ETV Bharat / state

ಪೊಲೀಸ್ ಭದ್ರತೆಯಲ್ಲಿ ಆಳಂದ ದರ್ಗಾದಲ್ಲಿ ಸಂದಲ್, ಶಿವಲಿಂಗ ಪೂಜೆ: ಎಸ್​ಪಿ ಇಶಾ ಪಂತ್ - ಎಡಿಜಿಪಿ ಅಲೋಕ್​ ಕುಮಾರ ಭೇಟಿ

ಲಾಡ್ಲೆ ಮಶಾಕ್ ದರ್ಗಾದಲ್ಲಿ ರಾಘವ ಚೈತನ್ಯ ಶಿವಲಿಂಗ ಪೂಜೆ ಹಾಗೂ ಲಾಡ್ಲೆ ಮಶಾಕ್ ಸಂದಲ್- ಖಾಕಿ‌ ಪಡೆಯ ಬಿಗಿ ಭದ್ರತೆಯಲ್ಲಿ ಪೂಜೆ ಪ್ರಾರ್ಥನೆ- ಎಸ್​ಪಿ ಇಶಾ ಪಂತ್

Aland Dargah
ಆಳಂದ ದರ್ಗಾ
author img

By

Published : Feb 15, 2023, 12:48 PM IST

ಎಸ್​ಪಿ ಇಶಾ ಪಂತ್

ಕಲಬುರಗಿ: ಕಳೆದ ಶಿವರಾತ್ರಿ ದಿನದಂದು ಎರಡು ಕೋಮುಗಳ ಮಧ್ಯೆ ಭಾರಿ ಗಲಾಟೆಗೆ ಕಾರಣವಾಗಿದ್ದ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿನ ರಾಘವ ಚೈತನ್ಯ ಶಿವಲಿಂಗ ಪೂಜೆ ಹಾಗೂ ಲಾಡ್ಲೆ ಮಶಾಕ್ ಸಂದಲ್ ಕಾರ್ಯಕ್ರಮ ಈ ಬಾರಿ ಖಾಕಿ‌ ಪಡೆಯ ಬಿಗಿ ಭದ್ರತೆಯಲ್ಲಿ ಎರಡು ಸಮುದಾಯದ ತಲಾ 15 ಜನರಿಂದ ಪೂಜೆ‌ ಹಾಗೂ ಪ್ರಾರ್ಥನೆ ನೆರವೇರಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಎಸ್​ಪಿ ಇಶಾ ಪಂತ್​ ತಿಳಿಸಿದ್ದಾರೆ.

ತಲಾ 15 ಮಂದಿಗೆ ಅವಕಾಶ: ಕಳೆದ ಬಾರಿ ಅನಿರೀಕ್ಷಿತವಾಗಿ ಘಟನೆ ನಡೆದಿತ್ತು. ತದ ನಂತರ ಗಲಾಟೆಗೆ ಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಆದರೆ ಈ ಬಾರಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಶಿವರಾತ್ರಿಯಂದು(ಫೆ.18) ಆಂದೋಲಾ ಸಿದ್ದಲಿಂಗ ಸ್ವಾಮಿಗಳ ನೇತೃತ್ವದಲ್ಲಿ 15 ಜನರಿಗೆ ಶಿವಲಿಂಗ ಪೂಜೆಗೆ ಅನುಮತಿ ನೀಡಲಾಗಿದೆ. ಮಧ್ಯಾಹ್ನ 2 ರಿಂದ 6 ಗಂಟೆವರೆಗೆ ಪೂಜೆ ಸಲ್ಲಿಸಬಹುದಾಗಿದೆ. ಅದರಂತೆ ಅಂದು ಬೆಳಗ್ಗೆ 6 ರಿಂದ 12 ಗಂಟೆವರೆಗೆ ಮುಸ್ಲಿಂ ಸಮುದಾಯ ದರ್ಗಾದಲ್ಲಿ ಓರ್ವ ಧರ್ಮಗುರು ಸೇರಿ 15 ಜನ ಪೂಜೆ ಪ್ರಾಥನೆ ಸಲ್ಲಿಸಬಹುದಾಗಿದೆ. ವಕ್ಫ್ ಟ್ರಿಬ್ಯೂನಲ್ ನ್ಯಾಯಾಲಯ ಆದೇಶದಂತೆ ಸಂಜೆ 6 ಗಂಟೆ ನಂತರ ಸ್ಥಳದಲ್ಲಿ ಯಾರು ಇರುವಂತಿಲ್ಲ ಎಂದು ಎಸ್​ಪಿ ತಿಳಿಸಿದರು.

