ETV Bharat / state

40 ಸಾವಿರಕ್ಕೆ ಕೊಲೆ.. ಹಂತಕರ ಹೆಡೆಮುರಿ ಕಟ್ಟಲು ಸಹಾಯ ಮಾಡಿದ್ದೇ ಆ ಗುಸುಗಸು ಮಾತುಗಳು!

author img

By

Published : Mar 9, 2021, 1:10 PM IST

ಕೇವಲ 40 ಸಾವಿರಕ್ಕೆ ಕೊಲೆ ಮಾಡಿ ನಾಪತ್ತೆಯಾಗಿದ್ದ ಕೊಲೆಗಡುಕರ ಹೆಡೆಮುರಿ ಕಟ್ಟಲು ಹಂತಕರ ಗುಸುಗಸು ಮಾತುಗಳೇ ಪೊಲೀಸರಿಗೆ ಸಹಾಯ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

Murder accused arrest, Murder accused arrest after six month, Murder accused arrest after six month in Kalaburagi, Kalaburagi news, Kalaburagi murder news, ಕೊಲೆ ಆರೋಪಿಗಳು ಬಂಧನ, ಆರು ತಿಂಗಳ ಬಳಿಕ ಕೊಲೆ ಆರೋಪಿಗಳು ಬಂಧನ, ಕಲಬುರಗಿಯಲ್ಲಿ ಆರು ತಿಂಗಳ ಬಳಿಕ ಕೊಲೆ ಆರೋಪಿಗಳು ಬಂಧನ, ಕಲಬುರಗಿ ಸುದ್ದಿ, ಕಲಬುರಗಿ ಕೊಲೆ ಸುದ್ದಿ,
ಹಂತಕರ ಹೆಡೆಮುರಿ ಕಟ್ಟಲು ಸಹಾಯ ಮಾಡಿತ್ತು ಗುಸುಗಸು ಮಾತುಗಳು

ಕಲಬುರಗಿ: ಕೇವಲ 40 ಸಾವಿರ ಹಣಕ್ಕಾಗಿ ಪರಿಚಯಸ್ಥ ವ್ಯಕ್ತಿಯನ್ನ ಬರ್ಬರವಾಗಿ ಹತ್ಯೆ ಮಾಡಿ ಹೂತು ಹಾಕಿ ಏನು ಮಾಡಿಯೇ ಇಲ್ಲ ಅನ್ನೋ ಹಾಗೆ ಸೈಲೆಂಟ್ ಆಗಿದ್ದ ಖತರ್ನಾಕ ಕೊಲೆಗಡುಕರನ್ನು ಅಫಜಲಪುರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ .

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶ್ಯಾಳ ತಾಂಡಾ ನಿವಾಸಿ ಲಿಂಬಾಜಿ ರಾಠೋಡ್ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಲಿಂಬಾಜಿ ರಾಠೋಡ್ ತಾನಾಯ್ತು ತನ್ನ ಕೆಲಸ ಆಯ್ತು ಅಂತಿದ್ದ. ಆದ್ರೆ ಕಳೆದ ವರ್ಷ ಸೆಪ್ಟೆಂಬರ್‌ 1ರ ಸಂಜೆ ಈತನ ಬಳಿ ಇದ್ದ 40 ಸಾವಿರ ಹಣ ಈತನಿಗೆ ಉರುಳಾಗಿದೆ.

ಪೊಲೀಸ್​ ಅಧಿಕಾರಿ ಹೇಳಿಕೆ

ಕೊಲೆ ನಡೆದಿದ್ದು ಹೇಗೆ?

ಲಿಂಬಾಜಿ ಬಳಿಯಿದ್ದ ಹಣ ಕಿತ್ತುಕೊಳ್ಳಲು ಮೂವರು ಖದೀಮರು ಹೊಂಚುಹಾಕಿದ್ದರು. ಆ ದಿನ ಸಂಜೆ 4 ಗಂಟೆ ಸುಮಾರಿಗೆ ಹಣದೊಂದಿಗೆ ಬೈಕ್ ಮೇಲೆ ಹೊಗುತ್ತಿದ್ದ ಲಿಂಬಾಜಿಯನ್ನ ಮಾಶ್ಯಾಳ ಗ್ರಾಮದ ಹೊರವಲಯ ಶಾಲೆ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಲಿಂಬಾಜಿಗೆ ಕಂಠಪೂರ್ತಿ ಕುಡಿಸಿದ ಆರೋಪಿಗಳು ಆತನ ಬಳಿಯಿದ್ದ 40 ಸಾವಿರ ರೂ ಹಣ ಕಿತ್ತುಕೊಳ್ಳು ಯತ್ನಿಸಿದ್ದಾರೆ. ಹಣ ಕೊಡದಿದ್ದಕ್ಕೆ ಆತನ ಕತ್ತು ಹಿಸುಕಿ ನಂತ್ರ ಲಿಂಬಾಜಿ ಎದೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆದ ನಂತರ ಆರೋಪಿಗಳು ಹಣ ಕಿತ್ತುಕೊಂಡಿದ್ದಾರೆ‌.

