ಕಲಬುರಗಿ: ಜಿಲ್ಲೆಯಲ್ಲಿ ಇಂದು ಆರು ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ.
ಇಂದು ಪತ್ತೆಯಾಗಿರುವ ಪ್ರಕರಣಗಳಲ್ಲಿ ಐದು ಜನ ಮುಂಬೈ ವಲಸಿಗರಾಗಿದ್ದು, ಆಂಧ್ರಪ್ರದೇಶದಿಂದ ಬಂದಿದ್ದ ಓರ್ವ ವ್ಯಕ್ತಿಗೆ ಸೋಂಕು ತಗುಲಿದೆ.
ಸೋಂಕಿತರ ಮಾಹಿತಿ:
- ಮುಂಬೈಯಿಂದ ವಾಪಸಾದ ರೋಗಿ ನಂ-1965 (32) ಪುರುಷ
- ರೋಗಿ ನಂ-1966 (20) ಯುವಕ
- ರೋಗಿ ನಂ-1967 (48) ಪುರುಷ
- ರೋಗಿ ನಂ-1968 (50) ಮಹಿಳೆ
- ರೋಗಿ ನಂ-2000 (45) ಪುರುಷ
- ಆಂಧ್ರದಿಂದ ವಾಪಸಾದ ರೋಗಿ ನಂ-2001 (30) ಪುರುಷ
ಸೊಂಕಿತರೆಲ್ಲರಿಗೂ ಇಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಲ್ಲಿಯವರೆಗೆ ಕೊರೊನಾ ಸೋಂಕಿನಿಂದ 60 ಜನ ಗುಣಮುಖರಾಗಿದ್ದಾರೆ. ಒಟ್ಟು ಏಳು ಜನ ಸಾವುನ್ನಪ್ಪಿದ್ದು, ಇನ್ನುಳಿದ 74 ಜನ ಸೋಂಕಿತರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.