ಕಲಬುರಗಿ: ಮಾರ್ಚ್ 28ರಿಂದ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪಟ್ಟಣದಲ್ಲಿ ತಳ್ಳುವ ಗಾಡಿ ಮೂಲಕ ತರಕಾರಿ, ಹಣ್ಣು ಮಾರಾಟ ಮಾಡುವಂತೆ ಸಹಾಯಕ ಆಯುಕ್ತ ರಮೇಶ ಕೋಲಾರ ಆದೇಶಿಸಿದ್ದಾರೆ.
ಪಟ್ಟಣದ ಪುರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ತರಕಾರಿ ಮಾರುಕಟ್ಟೆ ವ್ಯಾಪಾರಿಗಳ ಸಭೆ ನಡೆಸಿದ ಅವರು, ಯಾವುದೇ ಕಾರಣಕ್ಕೂ ಬಸ್ ನಿಲ್ದಾಣ, ಊಡಗಿ ಕ್ರಾಸ್, ರೈಲ್ವೆ ನಿಲ್ದಾಣ ಹಾಗೂ ಚೌರಸ್ತಾದ ಬಳಿ ಅಂಗಡಿ ತೆರೆದು ತರಕಾರಿ ಮಾರುವಂತಿಲ್ಲ.
ತಾಲೂಕು ಆಡಳಿತ ಸೂಚಿಸುವ ಬಡಾವಣೆಗಳಿಗೆ ಗಾಡಿ ಅಥವಾ ಟಾಟಾ ಏಸ್ ಮೂಲಕ ತರಕಾರಿಯನ್ನು ಮನೆ ಮನೆಗೂ ತೆರಳಿ ಮಾರಾಟ ಮಾಡಬೇಕು. ಈ ವೇಳೆ ಕಡ್ಡಾಯವಾಗಿ ಸ್ಯಾನಿಟೈಸರ್ ಬಳಸಬೇಕು ಎಂದರು.
ಈ ವೇಳೆ ಪಿಎಸ್ಐ ಸುಶೀಲಕುಮಾರ, ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ, ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ ಉಪಸ್ಥಿತರಿದ್ದರು.