ETV Bharat / state

ಖಾಸಗಿ ಶಾಲೆಯನ್ನೂ ಮೀರಿಸುತ್ತೆ ಕಲಬುರಗಿಯ ಹೈಟೆಕ್ ಅಂಗನವಾಡಿ: ಪುಟಾಣಿಗಳಿಗೆ ಕನ್ನಡ, ಇಂಗ್ಲಿಷ್​ ಪಾಠ - ಸರ್ಕಾರಿ ಅಂಗನವಾಡಿ ಕೇಂದ್ರ

ಕಲಬುರಗಿಯಲ್ಲಿ ಹೈಟೆಕ್ ಅಂಗನವಾಡಿ - ಗಮನ ಸೆಳೆಯುತ್ತಿರುವ ನಂದಿಕೂರ್ ಗ್ರಾಮದ ಹೈಟೆಕ್ ಅಂಗನವಾಡಿ ಕೇಂದ್ರ - ಖಾಸಗಿ ಪ್ಲೇ ಹೋಮ್‌‌ಗೂ ಒಂದು ಹೆಜ್ಜೆ ಮುಂದೆ

hi tech anganwadi
ಹೈಟೆಕ್ ಅಂಗನವಾಡಿ
author img

By

Published : Dec 29, 2022, 1:14 PM IST

ಗಮನ ಸೆಳೆಯುತ್ತಿರುವ ನಂದಿಕೂರ್ ಗ್ರಾಮದ ಹೈಟೆಕ್ ಅಂಗನವಾಡಿ ಕೇಂದ್ರ

ಕಲಬುರಗಿ: ಸರ್ಕಾರಿ ಅಂಗನವಾಡಿ ಕೇಂದ್ರಗಳು ಅಂದ್ರೆ ಬಡ ಮಕ್ಕಳ ತಾಣ ಅನ್ನೋರಿಗೆ ಈ ಅಂಗನವಾಡಿ ಅಪವಾದ. ಅಚ್ಚುಕಟ್ಟಾದ ಪುಟ್ಟ ಕಟ್ಟಡ, ಗೋಡೆಗೆ ವರ್ಣರಂಜಿತ ಬಣ್ಣ, ಆಕರ್ಷಕ ಪ್ರಾಣಿ, ಪಕ್ಷಿ, ಚೋಟಾ ಭೀಮ್‌ ನಂತಹ ಮನಮೊಹಕ ಚಿತ್ರಗಳು, ನೀಟಾಗಿ ಸಮವಸ್ತ್ರ ತೊಟ್ಟು ಖುಷಿಯಿಂದ ಹಾಜರಾಗುವ ಮಕ್ಕಳನ್ನು ನೋಡಿದರೆ ಈ ಹೈಟೆಕ್ ಅಂಗನವಾಡಿ ಕೇಂದ್ರ ಖಾಸಗಿ ಕಾನ್ವೆಂಟ್‌‌ಗೆ ಸೆಡ್ಡು ಹೊಡೆಯುತ್ತಿರುವುದರಲ್ಲಿ ಅನುಮಾನವಿಲ್ಲ.

ಹೌದು, ಕಲಬುರಗಿ ತಾಲೂಕಿನ ನಂದಿಕೂರ್ ಗ್ರಾಮದಲ್ಲಿ ಇಂತಹದೊಂದು ಮಾದರಿ ಅಂಗನವಾಡಿ ಕೇಂದ್ರವಿದೆ. ಇಲ್ಲಿನ ಸಿಡಿಪಿಒ, ಅಂಗನವಾಡಿ ಕಾರ್ಯಕರ್ತೆ, ಗ್ರಾಮಸ್ಥರ ವಿಶೇಷ ಆಸಕ್ತಿಯಿಂದ ಅಂಗನವಾಡಿ ಕೇಂದ್ರ ಹೈಟೆಕ್ ಆಗಿ ಬದಲಾಗಿದೆ. ಜೊತೆಗೆ ಶಿಕ್ಷಣ, ಸ್ವಚ್ಛತೆ, ಪರಿಸರ, ಪೌಷ್ಟಿಕ ಆಹಾರ ಹಾಗೂ ಇತರ ವಿಷಯದಲ್ಲಿ ಕಾನ್ವೆಂಟ್‌ ಶಾಲೆಗಿಂತಲೂ ಒಂದು ಹೆಜ್ಜೆ ಮುಂದೆ ಇದೆ.