ಪೊಲೀಸ್​ ಬಿಗಿ ಬಂದೋಬಸ್ತ್​: ಕಳೆದ ವರ್ಷ ನಡೆದ ಅನಿರೀಕ್ಷಿತ ಗಲಾಟೆ ಹಿನ್ನೆಲೆ ಈ ಬಾರಿ‌ ಪೊಲೀಸ್ ಬಿಗಿ ಬಂದೋಬಸ್ತ್​ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ 1050 ಜನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಓರ್ವ ಎಸ್​ಪಿ, 9 ಜನ ಡಿವೈಎಸ್​ಪಿ, 26 ಮಂದಿ ಸಿಪಿಐ, 73 ಮಂದಿ ಪಿಎಸ್ಐ ಹಾಗೂ 97 ಮಂದಿ ಎಎಸ್ಐಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. 11 ಕೆಎಸ್ಆರ್‌ಪಿ, 4 ಕ್ಯೂಆರ್‌ಟಿ , ಡಿಎಆರ್ ತುಕ್ಕಡಿಗಳ ಬಳಕೆ ಮಾಡಲಾಗುತ್ತದೆ.

12ಕ್ಕಿಂತ ಅಧಿಕ ಚೆಕ್​​ ಪೋಸ್ಟ್: ಆಳಂದ ಪಟ್ಟಣದ 2 ಕಿ.ಮೀ ವ್ಯಾಪ್ತಿವರೆಗೆ ಚೆಕ್ ಪೋಸ್ಟ್​​ಗಳನ್ನು ನಿರ್ಮಾಣ ಮಾಡಲಾಗಿದೆ. ಒಟ್ಟು 12ಕ್ಕಿಂತ ಅಧಿಕ ಚೆಕ್​​ ಪೋಸ್ಟ್​​ಗಳನ್ನು ನಿರ್ಮಾಣ ಮಾಡಲಾಗಿದೆ. ಈಗಾಗಲೇ ದಿನದ 24 ಗಂಟೆಗಳ ಕಾಲ ಆಳಂದ ಪ್ರವೇಶ ಮಾಡುವ ಪ್ರತಿಯೊಂದು ವಾಹನ ತಪಾಸಣೆ ನಡೆಸಿಯೇ ನಂತರ ಪಟ್ಟಣ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ ಎಂದು ಇಶಾ ಪಂತ್​ ತಿಳಿಸಿದರು.

ಮೀಟಿಂಗ್- ರೂಟ್ ಮಾರ್ಚ್- ಡ್ರೋನ್​ ಕ್ಯಾಮರಾ ಬಳಕೆ: ಆಳಂದ ಮೋಹಲಾ ಕಮಿಟಿ ಜತೆ ಈಗಾಗಲೇ ಸಭೆ ನಡೆಸಲಾಗಿದೆ. ನ್ಯಾಯಾಲಯದ ಆದೇಶ ಪರಿಪಾಲನೆ ಮಾಡುವಂತೆ ಸಲಹೆ ಸೂಚನೆ ನೀಡಿ ಮನವರಿಕೆ ಮಾಡಿಕೊಡಲಾಗಿದೆ. ಇದಲ್ಲದೆ ಆಳಂದ ಪಟ್ಟಣದಲ್ಲಿ ಪ್ರತಿ ದಿನ ರೂಟ್ ಮಾರ್ಚ್ ಯೋಜನೆ ಮಾಡಲಾಗಿದೆ. ನಿತ್ಯ ಸಂಜೆ ಸಿಬ್ಬಂದಿ ರೂಟ್ ಮಾರ್ಚ್ ನಡೆಸಿ ಜನಸಾಮಾನ್ಯರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ. ಡ್ರೋನ್ ಕ್ಯಾಮೆರಾ ಮೂಲಕ ಆಳಂದ ಪಟ್ಟಣದ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ. ಹೈ ಡೇಫನಿಷನ್ ಡ್ರೋನ್ ಕ್ಯಾಮೆರಾಗಳ ಮೂಲಕ ಎಲ್ಲಾ ಕಾರ್ಯವೈಖರಿಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ ಎಂದರು.

