ETV Bharat / state

Watch... ಆಕಸ್ಮಿಕ ಅಗ್ನಿ ಅವಘಡ: ಲಕ್ಷಾಂತರ ರೂ. ಮೌಲ್ಯದ ಕಬ್ಬು ಬೆಂಕಿಗಾಹುತಿ

ಚಿತ್ತಾಪುರ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ದುರಂತದಲ್ಲಿ ಲಕ್ಷಾಂತರ ರೂ. ಮೌಲ್ಯದ ಕಬ್ಬಿನ ಬೆಳೆ ನಾಶಗೊಂಡಿದೆ.

Sugarcane burnt in Accidental fire
ಮುತ್ತಗಾ ಗ್ರಾಮದಲ್ಲಿ ಲಕ್ಷಾಂತರ ರೂ. ಮೌಲ್ಯದ ಕಬ್ಬು ಬೆಂಕಿಗಾಹುತಿ
author img

By

Published : Mar 18, 2022, 10:59 AM IST

ಕಲಬುರಗಿ: ಆಕಸ್ಮಿಕ ಅಗ್ನಿ ಅವಘಡಕ್ಕೆ ರೈತರು ಬೆಳೆದ ಲಕ್ಷಾಂತರ ರೂ. ಮೌಲ್ಯದ ಕಬ್ಬು ಬೆಳೆ ಸುಟ್ಟು ಭಸ್ಮವಾಗಿರುವ ಘಟನೆ ಚಿತ್ತಾಪುರ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ನಡೆದಿದೆ. ಮುತ್ತಗಾ ಗ್ರಾಮದ ತಿಪ್ಪಣ್ಣ ಮುದಬುಳ, ಬಸವರಾಜ ಪಂಚಾಳ, ಚಂದ್ರಕಾಂತ ಸೇರಿದಂತೆ ಹಲವು ರೈತರು ಬೆಳೆದ ಹತ್ತಾರು ಎಕ್ಕರೆ ಕಬ್ಬು ಬೆಂಕಿಗಾಹುತಿಯಾಗಿದೆ.

ಸಮೃದ್ಧವಾಗಿ ಬೆಳೆದು ನಿಂತಿದ್ದ ಕಬ್ಬು ಹೊತ್ತಿ ಉರಿಯುವುದನ್ನು ಕಣ್ಣಾರೆ ಕಂಡ ಅನ್ನದಾತರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಕಣ್ಣ ಮುಂದೆಯೇ ಬೆಳೆ ಕಳೆದುಕೊಂಡು ನಷ್ಟಕ್ಕೆ ಸಿಲುಕಿರುವ ಅನ್ನದಾತರು ಪರಿಹಾರ ನೀಡುವಂತೆ ಅಂಗಲಾಚುತ್ತಿದ್ದಾರೆ.

ಮುತ್ತಗಾ ಗ್ರಾಮದಲ್ಲಿ ಲಕ್ಷಾಂತರ ರೂ. ಮೌಲ್ಯದ ಕಬ್ಬು ಬೆಂಕಿಗಾಹುತಿ

ಸಮಯಕ್ಕೆ ಸರಿಯಾಗಿ ಕಬ್ಬು ಕಟಾವ್​ ಮಾಡದೇ ಕೆಪಿಆರ್ ಸಕ್ಕರೆ ಫ್ಯಾಕ್ಟರಿ ಮೋಸ ಮಾಡಿದೆ. ಇದೀಗ ಆಕಸ್ಮಿಕ ಬೆಂಕಿ ಅನ್ನದಾತರ ಹೊಟ್ಟೆ ಮೇಲೆ ಬರೆ ಎಳೆದಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ: ಸುಟ್ಟಗಾಯ, ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಯುವತಿ 2021ರ ವಿಶ್ವಸುಂದರಿ ಸ್ಪರ್ಧೆ ರನ್ನರ್ ಅಪ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.