ಕಲಬುರಗಿ: ಪಾದಚಾರಿ ರಸ್ತೆಯಲ್ಲಿ ವ್ಯಾಪಾರಕ್ಕೆ ಕುಳಿತಿದ್ದ ಅಜ್ಜಿಯ ಕಾಲ ಮೇಲೆ ಪೊಲೀಸ್ ಜೀಪ್ ಹರಿದಿದೆ. ಅಜ್ಜಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಈ ದೃಶ್ಯ ಸಿಸಿ ಟಿವಿಯೊಂದರಲ್ಲಿ ಸೆರೆಯಾಗಿದೆ.
ನಗರದ ಹೊಸ ಜೇವರ್ಗಿ ರಸ್ತೆಯ ಪಾದಚಾರಿ ಮಾರ್ಗದಲ್ಲಿ ತಾರಪೈಲ್ ಬಡಾವಣೆ ನಿವಾಸಿ ಪುಷ್ಪಾವತಿ ಎಂಬುವರು ಕಡಲೆ ಗಿಡಗಳನ್ನು ಮಾರುತ್ತಿದ್ದರು. ಏಕಾಏಕಿ ನುಗ್ಗಿದ ಪೊಲೀಸ್ ಜೀಪ್ ಅಜ್ಜಿಯ ಪಾದದ ಮೇಲೆ ಹರಿದಿದೆ. ಇದರಿಂದ ಅಜ್ಜಿಗೆ ಸಣ್ಣ, ಪುಟ್ಟ ಗಾಯಗಳಾಗಿದ್ದು, ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸ್ ವಾಹನದ ಆ್ಯಕ್ಸಲ್ ಕಟ್ಟಾದ ಪರಿಣಾಮ, ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ ಎನ್ನಲಾಗ್ತಿದೆ. ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.