ಕಲಬುರಗಿ : ಗಣೇಶ ಚತುರ್ಥಿ ನಿಮಿತ್ತ ಅಗಸ್ಟ್ 31ರಂದು ಬೆಂಗಳೂರಿನಿಂದ ಕಲಬುರಗಿಗೆ ವಿಶೇಷ ರೈಲು ವ್ಯವಸ್ಥೆ ಕಲ್ಪಿಸುವಂತೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಆದೇಶದ ಅನುಸಾರ ವಿಶೇಷ ರೈಲು ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಮಾಡಿದೆ.
ಚತುರ್ಥಿ ದಿನದಂದು ಹಬ್ಬ ಆಚರಣೆ ತಮ್ಮ ಗ್ರಾಮಗಳಿಗೆ ಆಗಮಿಸುವ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಂಗಳೂರಿನ ಯಲಹಂಕದಿಂದ ಕಲಬುರಗಿಗೆ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ.
ಅಗಸ್ಟ್ 31ರ ಸಂಜೆ 5ಗಂಟೆಗೆ ಯಲಹಂಕದಿಂದ ಹೊರಟು ಗೌರಿಬಿದನೂರು,ಹಿಂದೂಪುರ,ಧರ್ಮಾವರಂ,ಅನಂತಪುರ,ಗುಂತಕಲ್, ಮಂತ್ರಾಲಯಂ ರೋಡ್, ರಾಯಚೂರು, ಯಾದಗಿರಿ, ವಾಡಿ ನಿಲ್ದಾಣಗಳ ಮಾರ್ಗವಾಗಿ ಚಲಿಸಲಿದೆ. 31ಕ್ಕೆ ಬೆಂಗಳೂರಿನಿಂದ ಹೊರಟ ರೈಲು ಸೆಪ್ಟೆಂಬರ್ 1ರಂದು ಬೆಳಗ್ಗೆ 4.20ಕ್ಕೆ ಕಲಬುರಗಿ ರೈಲ್ವೆ ನಿಲ್ದಾಣ ತಲುಪಲಿದೆ. ಮತ್ತೆ ಮರಳಿ ಸೆಪ್ಟೆಂಬರ್ 2ರಂದು ರಾತ್ರಿ 8.30ಕ್ಕೆ ಕಲಬುರಗಿಯಿಂದ ಹೊರಟು ಸೆಪ್ಟೆಂಬರ್ 3ರಂದು ಬೆಳಗ್ಗೆ 7.30ಕ್ಕೆ ಯಲಹಂಕ ರೀಚ್ ಆಗಲಿದೆ. ಈ ವಿಶೇಷ ರೈಲಿನಲ್ಲಿ 3 ಎಸಿ ಬೋಗಿಗಳು, 12 ಸ್ಲೀಪರ್ ಮತ್ತು ಎರಡು ಸಾಮಾನ್ಯ ಹಾಗೂ ಎರಡು ಲಗೇಜ್ ಕೋಚ್ ಸೇರಿದಂತೆ ಒಟ್ಟು 16 ಕೋಚ್ ಇರಲಿದೆ.