ಕಲಬುರಗಿ: ನಾಳೆ ಮುಸ್ಲಿಂ ಸಮುದಾಯದ ಪವಿತ್ರ ರಂಜಾನ್ ಹಬ್ಬ ಇರುವ ಹಿನ್ನೆಲೆ ಆರೋಪಿ ಸದ್ದಾಂ ಕುಟುಂಬಸ್ಥರು ಹೊಸ ಬಟ್ಟೆ ತೆಗೆದುಕೊಂಡು ಕಚೇರಿಗೆ ಆಗಮಿಸಿದ್ದರು. ಪಿಎಸ್ಐ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಆರೋಪಿ ಸದ್ದಾಂ ಸಿಐಡಿ ಕಸ್ಟಡಿಯಲ್ಲಿದ್ದಾನೆ. ಪ್ರಮುಖ ಆರೋಪಿ ದಿವ್ಯಾ ಹಾಗರಗಿಯ ಕಾರ್ ಚಾಲಕನಾಗಿ ಸದ್ದಾಂ ಕೆಲಸ ಮಾಡುತ್ತಿದ್ದ.
ಸಿಐಡಿ ಅಧಿಕಾರಿಗಳ ಅನುಮತಿ ಮೇರೆಗೆ ಕುಟುಂಬಸ್ಥರು ಹೊಸ ಬಟ್ಟೆಯನ್ನು ಸದ್ದಾಂಗೆ ನೀಡಿದರು. ಪಿಎಸ್ಐ ಪರೀಕ್ಷಾ ಅಕ್ರಮ ಪ್ರಕರಣ ಬೆಳಕಿಗೆ ಬಂದ ಕೂಡಲೇ ತೆಲೆಮರೆಸಿಕೊಂಡಿದ್ದ ದಿವ್ಯಾ ಹಾಗರಗಿ ಜೊತೆ ಕಾರ್ ಚಾಲಕ ಸದ್ದಾಂ ಕೂಡ ಇದ್ದ. ಆರೋಪಿ ದಿವ್ಯಾ ಬಂಧನದ ವೇಳೆ ಸಿಐಡಿ ಈತನನ್ನು ಬಂಧಿಸಿದೆ. ಅಕ್ರಮದಲ್ಲಿ ನೇರ ಪಾತ್ರ ಇಲ್ಲದಿದ್ರೂ ಆರೋಪಿಗಳು ತೆಲೆಮರೆಸಿಕೊಳ್ಳಲು ಸಹಕಾರ ನೀಡಿದ ಆರೋಪದ ಮೇಲೆ ಸದ್ದಾಂ ಬಂಧನವಾಗಿದೆ.
ಇದನ್ನೂ ಓದಿ: ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಸಚಿವರ ಸಹೋದರನ ಹೆಸರು : ಪ್ರತಿಕ್ರಿಯೆಗೆ ಸಿಎಂ ನಕಾರ