ಕಲಬುರಗಿ: ಕೊರೊನಾ ಕರ್ಫ್ಯೂ ನಡುವೆ ನಗರದಲ್ಲಿ ನಿನ್ನೆಗಿಂತ ಇಂದು ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿದೆ.
ಎಮರ್ಜನ್ಸಿ ಕೆಲಸದ ನಿಮಿತ್ತ ಕೆಲ ಮಂದಿ ಓಡಾಡಿದರೆ ಇನ್ನೊಂದಿಷ್ಟು ಜನರು ಅನಗತ್ಯವಾಗಿ ಪಾಸ್ ಅಥವಾ ಮೆಡಿಕಲ್ ಚೀಟಿ ತೋರಿಸಿ ರಸ್ತೆಯಲ್ಲಿ ತಿರುಗಾಡಿದ್ದಾರೆ. ಇದರಿಂದಾಗಿ ವಾಹನ ದಡ್ಟಣೆ ಹೆಚ್ಚಾಗಿತ್ತು.
ಅನಗತ್ಯ ಸಂಚಾರ ತಡೆಯಲು ಸ್ವತಃ ಡಿಸಿಪಿ ಕಿಶೋರ್ ಬಾಬು ರಸ್ತೆಗಿಳಿದಿದ್ದರು. ನಗರದ ಜಗತ್ ವೃತ್ತ ಸೇರಿ ಹಲವೆಡೆ ವಾಹನಗಳನ್ನು ಖುದ್ದು ತಪಾಸಣೆ ನಡೆಸಿ ಸೀಜ್ ಮಾಡಿದರು. ಅನಗತ್ಯವಾಗಿ ಹೊರಗೆ ಬಂದಿದ್ದ ಪಡ್ಡೆ ಹುಡುಗರನ್ನು ಹಿಡಿದ ಪಿಎಸ್ಐ ವಾಹಿದ್ ಕೊತ್ವಾಲ್, ಬಸ್ಕಿ ಹೊಡೆಸಿ ಹೊರಗೆ ಬರದಂತೆ ಎಚ್ಚರಿಕೆ ನೀಡಿದರು.