ಕಲಬುರಗಿ: ಬಾಬರಿ ಮಸೀದಿ ಹಾಗೂ ರಾಮ ಜನ್ಮಭೂಮಿ ವಿವಾದದ ಕುರಿತು ಸರ್ವೋಚ್ಚ ನ್ಯಾಯಾಲಯವು ತೀರ್ಪು ಹೋರಡಿಸಲ್ಲಿದ್ದು ನ್ಯಾಯಲಯದ ತೀರ್ಪು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ. ಯಾವುದೆ ರೀತಿ ಗಲಭೆಗೆ ಅನುವು ಮಾಡಿಕೊಡಬಾರದು ಎಂದು ನಗರ ಪೋಲಿಸ್ ಆಯುಕ್ತ ಎಮ್. ಎನ್ ನಾಗರಾಜ್ ತಿಳಿಸಿದರು.
ನಗರದ ಡಿಆರ್ ಮೈದಾನದಲ್ಲಿ ಕರೆದ್ದಿದ್ದ ಶಾಂತಿ, ಸೌಹಾರ್ದ ಸಭೆಯನನ್ನು ಉದ್ದೇಶಿಸಿ ಅವರು ಮಾತನಾಡಿದರು. ಬಾಬರಿ ಮಸೀದಿ ಹಾಗೂ ರಾಮಜನ್ಮಭೂಮಿ ವಿವಾದದ ಕುರಿತು ಇನ್ನೇನು ಸರ್ವೋಚ್ಚ ನ್ಯಾಯಾಲಯ ತೀರ್ಪು ಹೋರಡಿಸಲಿದೆ. ನ್ಯಾಯಲಯದ ತೀರ್ಮಾನಕ್ಕೆ ಎಲ್ಲರು ಬದ್ದರಾಗಿರಬೇಕು.ಯಾವುದೇ ಕಾರಣಕ್ಕೊ ಕೋಮುಗಲಭೆಗೆ ಅವಕಾಶ ಮಾಡಿಕೊಡಬಾರದು.ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸ್ಬುಕ್, ಟ್ವಿಟರ್ ಗಳಲ್ಲಿ ಕೋಮು ಪ್ರಚೋದನೆ ಉಂಟುಮಾಡುವಂತಹ ಪೋಸ್ಟ್ ಗಳಾಗಳಾಗಲಿ, ವೀಡಿಯೊಗಳನ್ನಾಗಲಿ ಪೋಸ್ಟ್ ಮಾಡಬಾರದು.
ಒಂದು ವೇಳೆ ನ್ಯಾಯಲದ ತೀರ್ಪು ವಿರೋಧಿ ಚಟುವಟಿಗೆಗಳು ಕಂಡು ಬಂದಲ್ಲಿ. ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ಶಾಂತಿ ಸಭೆಯಲ್ಲಿ ಡಿಸಿಪಿ ಕಿಶೋರ್ ಬಾಬು,ಎಸ್ಪಿ ವಿನಾಯಕ ಪಾಟೀಲ್, ಸೇರಿದಂತೆ,ಪೊಲೀಸ್ ಅಧಿಕಾರಿಗಳು,ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.