ಗೋಡೆ ಬರಹದಿಂದ ಮಕ್ಕಳಿಗೆ ಜ್ಞಾನಾರ್ಜನೆ: ನಂದಿಕೂರ ಅಂಗನವಾಡಿ ಕೆಂದ್ರಕ್ಕೆ ಅಚ್ಚುಕಟ್ಟಾದ ಪುಟ್ಟ ಕಟ್ಟಡವಿದೆ. ಗೋಡೆಯ ಮೇಲೆ ಸುಂದರವಾದ ಕಾಡು, ಆನೆ, ಹುಲಿ, ಚಿರತೆ, ಮಂಗ ಇತರ ಪ್ರಾಣಿ ಪಕ್ಷಿಗಳ ಚಿತ್ರ, ಛೋಟಾ ಭೀಮ್, ಪುಟಾಣಿ ಗೊಂಬೆಗಳ ಚಿತ್ರಗಳು ಹೊರಗಿನಿಂದ ಸ್ವಾಗತ ಕೊರುತ್ತವೆ. ಕೇಂದ್ರದ ಒಳಗಿನ ಗೋಡೆಯಲ್ಲಿ ಕನ್ನಡ, ಇಂಗ್ಲಿಷ್ ಅಕ್ಷರಗಳ ವರ್ಣಮಾಲೆ, ಮೇಲ್ಚಾವಣಿಗೆ ಸೌರಮಂಡಲ, ಕಾಮನಬಿಲ್ಲು ಕಣ್ಮನ ಸೇಳೆಯುತ್ತದೆ. ಜೊತೆಗೆ ರಟ್ಟಿನ ಬಾಕ್ಸ್​ಗಳಿಗೆ ಶೃಂಗರಿಸಿ ತಿಂಗಳು, ಹಬ್ಬ, ಹವಾಮಾನ ವರದಿ ಹೀಗೆ ಮಕ್ಕಳ ಜ್ಞಾನ ಹೆಚ್ಚಿಸಬಲ್ಲ ಎಲ್ಲ ಪ್ರಯತ್ನ ಮಾಡಲಾಗಿದೆ.

ಇದನ್ನೂ ಓದಿ: ಮಾದರಿ ನಿರ್ಧಾರ: ಮಗನನ್ನ ಸರ್ಕಾರಿ ಅಂಗನವಾಡಿಗೆ ಸೇರಿಸಿದ ಜಿಲ್ಲಾಧಿಕಾರಿ

ಶಿಸ್ತಿನ ಸಿಪಾಯಿಯಾದ ಮಕ್ಕಳು: ನಂದಿಕೂರ ಅಂಗನವಾಡಿ ಕೇಂದ್ರ ಮಕ್ಕಳಿಗೆ ಕೇವಲ ಮನೋರಂಜನೆ, ಊಟಕ್ಕೆ ಮಾತ್ರ ಸೀಮಿತವಾಗಿಲ್ಲ. ಶಿಸ್ತಿಗೆ ಕೂಡ ಅಷ್ಟೇ ಪ್ರಾಮುಖ್ಯತೆ ನೀಡಿದೆ. ಕಾನ್ವೆಂಟ್ ಶಾಲೆ ಮಕ್ಕಳಂತೆ ಸಮವಸ್ತ್ರ, ಬೆಲ್ಟ್, ಟೈ, ಐಡೆಂಟಿಟಿ ಕಾರ್ಡ್, ಶೂ ನೀಡಲಾಗಿದ್ದು, ಮಕ್ಕಳು ಅಂಗನವಾಡಿಗೆ ಬರುವಾಗ ನಿಯಮದಂತೆ ಟ್ರಿಮ್ ಆಗಿ ಬರ್ತಾರೆ. ಆಟದೊಂದಿಗೆ ಇಲ್ಲಿನ ಕಾರ್ಯಕರ್ತೆ ಕನ್ನಡ, ಇಂಗ್ಲಿಷ ಪಾಠ ಮಾಡ್ತಾರೆ.

