವಾರಿಸುತ್ತಿದ್ದರು. ಸ್ವಾಮೀಜಿಗಳನ್ನು ಕಳೆದುಕೊಂಡ ಭಕ್ತಿವೃಂದ ಶೋಕ ಸಾಗರದಲ್ಲಿ ಮುಳುಗಿದೆ.

ಬಸವ ತತ್ವಗಳ ಆಚರಣೆಯ ಮತ್ತು ರಾಷ್ಟ್ರೀಯ ಐಕ್ಯತೆ, ಸ್ವದೇಶಿ, ಸ್ವಾವಲಂಬನೆಗಳಂತಹ ವಿಚಾರಗಳ ಸಾರುವ ಉನ್ನತ ಚಿಂತನೆ ಮತ್ತು ಸರಳ ಜೀವಿಗಳಾಗಿದ್ದ ಶ್ರೀಗಳ ಅಗಲಿಕೆ ಭಕ್ತರಿಗೆ ಮಾತ್ರವಲ್ಲದೆ ಕಲ್ಯಾಣ ಕರ್ನಾಟಕಕ್ಕೆ ತುಂಬಲಾರದ ನಷ್ಟವಾಗಿದೆ.