ಕಲಬುರಗಿ: ಜಿಲ್ಲೆಯಲ್ಲಿ ರೆಮ್ಡಿಸಿವಿರ್ ಸ್ಟಾಕ್ ಇಲ್ಲದ ಕಾರಣ ಸ್ವತಃ ಸಂಸದ ಉಮೇಶ ಜಾಧವ್ ತಡರಾತ್ರಿ ಬೆಂಗಳೂರಿನ ಡ್ರಗ್ ಕಂಟ್ರೋಲ್ ಮುಖ್ಯಾಲಯಕ್ಕೆ ತೆರಳಿ ರೆಮ್ಡಿಸಿವಿರ್ ಔಷಧ ತೆಗೆದುಕೊಂಡು ಬಂದಿದ್ದಾರೆ.
ಬೆಂಗಳೂರು ಪ್ರವಾಸದಲ್ಲಿದ್ದ ಸಂಸದ ಉಮೇಶ್ ಜಾಧವ್, ಕಲಬುರಗಿಯ ಆಸ್ಪತ್ರೆಗಳಲ್ಲಿ ರೆಮ್ಡಿಸಿವರ್ ಲಸಿಕೆ ಸ್ಟಾಕ್ ಇಲ್ಲ ಎಂದು ಸಹಾಯಕ ಡ್ರಗ್ ಕಂಟ್ರೋಲರ್ನಿಂದ ಮಾಹಿತಿ ಪಡೆದು, ತಡರಾತ್ರಿ 1 ಗಂಟೆಗೆ ಬೆಂಗಳೂರಿನ ಡ್ರಗ್ ಕಂಟ್ರೋಲ್ ಮುಖ್ಯಾಲಯಕ್ಕೆ ತೆರಳಿ ತುರ್ತು ಅಗತ್ಯಕ್ಕಾಗಿ 350 ಬಾಟಲ್ಗಳನ್ನು ಮಂಜೂರು ಮಾಡಿಸಿ ತಮ್ಮೊಂದಿಗೆ ತೆಗೆದುಕೊಂಡು ಬಂದಿದ್ದಾರೆ.
ವಿಮಾನದ ಮೂಲಕ ಬೆಳಗ್ಗೆ 9:30ರ ಹೊತ್ತಿಗೆ ಕಲಬುರಗಿಗೆ ತಲುಪಿದ್ದಾರೆ. ಅಲ್ಲದೆ ಇಂದು ಸಾಯಂಕಾಲದವರೆಗೆ 460 ಹೆಚ್ಚುವರಿ ಬಾಟಲ್ಗಳು ಕಲಬುರಗಿಗೆ ಬರಲಿವೆ ಎಂದು ಜಾಧವ್ ತಿಳಿಸಿದ್ದಾರೆ.
ಓದಿ: ಆಕ್ಸಿಜನ್, ರೆಮ್ಡೆಸಿವಿರ್ ಕೊರತೆಯಾದರೆ ಅಧಿಕಾರಿಗಳು ಅಥವಾ ನನ್ನ ಗಮನಕ್ಕೆ ತನ್ನಿ: ಸಿಎಂ ಸೂಚನೆ