ETV Bharat / state

ಪರೀಕ್ಷಾ ಅಕ್ರಮ: ಆರ್‌.ಡಿ.ಪಾಟೀಲ್ ಸೇರಿ 12 ಆರೋಪಿಗಳ ಮೇಲೆ ಕೋಕಾ ಆ್ಯಕ್ಟ್‌ನಡಿ ಪ್ರಕರಣ

ಪರೀಕ್ಷಾ ಅಕ್ರಮದಲ್ಲಿ ತೊಡಗಿದ್ದ ಪ್ರಮುಖ ಆರೋಪಿ ಆರ್‌.ಡಿ.ಪಾಟೀಲ್ ಸೇರಿ ಹನ್ನೆರಡು ಜನರ ಮೇಲೆ ಕೋಕಾ ಆ್ಯಕ್ಟ್ ಜಾರಿಗೊಳಿಸಲಾಗಿದೆ.

ಆರ್‌ ಡಿ ಪಾಟೀಲ್
ಆರ್‌ ಡಿ ಪಾಟೀಲ್
author img

By ETV Bharat Karnataka Team

Published : Dec 20, 2023, 9:17 PM IST

ಕಲಬುರಗಿ: ಪಿಎಸ್ಐ ನೇಮಕಾತಿ‌ ಪರೀಕ್ಷೆ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ಎಸಗಿದ ಪ್ರಮುಖ ಆರೋಪಿ ಆರ್‌.ಡಿ.ಪಾಟೀಲ್ ಸೇರಿ 12 ಜನ ಆರೋಪಿಗಳ ಮೇಲೆ ಕೋಕಾ ಆ್ಯಕ್ಟ್ ಜಾರಿಗೊಳಿಸಲಾಗಿದೆ. ಪದೇ ಪದೇ ಒಂದೇ ರೀತಿಯ ಅಪರಾಧ ಕೃತ್ಯ ಮುಂದುವರೆಸುವವರ ವಿರುದ್ದ (ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ) ಕೋಕಾ ಅಸ್ತ್ರ ಪ್ರಯೋಗಿಸಲಾಗುತ್ತದೆ.‌ ಅಶೋಕ ನಗರ ಠಾಣೆ ವ್ಯಾಪ್ತಿಯ ಖಾಸಗಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಬಳಸಿದ ಸಂಬಂಧ ಪರೀಕ್ಷಾ ಅಭ್ಯರ್ಥಿಗಳು ಸೇರಿ 15 ಜನರ ವಿರುದ್ದ ಪ್ರಕರಣ ದಾಖಲಾಗಿತ್ತು. ಮೂವರು ಅಭ್ಯರ್ಥಿಗಳನ್ನು ಬಿಟ್ಟು ಸಿಐಡಿ ಪೊಲೀಸರು ಹನ್ನೆರಡು ಆರೋಪಿಗಳ ವಿರುದ್ಧ ಕೋಕಾ ಆ್ಯಕ್ಟ್‌ನಡಿ ಪ್ರಕರಣ ದಾಖಲಿಸಿದ್ದಾರೆ.

ಕಿಂಗ್​ಪಿನ್‌ ಆರ್.ಡಿ.ಪಾಟೀಲ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಗಾಗಿ ಪ್ರಾಂಶುಪಾಲರನ್ನು ಭೇಟಿ ಮಾಡಿದ್ದ ಸಂತೋಷ ಕಟ್ಟೋಳಿ, ಡೀಲ್ ಮಾಡಿಕೊಂಡ ಅಭ್ಯರ್ಥಿಗಳ ಪಟ್ಟಿ ಮಾಡುತ್ತಿದ್ದ ಶಶಿಧರ ಜಮಾದಾರ, ಬ್ಲೂಟೂತ್ ಡಿವೈಸ್ ತರಿಸಿಕೊಂಡು ಅಭ್ಯರ್ಥಿಗಳಿಗೆ ಪೂರೈಸುತ್ತಿದ್ದ ಸಾಗರ್, ಜೇವರ್ಗಿ ತಾಲೂಕು ನೆಲೋಗಿ ಮೂಲದ ಬೆಳಗಾವಿ ಜಿಲ್ಲೆ ಅಥಣಿಯ ಸಣ್ಣ ನೀರಾವರಿ ಇಲಾಖೆಯ ಎಇ ಆಗಿದ್ದ ರುದ್ರಗೌಡ, ರಾಯಲ್‌ ಪಬ್ಲಿಕ್ ಶಾಲಾ ಕೇಂದ್ರದ ಮುಖ್ಯಸ್ಥನಾಗಿದ್ದ ಚಂದ್ರಕಾಂತ ಬುರಕಲ್, ಕಸ್ಟೋಡಿಯನ್ ಬಸಣ್ಣ ಪೂಜಾರಿ, ಶಿವಕುಮಾರ್, ಸಿದ್ರಾಮ ಕೋಳಿ, ರವಿಕುಮಾರ್, ರಹೀಂ ಚೌಧರಿ, ಬಸವರಾಜ ಎಳವಾರ ವಿರುದ್ಧ ಕೋಕಾ ಜಾರಿ ಮಾಡಲಾಗಿದೆ.

ಕೋಕಾ ಜಾರಿ ಮಾಡಿ ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಸಿಐಡಿ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಇದರಿಂದಾಗಿ ಆರ್.ಡಿ.ಪಾಟೀಲ್ ಸೇರಿ ಹನ್ನೆರಡು ಆರೋಪಿಗಳಿಗೆ ಜಾಮೀನು ಸಿಗುವುದು ಬಹಳ ದುರ್ಲಭವಾಗುತ್ತದೆ. ಈ ಕಾಯ್ದೆ ಅಡಿ ಆರೋಪ ಸಾಬೀತಾದರೆ ಐದು ವರ್ಷದಿಂದ ಜೀವಾವಧಿ ಶಿಕ್ಷೆವರೆಗೆ ಶಿಕ್ಷೆಯಾಗುವ ಸಾಧ್ಯತೆ ಕೂಡಾ ಇದೆ.

ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ: ಕಿಂಗ್‌ಪಿನ್‌ ಆರ್.ಡಿ.ಪಾಟೀಲ್‌ ವಿರುದ್ದ ಹೊಸ ಪ್ರಕರಣ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.