ಕಲಬುರಗಿ : ನಗರದ ಯಮುನಾ ಕಾಲೋನಿ ಘಂಟೆ ಲೇಔಟ್ನಲ್ಲಿರುವ ಬಸವ ಮೂರ್ತಿ ತೆರವು ಕಾರ್ಯಾಚರಣೆಗೆ ಮಹಾನಗರ ಪಾಲಿಕೆ ಮುಂದಾಗಿದೆ. ಇದು ವೀರಶೈವ ಲಿಂಗಾಯತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಇಂದು ಬೆಳಗ್ಗೆಯೇ ಮೂರ್ತಿ ತೆರವಿಗೆ ಆಗಮಿಸಿದ ಪಾಲಿಕೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ.
ಮಹಾನಗರ ಪಾಲಿಕೆ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಪಾಲಿಕೆ ಹಿಂದೂ ಸಮುದಾಯದ ಆರಾಧ್ಯ ದೈವ ಬಸವ ಮೂರ್ತಿಯ ತೆರವಿಗೆ ಮುಂದಾಗಿ ವಿವಾದ ಹುಟ್ಟಿಸಿದೆ. ಸುಪ್ರೀಂಕೋರ್ಟ್ ಆದೇಶದಂತೆ ಬಸವ ಮೂರ್ತಿ ಇರುವ ದೇವಸ್ಥಾನ ತೆರವಿಗೆ ಮಹಾನಗರ ಪಾಲಿಕೆ ಮುಂದಾದಾಗ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಖಾಸಗಿ ಜಾಗದಲ್ಲಿರುವ ಬಸವ ಮೂರ್ತಿ ದೇವಸ್ಥಾನ ತೆರವು ಮಾಡುವುದು ಏಕೆ? ಅಂತಾ ದೇವಸ್ಥಾನ ತೆರವಿಗೆ ಮುಂದಾದ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಯಾವುದೇ ಮುನ್ಸೂಚನೆ ಇಲ್ಲದೆ ದೇವಸ್ಥಾನ ತೆರವಿಗೆ ಮುಂದಾಗಿದ್ದು ತಪ್ಪು. ಯಾವುದೇ ಕಾರಣಕ್ಕೂ ದೇವಸ್ಥಾನ ತೆರವಿಗೆ ಬಿಡುವುದಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದಿದ್ದರು.
ಇನ್ನೊಂದೆಡೆ ಕಲಬುರಗಿ ನಗರದ ರಿಂಗ್ ರಸ್ತೆಯ ಖರ್ಗೆ ವೃತ್ತದಲ್ಲಿ ಟೈರ್ಗೆ ಬೆಂಕಿ ಹಚ್ಚಿ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಸಗಿ ಜಾಗದಲ್ಲಿರುವ ಮೂರ್ತಿ ತೆರವು ಅನಗತ್ಯವಾಗಿದೆ. ಅಲ್ಲದೆ ಹಿಂದೂ ಸಾಂಪ್ರದಾಯದ ಪವಿತ್ರ ಶ್ರಾವಣ ಮಾಸದಲ್ಲಿ ಆರಾಧ್ಯ ದೈವ ಬಸವ ದೇವಸ್ಥಾನ ತೆರವು ಮಾಡಲು ಮುಂದಾಗಿ ಪಾಲಿಕೆ ನೋವುಂಟು ಮಾಡಿದೆ ಅಂತಾ ಕಿಡಿಕಾರಿದ್ದಾರೆ.
ಓದಿ: ಕೊರೊನಾ 3ನೇ ಅಲೆ ಭೀತಿ: ಸಿದ್ಧಾರೂಢ ಸ್ವಾಮಿಯ 92 ಪುಣ್ಯಾರಾಧನೆ ತೆಪ್ಪೋತ್ಸವ ರದ್ದು