ಕಲಬುರಗಿ : ಸಾಫ್ಟವೇರ್ ತೊಂದರೆ, ಇತ್ಯಾದಿ ಕಾರಣದಿಂದಾಗಿ ಕಲಬುರಗಿ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡುವಲ್ಲಿ ನಿರೀಕ್ಷಿತ ಗುರಿ ಸಾಧಿಸಲಾಗಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜಶೇಖರ ಮಾಲಿ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ವ್ಯಾಕ್ಸಿನ್ ನೀಡಿಕೆ ಮುಂದುವರಿಸಲಾಗಿದೆ. ಎರಡು ದಿನಗಳಲ್ಲಿ 1900 ಕೊರೊನಾ ವಾರಿಯರ್ಸ್ಗೆ ಲಸಿಕೆ ನೀಡಲಾಗಿದೆ. ಆದರೆ, ಸಾಫ್ಟವೇರ್ ತೊಂದರೆಯ ಕಾರಣದಿಂದಾಗಿ ಶೇ.50ರಷ್ಟು ಮಾತ್ರ ಗುರಿ ಸಾಧಿಸಲಾಗಿದೆ.
ಕೇಂದ್ರಗಳನ್ನು ಹೆಚ್ಚಿಸಿ ಲಸಿಕೆ ಹಾಕುವ ಪ್ರಕ್ರಿಯೆ ಮುಗಿಸುವ ಯೋಚನೆ ಮಾಡಲಾಗಿತ್ತು. ಆದರೆ, ಸಾಫ್ಟವೇರ್ ತೊಂದರೆ, ಇತ್ಯಾದಿಗಳ ಕಾರಣಕ್ಕಾಗಿ ಕೇಂದ್ರ ಹೆಚ್ಚಿಸಲಾಗಿಲ್ಲ ಎಂದು ತಿಳಿಸಿದ್ದಾರೆ.
ಜಿಲ್ಲೆಯ 34 ಕೇಂದ್ರಗಳಲ್ಲಿ ಕೋವಿಡ್ ವ್ಯಾಕ್ಸಿನ್ ನೀಡಲಾಗುತ್ತಿದೆ. ಹಂತ ಹಂತವಾಗಿ ಜಿಲ್ಲೆಯ ಟಾರ್ಗೆಟ್ ಪೂರ್ಣಗೊಳಿಸಲಾಗುವುದು. ಜಿಲ್ಲೆಯಲ್ಲಿ ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಅಷ್ಟಾಗಿ ಸೈಡ್ ಎಫೆಕ್ಟ್ ಆಗಿಲ್ಲ. ಕೆಲವೊಬ್ಬರಿಗೆ ತಲೆ ನೋವು, ತಲೆ ಸುತ್ತುವಂತಹ ಘಟನೆ ನಡೆದಿವೆ. ಉಳಿದಂತೆ ಯಾವುದೇ ತೊಂದರೆಗಳಾಗಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಬಲ ಪ್ರದರ್ಶಿಸಿದ್ರೇ ಶಾಸಕಿ ಸೌಮ್ಯರೆಡ್ಡಿ!?