ಕಲಬುರಗಿ: ಆಳಂದ ತಾಲೂಕಿನ ಚಿಂಚನಸೂರು, ಕಲ್ಲಂಗರಗಾ ಬಳಿ ದರೋಡೆಗೆ ಹೊಂಚು ಹಾಕಿದ್ದ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ನಾಲ್ವರು ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
![Police arrested the four accused](https://etvbharatimages.akamaized.net/etvbharat/prod-images/5282333_thumbkl.jpg)
ಚಿಂಚನಸೂರು ಗ್ರಾಮದ ನಿವಾಸಿಗಳಾದ ಜೀವನ್ ಭಾವಿ (19), ಮಾಪಣ್ಣ ಮಾವಿನಕರ್ (19), ದೇವಾ@ ದೇವೆಂದ್ರ ಮಾವಿನಕರ್ (19), ಸನತ್ ಭಾವಿ (19) ಬಂಧಿತ ಆರೋಪಿಗಳು. ಇವರೆಲ್ಲ ಒಂದೇ ಗ್ರಾಮದವರಾಗಿದ್ದು, ಪರಸ್ಪರ ಸಂಬಂಧಿಗಳಾಗಿದ್ದಾರೆ.
ನರೋಣಾ ಠಾಣೆ ಪಿಎಸ್ಐ ಚೇತನ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಆರೋಪಿಗಳಿಂದ ಎರಡು ಚಾಕು, ತಲ್ವಾರ್, ನಾಲ್ಕು ಬೈಕ್ ಹಾಗೂ ಅರ್ಧ ಕೆಜಿ ಖಾರದ ಪುಡಿ ಮತ್ತು ಟಾಟಾ ಏಸ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಸಹಚರರಾದ ಸೋನಾಜಿ, ರೋಹನ್, ಶಿವು ಎಂಬ ಮೂವರು ಆರೋಪಿಗಳು ದಾಳಿ ವೇಳೆ ತಪ್ಪಿಸಿಕೊಂಡಿದ್ದು, ಅವರ ಹೆಡೆಮುರಿ ಕಟ್ಟಲು ಜಾಲ ಬೀಸಲಾಗಿದೆ. ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.