ETV Bharat / state

ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಕಾನ್ಸ್​ಟೇಬಲ್‌ಗಳು ಅಮಾನತು: ಎಸ್​ಪಿ ಆದೇಶ - Lokayukta rain in kalaburagi

ಲೋಕಾಯುಕ್ತ ಬಲೆಗೆ ಬಿದ್ದ ಕಾನ್ಸ್​ಟೇಬಲ್​​ಗಳನ್ನು ಎಸ್​ಪಿ ಇಶಾ ಪಂತ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಎಸ್​ಪಿ ಆದೇಶ
ಎಸ್​ಪಿ ಆದೇಶ
author img

By

Published : Sep 24, 2022, 4:19 PM IST

ಕಲಬುರಗಿ: ಮರಳು ಸಾಗಣೆಗೆ ಅನುಮತಿ‌ ನೀಡಲು ಲಂಚ ಪಡೆಯುವಾಗ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದ ಇಬ್ಬರು ಪೋಲಿಸ್ ಕಾನ್ಸ್​ಟೇಬಲ್‌ಗಳನ್ನು ಅಮಾನತುಗೊಳಿಸಿ ಎಸ್​ಪಿ ಇಶಾ ಪಂತ್ ಆದೇಶ ಹೊರಡಿಸಿದ್ದಾರೆ.

ಜೇವರ್ಗಿ ಠಾಣೆಯ ಕಾನ್ಸ್​ಟೇಬಲ್ ಶಿವರಾಯ ಅರಳಗುಂಡಗಿ ಹಾಗೂ ಅವ್ವಣ್ಣ ಅಮಾನತುಗೊಂಡವರು. ಮರಳು ಸಾಗಣೆಗೆ ಅನುಮತಿ ನೀಡಲು ಶಹಾಪುರ ಮೂಲದ ಅಖಿಲ್ ಎಂಬುವರಿಗೆ ಲಂಚದ ಬೇಡಿಕೆ ಇಟ್ಟಿದ್ದರು. ಅಂತೆಯೇ ಗುರುವಾರ ಹಣ ಪಡೆಯುವಾಗ ಲೋಕಾಯುಕ್ತರು ಟ್ರ್ಯಾಪ್ ಮಾಡಿ ಕಾನ್ಸ್​ಟೇಬಲ್ ಶಿವರಾಯ ಅರಳಗುಂಡಗಿಯನ್ನು ಬಲೆಗೆ ಕೆಡವಿದ್ದರು. ಪ್ರಕರಣದಲ್ಲಿ ಅವ್ವಣ್ಣ ಕೂಡ ಭಾಗಿಯಾಗಿದ್ದರು. ಇಬ್ಬರನ್ನು ಅ.6 ರವರೆಗೂ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

(ಓದಿ: ಕಲಬುರಗಿ: ಮರಳು ಸಾಗಣೆಗೆ ಲಂಚ ಕೇಳಿದ ಪೊಲೀಸರು ಲೋಕಾಯುಕ್ತರ ಬಲೆಗೆ)

ಈ‌ ಹಿನ್ನಲೆ ಎಸ್​​ಪಿ ಇಶಾ ಪಂತ್ ಅವರು ಇಬ್ಬರು ಪೊಲೀಸ್ ಕಾನ್ಸ್​ಟೇಬಲ್​ಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

(ಓದಿ: ಪೊಲೀಸರ ಮೇಲೆ ಗಾಂಜಾ ದಂಧೆಕೋರರ ಅಟ್ಟಹಾಸ: ಕಲಬುರಗಿ ಸರ್ಕಲ್ ಇನ್ಸ್​ಪೆಕ್ಟರ್​​ ಸ್ಥಿತಿ ಚಿಂತಾಜನಕ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.