ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ಆಟೋ ಚಾಲಕನ ಹತ್ಯೆ ಮಾಡಿರುವ ಘಟನೆ ನಗರದ ಹೊರವಲಯದ ತಾಜ್ ಸುಲ್ತಾನಪುರ ರೈಲ್ವೆ ಹಳಿ ಬಳಿ ನಡೆದಿದೆ.
ಕಮಲಾಪುರ ತಾಲೂಕಿನ ಕೊಟ್ಟರಗಾ ಗ್ರಾಮದ ಜಗನ್ನಾಥ (22) ಕೊಲೆಯಾದ ವ್ಯಕ್ತಿ. ಇದೇ ತಿಂಗಳ 10 ರಂದು ಜಗನ್ನಾಥ ಕಾಣೆಯಾಗಿದ್ದ, ಈ ಕುರಿತು ನರೋಣಾ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ನಿನ್ನೆ ಸಾಯಂಕಾಲ ರೈಲ್ವೆ ಹಳಿಬಳಿ ಹೆಣವಾಗಿ ಪತ್ತೆಯಾಗಿದ್ದಾನೆ.
ಇದನ್ನೂ ಓದಿ: ಮಹಿಳೆ ಕೊಲೆ ಪ್ರಕರಣ: ಇಬ್ಬರು ಖದೀಮರ ಬಂಧನ
ಜಗನ್ನಾಥ ತನ್ನ ಸಹೋದರಿಗೆ ಚುಡಾಯಿಸಿದವರೊಂದಿಗೆ ಜಗಳವಾಡಿದ್ದ. ಇದೇ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕೊಟ್ಟರಗಾ ಗ್ರಾಮದ ನಾಗರಾಜ, ಕಲಬುರಗಿಯ ಚನ್ನವೀರ ನಗರದ ನಾಗರಾಜ ಮತ್ತು ದತ್ತು ಎಂಬಾತ ಸೇರಿ ಐವರ ವಿರುದ್ಧ ಮೃತ ಜಗನ್ನಾಥನ ಪೋಷಕರು ದೂರು ಸಲ್ಲಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.