ಗುಸು ಗುಸು ಮಾತೇ ಕೊಲೆಗಾರರಿಗೆ ತಂದಿತು ಆಪತ್ತು:

ಕೊಲೆಯ ಸಾಕ್ಷಿ ನಾಶಪಡಿಸಲು ಹಂತಕರು ಶಾಲೆಯ ಸಮೀಪದಲ್ಲಿ ಗುಂಡಿ ತೋಡಿ ಶವ ಹೂತು ಹಾಕಿದ್ದಾರೆ. ಅಲ್ಲದೇ ಬೈಕ್​​ ತಗ್ಗು ಪ್ರದೇಶದಲ್ಲಿ ಎಸೆದು ಎಸ್ಕೇಪ್ ಆಗಿದ್ದಾರೆ. ಇತ್ತ ಮನೆಯಿಂದ ಹೋದ ಗಂಡ ಮನೆಗೆ ವಾಪಸ್​ ಆಗಲಿಲ್ಲ ಅಂತಾ ಆತಂಕಗೊಂಡಿದ್ದ ಲಿಂಬಾಜಿ ಪತ್ನಿ ಸವಿತಾ ರಾಠೋಡ್ ಅಫಜಲಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡ ಪೊಲೀಸರು ಲಿಂಬಾಜಿ ಪತ್ತೆಗೆ ಜಾಲ ಬೀಸಿದ್ರು. ಆದ್ರೆ ಯಾವುದೇ ಪ್ರಯೋಜನ ಆಗಲಿಲ್ಲ. ಆದ್ರೆ ಆ ಢಾಬಾ ಒಂದರಲ್ಲಿ ನಡೆದ ಗುಸುಗುಸು ಮಾತುಗಳು ಕೊಲೆಗಡುಕ ಸಿದ್ದು, ಶರಣು ಮತ್ತು ಅಂಬರೀಶ್ನನ್ನು ಕಂಬಿ ಹಿಂದೆ ತಳ್ಳಿದೆ.

ಕೊಲೆಯಾದ ಲಿಂಬಾಜಿ ರಾಠೋಡ್

ಆ ದಿನ ಹತ್ಯೆಯಾದ ಲಿಂಬಾಜಿಗೆ ಪರಿಚಯವಿದ್ದ ಇಬ್ಬರು ವ್ಯಕ್ತಿಗಳು ಮಾಶ್ಯಾಳ ಹೊರವಲಯದ ಢಾಬಾ ಒಂದಕ್ಕೆ ಹೋಗಿದ್ದರು. ಅಲ್ಲೆ ಮತ್ತೊಂದು ಟೇಬಲ್​ನಲ್ಲಿ ಸಿದ್ದು, ಶರಣು ಮತ್ತು ಅಂಬರೀಶ್ ಮೂವರು ಹಂತಕರು ಕುಳಿತಿದ್ದರು. ಆಗಲೇ ಅವರಿಗೆ ಪೊಲೀಸರ ಕೈಗೆ ಸಿಕ್ಕಾಕೊಳ್ಳುವ ಭಯ ಶುರುವಾಗಿತ್ತು.

ಪೊಲೀಸರಿಗೆ ಸುದ್ದಿ ಮುಟ್ಟಿಸಿದ ಪತ್ನಿ

ಲಿಂಬಾಜಿ ಕೊಲೆ ಮಾಡಿದ ವಿಚಾರವನ್ನ ಮೂವರು ಗುಸುಗುಸು ಮಾತಾಡುತ್ತಿದ್ದರು. ಇದನ್ನ ಪಕ್ಕದಲ್ಲೇ ಕುಳಿತಿದ್ದ ವ್ಯಕ್ತಿಗಳಿಬ್ಬರು ವಿಷಯ ಕೇಳಿಸಿಕೊಂಡು ಲಿಂಬಾಜಿ ಪತ್ನಿ ಸವಿತಾಗೆ ತಿಳಿಸಿದ್ದರು. ಅದನ್ನೇ ಸವಿತಾ ಅಫಜಲಪುರ ಠಾಣೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಅಲರ್ಟ್ ಆದ ಪೊಲೀಸರು ಮೂವರನ್ನ ವಶಕ್ಕೆ ಪಡೆದಿದ್ದರು.

ಪೊಲೀಸರು ಆರೋಪಿಗಳ ವಿಚಾರಣೆ ನಡೆಸಿದಾಗ ಹಣಕ್ಕಾಗಿ ಕೊಲೆ ಮಾಡಿ, ಶವ ಹೂತು ಹಾಕಿರೋದಾಗಿ ಆರೋಪಿಗಳಾದ ಸಿದ್ದು, ಶರಣು, ಅಂಬರೀಶ್ ಒಪ್ಪಿಕೊಂಡಿದ್ದಾರೆ. ಈ ಕೊಲೆಗಡುಕರನ್ನ ಪೊಲೀಸರು ಕಂಬಿಹಿಂದೆ ತಳ್ಳಿದ್ದಾರೆ.

ಪರಿಚಯಸ್ಥರಿಂದಲೇ ನಡೆದಿತ್ತು ಕೊಲೆ

ಕೊಲೆಯಾದ ಲಿಂಬಾಜಿ ರಾಠೋಡ್ ಮತ್ತು ಕೊಲೆಗಡುಕರು ಒಂದೆ ಊರಿನವರಾಗಿದ್ದು ಪರಸ್ಪರ ಪರಿಚಯಸ್ಥರು. ಆದ್ರು ಕೇವಲ 40 ಸಾವಿರ ಹಣಕ್ಕಾಗಿ ಕೊಲೆ ಗೈದು ಲಿಂಬಾಜಿಯ ಹೆಂಡತಿ, ಮಕ್ಕಳು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದ್ದು ವಿಪರ್ಯಾಸ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.