ಕಲಬುರಗಿ: ಸುಪಾರಿ ನೀಡಿ ಸ್ವಂತ ತಂದೆಯ ಕೊಲೆ ಮಾಡಿಸಿದ ಇಬ್ಬರು ಮಕ್ಕಳು ಸೇರಿ ಆರು ಜನರನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಸುಪಾರಿ ನೀಡಿದ ಶರಣಬಸಪ್ಪ ಹನಶೆಟ್ಟಿ, ರವಿ ಹನಶೆಟ್ಟಿ ಹಾಗೂ ಸುಪಾರಿ ಪಡೆದು ಕೊಲೆಗೈದಿದ್ದ ಅಮರ್ ಹಿಂದೋಡಿ, ಹರೀಶ ಒಂಟಿ, ಪ್ರಲ್ಹಾದ ಬಂಬೂಬಜಾರ, ಸುರೇಶ ಡೆಂಗಿ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ತಿಂಗಳ 23 ರಂದು ಗ್ರಾಮೀಣ ಠಾಣಾ ವ್ಯಾಪ್ತಿಯ ಅಷ್ಟಗಿ ಬಳಿ ಓಂಕಾರ ಹನಶೆಟ್ಟಿ ಎಂಬುವರ ಬೈಕ್ ಅಡ್ಡಗಟ್ಟಿ ಅಟೋದಲ್ಲಿ ಕರೆದೊಯ್ದು ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಲಾಗಿತ್ತು.
ಬಳಿಕ ಸುಪಾರಿ ನೀಡಿದ ಮಗ, ಆರೋಪಿ ಶರಣಬಸಪ್ಪ ಹನಶೆಟ್ಟಿ ಗ್ರಾಮೀಣ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿ ತನಿಖೆ ದಿಕ್ಕು ತಪ್ಪಿಸಲು ಯತ್ನಿಸಿದ್ದ. ಆದರೆ ತನಿಖೆ ನಡೆಸಿದ ಪೊಲೀಸರು ಇಬ್ಬರು ಮಕ್ಕಳು ಸೇರಿ ಆರು ಜನ ಆರೋಪಿಗಳನ್ನು ಹಿಡಿದು ಜೈಲಿಗೆ ಅಟ್ಟಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆ ತಂದೆ ಕೊಲೆಗೆ ಮಕ್ಕಳು ಸುಪಾರಿ ನೀಡಿದ್ದರು. ಕೊಲೆ ಮಾಡಿದ ಆರೋಪಿಗಳಲ್ಲಿ ಓರ್ವ ಅಮರ ಹಿಂದೋಡಿ ಎಂಬಾತ ಕನ್ನಡಪರ ಸಂಘಟನೆಯೊಂದರ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷನಾಗಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಲಬುರಗಿ: ತಂದೆಯ ಹತ್ಯೆಗೆ ಸುಪಾರಿ ನೀಡಿದ್ದ ಆರೋಪಿಗಳು ಅರೆಸ್ಟ್
ಕೌಟುಂಬಿಕ ಕಲಹದ ಹಿನ್ನೆಲೆ ಸ್ವಂತ ತಂದೆಯನ್ನೇ ಕೊಲೆಗೈಯ್ಯಲು ಸುಪಾರಿ ನೀಡಿದ್ದ ಆರೋಪಿಗಳನ್ನು ಕಲಬುರಗಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.