ಕಲಬುರಗಿ: ಆಯ ತಪ್ಪಿ ಮನೆ ಮೇಲಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆ ಆತನ ಅಂಗಾಗ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಹೀಗಾಗಿ ಇಂದು ಕಲಬುರಗಿಯಿಂದ ಹೈದರಾಬಾದ್ಗೆ ಝೀರೋ ಟ್ರಾಫಿಕ್ನಲ್ಲಿ ಯುವಕನ ಅಂಗಾಗ ರವಾನಿಸಲಾಯಿತು.
ಆಳಂದ ತಾಲೂಕಿನ ಲಾಡಮುಗಳಿ ಗ್ರಾಮದ 19 ವರ್ಷದ ಮಹೇಶ ಮನೆಯ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಕಳೆದ 7 ದಿನಗಳಿಂದ ಚಿಕಿತ್ಸೆ ನೀಡುತ್ತಿದ್ದರೂ ಯಾವುದೇ ರೀತಿಯ ಸ್ಪಂದನೆ ವ್ಯಕ್ತವಾಗಿರಲಿಲ್ಲ. ಯುವಕನ ಮೆದುಳು ಸಿಷ್ಕ್ರಿಯವಾಗಿದ್ದ ಹಿನ್ನೆಲೆಯಲ್ಲಿ ಪೋಷಕರು ಅಂಗಾಂಗ ದಾನ ಮಾಡಿ ಬೇರೊಂದು ಜೀವ ಉಳಿಸುವ ಕೆಲಸ ಮಾಡಿದ್ದಾರೆ. ಯುವಕನ ಲಿವರ್ ಅನ್ನು ಝೀರೋ ಟ್ರಾಫಿಕನಲ್ಲಿ ಹೈದ್ರಾಬಾದ್ಗೆ ರವಾನಿಸಲಾಗಿದೆ.
ಇದೀಗ ಹೈದರಾಬಾದ್ನಿಂದ ಏರ್ಲಿಫ್ಟ್ ಮೂಲಕ ಬೆಂಗಳೂರಿನ ಜೆಪಿ ನಗರದ ಆಸ್ಟರ್ ಆರ್.ವಿ ಆಸ್ಪತ್ರೆಗೆ ಲಿವರ್ ರವಾನೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.