ಇದರಿಂದ ಬುದ್ಧಿವೃದ್ಧಿ ಜೊತೆಗೆ ಮಕ್ಕಳ ಪಾಠ ಕಲಿಯುವ ಇಚ್ಚಾಶಕ್ತಿ ಹೆಚ್ಚುತ್ತಿದೆ. ಬೆಳಗ್ಗೆ ಎದ್ದು ಶಾಲೆಗೆ ಹೋಗೋದು ಅಂದರೆ ಮಕ್ಕಳಿಗೆ ದುರ್ಲಬ. ಆದರೆ, ಇಲ್ಲಿನ ಮಕ್ಕಳು ಬೆಳಗ್ಗೆ 9 ಗಂಟೆ ಆಗೋದನ್ನೇ ಕಾಯ್ತಿರ್ತಾರಂತೆ. ಇದಕ್ಕೆ ಕಾರಣ ಅಂಗನವಾಡಿ ಕೇಂದ್ರದಲ್ಲಿನ ಪೂರಕ ವಾತಾರಣ ಎನ್ನುತ್ತಾರೆ ಪೋಷಕರು.

ಊಟದಲ್ಲಿಯೂ ಬದ್ಧತೆ: ಅಂಗನವಾಡಿ ಕೇಂದ್ರಗಳಲ್ಲಿ ಸರಿಯಾಗಿ ಊಟ ಕೊಡಲ್ಲ, ಪೌಷ್ಟಿಕ ಆಹಾರವನ್ನು ಮಾರಿಕೊಳ್ತಾರೆ ಎಂದು ಆಗಾಗ ಆರೋಪಗಳು ಪ್ರತಿಧ್ವನಿಸುತ್ತವೆ. ಆದರೆ, ಇಲ್ಲಿನ ಅಂಗನವಾಡಿ ಇಂತಹ ಆರೋಪಗಳಿಗೆ ತದ್ವಿರುದ್ದ ಎಂದರೆ ತಪ್ಪಾಗಲಿಕ್ಕಿಲ್ಲ. ಇಲ್ಲಿಗೆ ಬರುವ ಮಕ್ಕಳನ್ನ ಅಂಗನವಾಡಿ ಕಾರ್ಯಕರ್ತೆ ತಮ್ಮ ಸ್ವಂತ ಮಕ್ಕಳಂತೆ ಕಾಣ್ತಾರೆ. ಒಳ್ಳೆಯ ಆಟ, ಪಾಠ ಮಾಡಿಸುವುದಲ್ಲದೇ ಪೌಷ್ಟಿಕ ಭರಿತ ಬಿಸಿ ಬಿಸಿ ಊಟ ಕೊಡ್ತಾರೆ‌. ಊಟಕ್ಕೂ ಮುನ್ನ ಓಂ ಅಸತೋಮ ಶಾಂತಿ ಪಠಣ ಮಾಡಿಸ್ತಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಖಾಸಗಿ ಪ್ಲೇಹೋಮ್‌ಗೆ ಇಲ್ಲಿನ ಅಂಗನವಾಡಿ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ.

ಇದನ್ನೂ ಓದಿ: ದಲಿತೆ ಎಂದು ಅನುಮತಿ ನೀಡದ ಗ್ರಾಮಸ್ಥರು: ಅಂಗನವಾಡಿಯನ್ನ ಕಾನ್ವೆಂಟ್ ರೀತಿ ಮಾಡಿ ಸವಾಲೆಸೆದ ಶಿಕ್ಷಕಿ!

ರಾಜ್ಯದಲ್ಲಿ ಹೆಚ್ಚಾಗಲಿ ಮಾದರಿ ಅಂಗನವಾಡಿ: ರಾಜ್ಯದಲ್ಲಿ ಇಂದಿಗೂ ಅದೆಷ್ಟೋ ಅಂಗನವಾಡಿ ಕೇಂದ್ರಗಳು ಜೋಪಡಿ, ಪಡಸಾಲೆ, ಪಾಳುಬಿದ್ದ ಕಟ್ಟಡಗಳಲ್ಲಿ ನಡೆಯುತ್ತಿವೆ‌. ಎಲ್ಲ ಕಡೆಗೆ ಇಂತಹ ಪೂರಕ ವಾತಾವರಣ ಸಿಕ್ಕರೆ ಬದಲಾದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಭವಿಷ್ಯವು ಉಜ್ವಲ ಆಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚೆಚ್ಚು ಹೈಟೆಕ್ ಅಂಗನವಾಡಿ ನಿರ್ಮಾಣ ಮಾಡಬೇಕು.

ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರ ಬಸ್ ಅಪಘಾತ ಹಿನ್ನೆಲೆ: ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವ ಹಾಲಪ್ಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.