ETV Bharat / state

ಆಟೋ ಚಾಲಕನ ಕುಟುಂಬಕ್ಕೆ ಹರಿದು ಬಂದ ನೆರವು... ಇದು ಈಟಿವಿ ಇಂಪ್ಯಾಕ್ಟ್​ - ಈಟಿವಿ ಇಂಪ್ಯಾಕ್ಟ್​

ಕೊರೊನಾ, ಲಾಕ್​ಡೌನ್​ನಿಂದ ಕಂಗೆಟ್ಟಿದ್ದ ಆಟೋ ಚಾಲಕ ತನ್ನ ಕುಟುಂಬ ನಿರ್ವಹಣೆ ಮಾಡಲು ಸಂಕಷ್ಟ ಎದುರಿಸುತ್ತಿದ್ದರು. ಈ ಕುರಿತಂತೆ ಈಟಿವಿ ಭಾರತ ಚಾಲಕನ ಸಹಾಯಕ್ಕಾಗಿ ಕೇಳಿದ್ದ ವರದಿಯನ್ನು ಪ್ರಕಟಿಸಿದ ಬೆನ್ನಲ್ಲೇ ಚಾಲಕನ ಕುಟುಂಬಕ್ಕೆ ಪರಿಹಾರದ ಮಹಾಪೂರ ಹರಿದು ಬಂದಿದೆ.

Public helps to auto driver at Kalaburagi
ಆಟೋ ಚಾಲಕನ ಕುಟುಂಬಕ್ಕೆ ಹರಿದು ಬಂದ ನೆರವು
author img

By

Published : Apr 26, 2020, 7:59 PM IST

Updated : Apr 26, 2020, 8:49 PM IST

ಸೇಡಂ(ಕಲಬುರಗಿ): ಕೊರೊನಾ, ಲಾಕ್​ಡೌನ್​ನಿಂದ ಕಂಗೆಟ್ಟಿದ್ದ ಆಟೋ ಚಾಲಕ ತನ್ನ ಕುಟುಂಬ ನಿರ್ವಹಣೆ ಮಾಡಲು ಸಂಕಷ್ಟ ಎದುರಿಸುತ್ತಿದ್ದರು. ಈ ಕುರಿತಂತೆ ಈಟಿವಿ ಭಾರತದಲ್ಲಿ ಬಿತ್ತರಿಸಿದ್ದ ವಿಸ್ತೃತ ವರದಿ ಚಾಲಕನ ಕುಟುಂಬಕ್ಕೆ ಪರಿಹಾರದ ಮಹಾಪೂರವೇ ಹರಿದು ಬಂದಿದೆ.

ಆಟೋ ಚಾಲಕನ ಕುಟುಂಬಕ್ಕೆ ಹರಿದು ಬಂದ ನೆರವು

ಮೂಲತಃ ಸೇಡಂ ನಿವಾಸಿಯಾಗಿರುವ ಬೆಂಗಳೂರಲ್ಲಿ ಆಟೋ ಚಾಲಕನಾಗಿ ಕೆಲಸ ನಿರ್ವಹಿಸುತ್ತಿರುವ ರವಿಕುಮಾರ್,​ ಆಟೋ ಓಡಿಸಿ ತನ್ನಿಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಆದ್ರೆ ಕೊರೊನಾದಿಂದ ಆಟೋ ಸೇವೆ ಕೂಡಾ ಸ್ಥಗಿತಗೊಂಡಿದ್ದು, ಜೀವನ ನಡೆಸುವುದು ದುಸ್ತರವಾಗಿ ಸಹಾಯಕ್ಕಾಗಿ ಅಂಗಲಾಚಿದ್ದರು.

ಈ ಕುರಿತಂತೆ ಈಟಿವಿ ಭಾರತನಲ್ಲಿ 'ಲಾಕ್​ಡೌನ್​ಗೆ ದಿಕ್ಕು ತೋಚದಾದ ಕುಟುಂಬ... ಸಹಾಯಕ್ಕಾಗಿ ಅಂಗಲಾಚಿದ ಆಟೋ ಚಾಲಕ' ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿತ್ತು. ಇದನ್ನು ಓದಿದ ಸೇಡಂ ನಿವಾಸಿ ಪ್ರಶಾಂತ್​​ ಕೇರಿ, ಅಬ್ದುಲ್​ ಸತ್ತಾರ ಆರ್ಥಿಕ ನೆರವು ನೀಡಿದ್ದಾರೆ. ಅಷ್ಟೇ ಅಲ್ಲದೆ ವರದಸ್ವಾಮಿ ಹಿರೇಮಠ ಎಂಬುವರು ಬೆಂಗಳೂರಿನ ಯಶವಂತಪುರ ಪೊಲೀಸ್ ಸಿಬ್ಬಂದಿಯನ್ನು ಸಂಪರ್ಕಿಸಿ ಧವಸ ಧಾನ್ಯ ಹಾಗೂ ಅಡುಗೆ ಸಾಮಗ್ರಿಗಳನ್ನು ಕಳುಹಿಸಿದ್ದಾರೆ.

ಲಾಕ್​ಡೌನ್​ಗೆ ದಿಕ್ಕು ತೋಚದಾದ ಕುಟುಂಬ... ಸಹಾಯಕ್ಕಾಗಿ ಅಂಗಲಾಚಿದ ಆಟೋ ಚಾಲಕ

ತಮ್ಮ ಕುಟುಂಬದ ನೆರವಿಗೆ ಸ್ಪಂದಿಸಿದ ಜನರಿಗೆ ಮತ್ತು ವರದಿ ಪ್ರಕಟಿಸಿದ್ದ ಈಟಿವಿ ಭಾರತಕ್ಕೆ ಚಾಲಕ ರವಿಕುಮಾರ್​ ಧನ್ಯವಾದ ಅರ್ಪಿಸಿದ್ದಾರೆ.​ ಆಟೋ ಚಾಲಕನ ಕಷ್ಟಕ್ಕೆ ಸ್ಪಂದಿಸಿದ ಓದುಗರಿಗೆ ಈಟಿವಿ ಭಾರತನಿಂದ ಧನ್ಯವಾದ ತಿಳಿಸುತ್ತೇನೆ.

Last Updated : Apr 26, 2020, 8:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.