ಕಲಬುರಗಿ: ಜಮೀನು ವಿವಾದ ಬಗೆಹರಿಸಿಕೊಳ್ಳೋಣ ಬಾ ಅಂತ ಕರೆಸಿ ಕೊಡಲಿಯಿಂದ ಕೊಚ್ಚಿ ವೃದ್ಧನ ಬರ್ಬರ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಫರತಾಬಾದ ಗರೂರು ಬಿ ಗ್ರಾಮದಲ್ಲಿ ನಡೆದಿದೆ.
ಗರೂರ ಬಿ ಗ್ರಾಮ ಹಾಗೂ ಸದ್ಯ ಕಲಬುರಗಿ ಸಮತಾ ಕಾಲೋನಿಯಲ್ಲಿ ವಾಸವಾಗಿದ್ದ ನಾಗಪ್ಪ 65 ಕೊಲೆಯಾದ ವೃದ್ಧ. ಕಳೆದ ಹಲವು ವರ್ಷಗಳಿಂದ ಸಂಬಂಧಿಕರ ಮಧ್ಯ ಜಮೀನು ವಿವಾದ ಸಾಗುತ್ತಲೇ ಬಂದಿತ್ತು. ನಿನ್ನೆ ಸಂಜೆ ಮಾತುಕತೆ ಮಾಡೋದಾಗಿ ಸಂಬಂಧಿಕರು ನಾಗಪ್ಪನನ್ನು ಜಮೀನಿಗೆ ಕರೆಸಿಕೊಂಡಿದ್ದರು. ಬಳಿಕ ಮಾತಿಗೆ ಮಾತು ಬೆಳೆದು ಐದಾರು ಜನ ಸೇರಿ ಕಟ್ಟಿಗೆ ಹಲ್ಲೆ ಮಾಡಿ ಬಳಿಕ ಕೂಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ನಾಗಪ್ಪ ಕಳೆದ ಹಲವು ವರ್ಷಗಳಿಂದ ಕಲಬುರಗಿಯ ಸಮತಾ ಕಾಲೋನಿಯಲ್ಲಿ ವಾಸವಾಗಿದ್ರು. ಈ ಹಿಂದೆ ನಾಗಪ್ಪ ಮೇಲೆ ಹಲವು ಬಾರಿ ಹಲ್ಲೆ ಯತ್ನ ಕೂಡಾ ನಡೆದಿತ್ತು ಎನ್ನಲಾಗಿದೆ. ಸ್ಥಳಕ್ಕೆ ಫರಹತಾಬಾದ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.
ಈ ಘಟನೆ ಕುರಿತು ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.