ಕಲಬುರಗಿ: ಬಿಜೆಪಿ ಅನ್ನೋ ದೊಡ್ಡ ಕುಟುಂಬದಲ್ಲಿ ಇಬ್ಬರು ಮೂವರಿಗೆ ಅಸಮಾಧಾನ ಇರೋದು ಸ್ವಾಭಾವಿಕ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಮೂರ್ನಾಲ್ಕು ಜನ ಇರುವ ಮನೆಯಲ್ಲಿಯೇ ಅಸಮಾಧಾನ ಇರುತ್ತದೆ. ಯಾವುದೇ ವಿಚಾರದಲ್ಲಿ ಸ್ವಲ್ಪ ಹೆಚ್ಚು- ಕಮ್ಮಿಯಾದರೂ ಅಣ್ಣ ತಮ್ಮಂದಿರ ನಡುವೆ ಅಸಮಾಧಾನ ಹುಟ್ಟುತ್ತದೆ. ಹೀಗಿರುವಾಗ ಪಕ್ಷದಲ್ಲಿ ಅಸಮಾಧಾನ ಇರೋದು ಸಹಜ. ಇದನ್ನೆಲ್ಲ ನೋಡಿಕೊಳ್ಳಲು ಬಿಜೆಪಿ ಹೈಕಮಾಂಡ್ ಸಮರ್ಥವಾಗಿದ್ದು, ಎಲ್ಲವನ್ನು ಸರಿಪಡಿಸುತ್ತಾರೆ ಎಂದರು.
ಇದೇ ವೇಳೆ, ಅರುಣ್‌ಸಿಂಗ್ ಕೇಂದ್ರಕ್ಕೆ ಸಲ್ಲಿಸಿರುವ 80 ಪುಟದ ವರದಿ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ನನಗೆ ವರದಿ ಸಲ್ಲಿಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮಾಧ್ಯಮದಲ್ಲಿ ನೋಡಿದ್ದೇನಷ್ಟೆ. ಅರುಣ್ ಸಿಂಗ್ ಸಲ್ಲಿಸಿರುವ 80 ಪುಟಗಳ ವರದಿ ಕುರಿತಾಗಿ ಕ್ರಮ ತೆಗೆದುಕೊಳ್ಳುವವರು ಮೇಲಿದ್ದಾರೆ. ಅವರೆಲ್ಲವನ್ನೂ ನೋಡಿಕೊಳ್ಳುತ್ತಾರೆ ಎಂದರು.
ಇದನ್ನೂ ಓದಿ: CD Case: ಯುವತಿ ಹೇಳಿಕೆ ರದ್ದು ಕೋರಿ ಪೋಷಕರು ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್
ರಾಜ್ಯಕ್ಕೆ ಭೇಟಿ ನೀಡಿದ ಅರುಣ್ ಸಿಂಗ್ ರಾಜಕೀಯಕ್ಕಿಂತ ರಾಜ್ಯದ ಅಭಿವೃದ್ಧಿ ಬಗ್ಗೆ ಸಮಗ್ರ ಚರ್ಚೆ ನಡೆಸಿ ಹೋಗಿದ್ದಾರೆ. ಕಲಬುರಗಿ ಜಿಲ್ಲೆ ಕುರಿತಾಗಿ ಎರಡೂವರೆ ತಾಸು ಸಮಗ್ರ ಚರ್ಚೆ ಮಾಡಿದ್ದಾರೆ. ಸದ್ಯದ ಅಭಿವೃದ್ಧಿ ಹೇಗಿದೆ, ಮುಂದೆ ಏನೆಲ್ಲ ಮಾಡಬೇಕು ಅನ್ನೋದರ ಕುರಿತು ನನ್ನಿಂದ ಮಾಹಿತಿ ಪಡೆದಿದ್ದಾರೆ ಎಂದರು. ಇನ್ನೂ ರಮೇಶ್ ಜಾರಕಿಹೊಳಿ ಕುರಿತಾಗಿ ಕೇಳಿದ ಪ್ರಶ್ನೆಗೆ, ರಾಜಕೀಯ ಕುರಿತಾಗಿ ಯಾವುದೇ ಪ್ರಶ್ನೆಗೆ ಉತ್ತರಿಸುವುದಿಲ್ಲ ಎಂದು ಹೇಳಿ ಜಾರಿಕೊಂಡರು.