ಎಡಿಜಿಪಿ ಅಲೋಕ್​ ಕುಮಾರ ಭೇಟಿ: ಕಳೆದ ಬಾರಿ ಗಲಾಟೆ ಮಾಡಿದವರ ಮೇಲೆ ಈಗಾಗಲೇ 107 ಐಪಿಸಿ ಪ್ರಕರಣ ದಾಖಲಿಸಿ ಬಾಂಡ್ ಓವರ್ ಮಾಡಲಾಗಿದೆ. ಪೊಲೀಸ್ ಇಲಾಖೆಯಿಂದ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಸ್ವತಃ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್​ ಕುಮಾರ್​ ಅವರು ಇಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ‌. ಇಂದು ನಾಳೆ ಎರಡು ದಿನ ಜಿಲ್ಲೆಯಲ್ಲಿದ್ದು ಭದ್ರತೆ ಬಗ್ಗೆ ಇನ್ನಷ್ಟು ಸಲಹೆ ಸೂಚನೆ ನೀಡಲಿದ್ದಾರೆ ಎಂದು ಇಶಾ ಪಂತ್ ವಿವರಿಸಿದರು.

ಡಿಸಿಯಿಂದ ಶಾಂತಿ ಸಭೆ: ನಿನ್ನೆ (ಮಂಗಳವಾರ) ಸಾಯಂಕಾಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ಧಾರ್ಮಿಕ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಿದ ಜಿಲ್ಲಾಧಿಕಾರಿ ಯಶವಂತ ಗುರುಕರ್, ಫೆ.18ರಂದು ಸಂದಲ್ ಪ್ರಯುಕ್ತ ಲಾಡ್ಲೆ ಮಶಾಕ್ ದರ್ಗಾದಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 12ರವರೆಗೆ ಧಾರ್ಮಿಕ ಕಾರ್ಯಕ್ರಮಗಳ ಆಚರಣೆ ಮಾಡಬಹುದು. ಒಬ್ಬ ಧರ್ಮ ಗುರು ಸೇರಿ ಒಟ್ಟು 15 ಜನರು ಭಾಗವಹಿಸಲು ಅವಕಾಶವಿದೆ. ಅದೇ ರೀತಿಯಾಗಿ ಮಹಾ ಶಿವರಾತ್ರಿ ಪ್ರಯುಕ್ತ ರಾಘವ ಚೈತನ್ ಶಿವಲಿಂಗಕ್ಕೆ ಪೂಜೆ ಮಾಡಲು ಆಂದೋಲ ಸಿದ್ದಲಿಂಗ ಸ್ವಾಮಿಜೀ ಸೇರಿ ಒಟ್ಟು 15 ಜನರು ಅಂದು ಮಧ್ಯಾಹ್ನ 2 ಗಂಟೆಯಿಂದ 6 ಗಂಟೆವರೆಗೆ ಪೂಜೆ ಸಲ್ಲಿಸಲು ವಕ್ಫ್ ಟ್ರಿಬ್ಯೂನಲ್ ಕೋರ್ಟ್ ಅವಕಾಶ ನೀಡಿದೆ. ಎಲ್ಲರೂ ಕೋರ್ಟ್ ಆದೇಶ ಪಾಲನೆ ಮಾಡಬೇಕು ಎಂದು ತಾಕೀತು ಮಾಡಿದರು. ಲಾಡ್ಲೆ ಮಶಾಕ್​​ ದರ್ಗಾದ ಸಮಾಜ ಮುಖಂಡರು ಹಾಗೂ ಆಳಂದ ಪಟ್ಟಣದ ಹಿಂದೂ ಸಮಾಜದ ಮುಖಂಡರು ಸಭೆಯಲ್ಲಿದ್ದರು.

ಇದನ್ನೂ ಓದಿ: ದರ್ಗಾದಲ್ಲಿ ಪ್ರಾರ್ಥನೆ ಹಾಗೂ ಶಿವಲಿಂಗ ಪೂಜೆಗೆ ಪ್ರತ್ಯೇಕ ಅನುಮತಿ ನೀಡಿದ ನ್ಯಾಯಾಲಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.