ETV Bharat / state

ಕಲಬುರಗಿ: ಅನ್ಯಕೋಮಿನ ಯುವತಿಯನ್ನು ಪ್ರೀತಿಸಿದ ಯುವಕನ ಬರ್ಬರ ಹತ್ಯೆ - ಅನ್ಯಧರ್ಮದ ಯುವತಿಯನ್ನು ಪ್ರೀತಿಸಿದ್ದಕ್ಕೆ ಕೊಲೆ

ವಾಡಿ ಪಟ್ಟಣದ ಭೀಮನಗರ ಬಡಾವಣೆ ನಿವಾಸಿ ವಿಜಯ ಕಾಂಬಳೆ ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ.

murder in kalaburagi
ವಿಜಯ ಕಾಂಬಳೆಯ ಕೊಲೆ
author img

By

Published : May 26, 2022, 6:45 AM IST

Updated : May 26, 2022, 12:19 PM IST

ಕಲಬುರಗಿ: ಅನ್ಯಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕನನ್ನು ಬರ್ಬರವಾಗಿ ಕೊಲೆಗೈದ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ. ಭೀಮನಗರ ಬಡಾವಣೆ ನಿವಾಸಿ ವಿಜಯ ಕಾಂಬಳೆ (25) ಕೊಲೆಯಾದ ಯುವಕ. ವಿಜಯ ಅನ್ಯಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದನೆಂಬ ಕಾರಣಕ್ಕೆ ಯುವತಿಯ ಕುಟುಂಬಸ್ಥರು ಆತನ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ವಾಡಿ ಪಟ್ಟಣದಲ್ಲಿ ಓಡಾಡಿಕೊಂಡಿದ್ದ ವಿಜಯನನ್ನು ರೈಲ್ವೆ ತಡೆಗೋಡೆಯ ಹತ್ತಿರ ತಡೆದು ಜಗಳ ತೆಗೆದ ದುಷ್ಕರ್ಮಿಗಳು ಮಾರಕಾಸ್ತ್ರ, ಕಲ್ಲು, ಕಟ್ಟಿಗೆಯಿಂದ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವದಿಂದ ಒದ್ದಾಡಿದ ಯುವಕ ಸ್ಥಳದಲ್ಲೇ ಅಸುನೀಗಿದ್ದಾನೆ.

ಘಟನೆಯಿಂದ ಪಟ್ಟಣದಲ್ಲಿ ಆತಂಕದ ಛಾಯೆ ಆವರಿಸಿದೆ. ಮೃತಪಟ್ಟ ಯುವಕನ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದ ವಾಡಿ ಪೊಲೀಸರು ಹಂತಕರ ಶೋಧ ಕಾರ್ಯ ಆರಂಭಿಸಿದ್ದಾರೆ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತನ ತಾಯಿ ಮಾತನಾಡಿ, 'ಮಗ ಕೆಲಸ ಮುಗಿಸಿ ಮನೆಗೆ ಬಂದಿದ್ದ. ಯಾರೋ ಆತನಿಗೆ ಕರೆ ಮಾಡಿದರು. ಕೂಡಲೇ ಈಗ ಬರುತ್ತೇನೆಂದು ಹೇಳಿ ಹೊರಟ. ನಂತರ ನಮಗೆ ಸುದ್ದಿ ಬಂತು. ಹೋಗಿ ನೋಡುವಷ್ಟರಲ್ಲಿ ಆತ ಮೃತಪಟ್ಟಿದ್ದ. ನನ್ನ ಮಗನನ್ನು ಹೀನಾಯವಾಗಿ ಕೊಚ್ಚಿ ಕೊಲೆಗೈದಿದ್ದಾರೆ. ಆತನ ಸ್ನೇಹಿತೆಯ ಮನೆಯವರೇನೂ ಬಂದು ಬೆದರಿಸಿರಲಿಲ್ಲ. ಆದ್ರೆ ಆಕೆಯ ಅಣ್ಣ ಮಾತ್ರ ಜೀವ ಬೆದರಿಕೆ ಹಾಕಿದ್ದ' ಎಂದು ತಿಳಿಸಿದರು.

ಇದನ್ನೂ ಓದಿ: ಮದುವೆ ವಾಹನ ಪಲ್ಟಿ: 20ಕ್ಕೂ ಹೆಚ್ಚು ಮಂದಿಗೆ ಗಾಯ!

ಮೃತನ ಸಂಬಂಧಿ ರಾಜಶೇಖರ ಮಾತನಾಡಿ, 'ಈ ಮೊದಲು ಆ ಹುಡುಗಿ ಮನೆಯವರು, ನಮ್ಮ ಮನೆಯವರು ಎಲ್ಲಾ ಮಾತನಾಡಿದ್ದರು. ಏನೂ ಸಮಸ್ಯೆ ಇರಲಿಲ್ಲ. ಆದ್ರೆ ಅಚಾನಕ್​ ಆಗಿ ಹೀಗೆಲ್ಲಾ ಆಗಿ ಹೋಗಿದೆ. ನಿಖರ ಕಾರಣ ಗೊತ್ತಿಲ್ಲ' ಎಂದರು.

ಹಿಂದೂ ಪರ ಸಂಘಟನೆಯ ಈರಣ್ಣಾ ಏರಿ ಪ್ರತಿಕ್ರಿಯಿಸಿ, ನಿನ್ನೆ ರಾತ್ರಿ ಯುವಕನ ಕೊಲೆ ನಡೆದಿರುವುದು ಮಾಧ್ಯಮಗಳ ಮೂಲಕ ತಿಳಿಯಿತು. ಈ ಮೊದಲು ಇದೇ ರೀತಿಯ ಕೊಲೆಗಳಾಗಿವೆ. ಕಾಲ ಮುಂದುವರಿದಿದೆ, ಮೊಬೈಲ್​ಗಳಲ್ಲಿ ಮಾತನಾಡಿಕೊಳ್ತಾರೆ, ಪ್ರೀತಿ ಮಾಡ್ತಾರೆ. ಹಾಗೆಂದು ಕೊಲೆ ಮಾಡಿದ್ರೆ ಹೇಗೆ? ಕಾನೂನು ಇದೆಯಲ್ವಾ?. ಯುವಕನ ತಂದೆಯೂ ಮೃತಪಟ್ಟಿದ್ದಾರೆ. ಇದೀಗ ಈತನ ಕೊಲೆಯಾಗಿ ತಾಯಿಯೂ ಒಬ್ಬಂಟಿಯಾಗಿದ್ದಾರೆ. ಇಲ್ಲಿನ ಕಾನೂನು ಸುವ್ಯವಸ್ಥೆ ಗಟ್ಟಿಕೊಳ್ಳಬೇಕಿದೆ. ಈ ತಾಯಿಯ ನೆರವಿಗೆ ಸರ್ಕಾರ ಬರಬೇಕು' ಎಂದು ಮನವಿ ಮಾಡಿದರು.

Last Updated : May 26, 2022, 12:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.