ಕಲಬುರಗಿ: ಉತ್ತಮ ಫಸಲು ಬರಲೆಂದು ಖಾಸಗಿ ಕ್ರಿಮಿನಾಶಕ ಸಿಂಪಡಣೆ ಮಾಡಿದರೆ ಫಸಲು ಬರುವ ಬದಲು ಬೆಳೆಯೇ ಸಂಪೂರ್ಣ ಹಾಳಾದ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹೀರಾಮಣಿ ತಾಂಡಾದಲ್ಲಿ ನಡೆದಿದೆ.
ಇಲ್ಲಿನ ರೈತ ದಶರಥ ಎಂಬಾತ ಹದಿನೈದು ದಿನದ ಹಿಂದೆ ತನ್ನ 18 ಎಕರೆ ಜಮೀನಿನಲ್ಲಿ ತೊಗರಿ ಬೆಳೆದಿದ್ದ. ಉತ್ತಮ ಫಸಲು ಬರಲೆಂದು ಖಾಸಗಿ ಕಂಪನಿಯ ಪ್ರೋಟಾನ್ ಮತ್ತು ಬಲವಾನ್ ಎಂಬ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದ. ಆದರೆ, ಸಿಂಪಡಣೆ ಬಳಿಕ ಕ್ರಿಮಿಗಳು ಕಡಿಮೆಯಾಗುವ ಬದಲು ಬೆಳೆಯೇ ಸಂಪೂರ್ಣ ಒಣಗಿ ಹಾಳಾಗಿದೆ ಎಂದು ರೈತ ದೂರಿದ್ದಾನೆ.
ಸಾಕಷ್ಟು ಹಣ ಖರ್ಚು ಮಾಡಿ ಬೆಳೆ ಬೆಳೆಯಲಾಗಿತ್ತು. ಉತ್ತಮ ಫಸಲು ನಿರೀಕ್ಷಿಸಲಾಗಿತ್ತು. ಆದರೆ, ಈ ಖಾಸಗಿ ಕ್ರಿಮಿ ನಾಶಕದಿಂದ ನನಗೆ ಅತಂತ್ರದ ಪರಿಸ್ಥಿತಿ ಎದುರಾಗಿದೆ. ಕೂಡಲೇ ಈ ಔಷಧ ಕಂಪನಿಯ ವಿರುದ್ದ ಕ್ರಮಕ್ಕೆ ಕೈಗೊಳ್ಳುವಂತೆ ಆಗ್ರಹಿಸಿದ್ದಾನೆ.